ಆಂಕರ್ ಅನುಶ್ರೀ ಮದುವೆಗೆ ರಿಷಬ್ ಶೆಟ್ಟಿ ಏಕೆ ಹೋಗಲಿಲ್ಲ? ವೇದಿಕೆಯಲ್ಲೇ ಕ್ಷಮೆ ಕೇಳಿದ್ದೇಕೆ?
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನಿನ್ನೆಯಷ್ಟೇ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕಾಂತಾರ ಪ್ರೀಕ್ವೆಲ್‌ನ ಅದ್ಧೂರಿ ಮೇಕಿಂಗ್ ಕಂಡು ಸಿನಿಮಾ ಪ್ರಿಯರು ಫುಲ್ ಫಿದಾ ಆಗಿದ್ದಾರೆ. ಕಾಂತಾರದಂತೆ ಪ್ರೀಕ್ವೆಲ್ ಕೂಡ ಬಿಗ್ ಸಕ್ಸಸ್ ಕಾಣಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಟ್ರೈಲರ್ ರಿಲೀಸ್ ಬಳಿಕ ಕಾಂತಾರ ಚಿತ್ರತಂಡ ಮೊದಲ ಬಾರಿಗೆ ಪ್ರೆಸ್‌ಮೀಟ್ ನಡೆಸಿದ್ದು, ಈ ವೇಳೆ ರಿಷಬ್ ಶೆಟ್ಟಿ ಅವರು ಆಂಕರ್ ಅನುಶ್ರೀ ಅವರಿಗೆ ವೇದಿಕೆಯಲ್ಲೇ ಕ್ಷಮೆ ಕೇಳಿದ್ದಾರೆ. ಇದಕ್ಕೆ ರಿಷಬ್ ಕಾರಣವೂ ತಿಳಿಸಿದ್ದಾರೆ.
ಕನ್ನಡದ ಹೆಸರಾಂತ ನಿರೂಪಕಿಯಾಗಿರುವ ಅನುಶ್ರೀ ಅವರೇ ನಿನ್ನೆ ನಡೆದ ಕಾಂತಾರ ಪ್ರೆಸ್‌ಮೀಟ್‌ನ ನಿರ್ವಹಿಸಿಕೊಟ್ಟರು. ಈ ವೇಳೆ ರಿಷಬ್ ಶೆಟ್ಟಿ ತನ್ನಿಂದಾದ ತಪ್ಪಿದೆ ಅನುಶ್ರೀ ಅವರಿಗೆ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅನುಶ್ರೀ ಅವರ ಹೆಸರೇಳಿ ರಿಷಬ್ ಶೆಟ್ಟಿ ಕ್ಷಮೆ ಕೇಳಿದ್ದಾರೆ.

ಆನುಶ್ರೀ ಅವರು ಕನ್ನಡದ ಟಾಪ್ ನಿರೂಪಕಿಯರಲ್ಲಿ ಒಬ್ಬರು. ಹೀಗಾಗಿ ಬಹುತೇಕ ಎಲ್ಲ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅನುಶ್ರೀ ಅವರೇ ಕಾಣಿಸಿಕೊಳ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಅನುಶ್ರೀ ಅವರ ಹವಾ ಬೇರೆಯೇ ಇದೆ. ಹೀಗಾಗಿ ಅನುಶ್ರೀ ಅಂದ್ರೆ ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ಅನುಶ್ರೀ ಅವರು ಆಗಸ್ಟ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರೋಷನ್ ಎಂಬುವವರ ಜೊತೆ ಬೆಂಗಳೂರಿನ ಹೊರವಲಯದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು.
ಅನುಶ್ರೀ ಮದುವೆಗೆ ರಿಷಬ್ ಏಕೆ ಹೋಗಲಿಲ್ಲ?
ಈ ಮದುವೆ ಅನುಶ್ರೀ ಅವರು ರಿಷಬ್ ಶೆಟ್ಟಿಗೂ ಆಮಂತ್ರಣ ನೀಡಿದ್ದರು. ಆದರೆ ರಿಷಬ್ ಅವರು ಅನುಶ್ರೀ ಅವರ ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಕಾಂತಾರ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಬಂದ ಕಾರಣ ರಿಷಬ್ ಅವರು ಅನುಶ್ರೀ ಮದುವೆಗೆ ಹೋಗಲು ಆಗಿರಲಿಲ್ಲ. ಮೂರು ತಿಂಗಳಿನಿಂದಲೂ ಕಾಂತಾರ ಸಿನಿಮಾಗಾಗಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ರಿಷಬ್ ಹೇಳಿಕೊಂಡರು. ಸಿಕ್ಕಾಪಟ್ಟೆ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ರಿಷಬ್ ಅವರು ಅನುಶ್ರೀ ಅವರ ಮದುವೆಗೆ ಬರಲಿಲ್ಲ. ಇದೇ ಕಾರಣಕ್ಕೆ ಅವರು ಕ್ಷಮೆ ಕೇಳಿದ್ದಾರೆ.
ಅನುಶ್ರೀ ಆಗಸ್ಟ್ 28ರಂದು ಬೆಂಗಳೂರಿನ ಹೊರ ವಲಯದಲ್ಲಿ ಅದ್ದೂರಿಯಾಗಿ ವಿವಾಹ ಆದರು. ಈ ವೇಳೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಆದರೆ, ರಿಷಬ್ ಶೆಟ್ಟಿ ಬಂದಿರಲಿಲ್ಲ. ಅನುಶ್ರೀ ಕಡೆಯಿಂದ ರಿಷಬ್ಗೆ ಆಮಂತ್ರಣ ಪತ್ರಿಕೆಯೇನೋ ಹೋಗಿತ್ತು. ಆದರೆ, 'ಕಾಂತಾರ: ಚಾಪ್ಟರ್ 1' ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಿದ್ದರಿಂದ ಅವರಿಗೆ ಬರೋಕೆ ಸಾಧ್ಯವೇ ಆಗಿಲ್ಲ.
ಈ ಬಗ್ಗೆ ವೇದಿಕೆಯಲ್ಲೇ ಅನುಶ್ರೀ ಮದುವೆ ಕುರಿತು ಮಾತನಾಡಿದ ರಿಷಬ್, ಕಳೆದ ಮೂರು ವರ್ಷಗಳಿಂದ ನಾನು ಹೊರಜಗತ್ತಿನ ಎಲ್ಲ ವಿಚಾರಗಳಿಂದಲೂ ದೂರ ಉಳಿದಿದ್ದೆ. ಹೀಗಾಗಿ ನನಗೆ ಸಾಮಾನ್ಯ ಜ್ಞಾನವೇ ಕಡಿಮೆ ಆಗೋಗಿದೆ. ಹಾಗೆಯೇ ಅನುಶ್ರೀ ಅವರೇ, ನಿಮ್ಮ ಮದುವೆಗೂ ನಾನು ಬರಲು ಆಗಲಿಲ್ಲ, ಸಾರಿ. ಹ್ಯಾಪಿ ಮ್ಯಾರೀಡ್ ಲೈಫ್ ಎಂದು ವೇದಿಕೆಯಲ್ಲೇ ರಿಷಬ್ ಶುಭಕೋರಿದ್ದಾರೆ. ಇದರಿಂದ ಫುಲ್ ಖುಷಿಯಾದ ಅನುಶ್ರೀ, ಇಷ್ಟು ದೊಡ್ಡ ವೇದಿಕೆ ಮೇಲೆ ನನಗೆ ರಿಷಬ್ ಸರ್ ಕಡೆಯಿಂದ ವಿಶ್ ಸಿಕ್ಕಿದೆ ಎಂದಿದ್ದಾರೆ.












Click it and Unblock the Notifications