BBK-12: ಯಾಕೆ ಮೀಟ್ರು ಇಲ್ವಾ? ರಕ್ಷಿತಾನ ಚೀಪ್ ಗಿಮಿಕ್ ಅಂದಿದ್ದೇಕೆ ಕಾವ್ಯ?
ಬಿಗ್‌ಬಾಸ್ ಮನೆಯಿಂದ ಪ್ರತಿ ವಾರವೂ ಸ್ಪರ್ಧಿಗಳು ಒಬ್ಬೊಬ್ಬರಾಗಿ ಹೊರಬರುತ್ತಿದ್ದಾರೆ. ಇನ್ನು ಟಾಸ್ಕ್ ವೇಳೆ ಬಿಗ್‌ಬಾಸ್ ಮನೆ ರಣರಂಗವಾಗುತ್ತಿದೆ. ಈಗ ಬಿಗ್‌ಬಾಸ್ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸ್ಪರ್ಧಿಗಳ ಬೆನ್ನಿಗೆ ಚೂರಿ ಚುಚ್ಚುವ ಮೂಲಕ ಆರಿಸಬೇಕು ಎಂದು ಟಾಸ್ಕ್ ನೀಡಲಾಗಿದ್ದು, ಈ ವೇಳೆ ರಕ್ಷಿತಾ ಶೆಟ್ಟಿ ಹಾಗೂ ಕಾವ್ಯ ಶೈವ ನಡುವೆ ದೊಡ್ಡ ಗಲಾಟೆ ನಡೆದಿದೆ.
ಬಿಗ್‌ಬಾಸ್ ಟಾಸ್ಕ್‌ನಂತೆ ರಕ್ಷಿತಾ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸ್ಪರ್ಧಿಯಾಗಿ ಕಾವ್ಯ ಅವರನ್ನು ಸೂಚಿಸಿದ್ದಾರೆ. 'ನೀವು ನನ್ನ ಕಾಂಪಿಟೇಟರ್ ಅಂತ ನನಗೆ ಒಂದು ಪರ್ಸೆಂಟ್ ಕೂಡ ಅನಿಸಲಿಲ್ಲ, ನಿಮ್ಮದು ಎಫರ್ಟ್ ಇರೋಲ್ಲ' ಎಂದು ಕಾವ್ಯ ಅವರನ್ನ ರಕ್ಷಿತಾ ಕೆಣಕಿದ್ದಾರೆ.

'ನಿನ್ನ ಸ್ಟ್ರಾಟಜಿ, ನಿನ್ನ ಚೀಪ್ ಗಿಮಿಕ್, ನನ್ನತ್ರ ನಡೆಯಲ್ಲ, ಅದೆಲ್ಲ ನನ್ನ ಕಾಲಿನ ಧೂಳಿಗೆ ಸಮ' ಎಂದು ಕಾವ್ಯ ಕೂಡ ರಕ್ಷಿತಾ ಮೇಲೆ ಕೂಗಾಡಿದ್ದಾರೆ. ಆಗ ರಕ್ಷಿತಾ ಸ್ಟ್ರಾಟಜಿ, ಸ್ಟ್ರಾಟಜಿ ಅಂತ ಕಿರುಚಾಡಿದ್ದಾರೆ. ಆಗ 'ನಾನು ಹೇಳೋದನ್ನ ಕೇಳಿಸಿಕೊಳ್ಳೋಕೆ ಮೀಟರ್ ಇಲ್ವಾ ನಿಂಗೆ?' ಅಂತ ಕಾವ್ಯ ಅವಾಜ್ ಹಾಕಿದ್ದಾರೆ.
ಗಿಲ್ಲಿ ಮನೆ ಕೆಲಸ ಮಾಡಲ್ಲ ಎಂದ ರಘು
ದೋಸ್ತಿಗಳಂತಿದ್ದ ರಘು ಹಾಗೂ ಗಿಲ್ಲಿ ಕೂಡ ಕಿರಿಕ್ ಮಾಡಿಕೊಂಡಿದ್ದಾರೆ. ಗಿಲ್ಲಿ ಮೇಲೆ ರಘು ಗರಂ ಆಗಿ ಕೂಗಾಡಿದ್ದಾರೆ. ಇತ್ತೀಚೆಗೆ ಗಿಲ್ಲಿ ಬಟ್ಟೆ ಕಿತ್ತೆಸೆದಿದ್ದ ರಘು, ಈಗ ಜಗಳಕ್ಕೆ ನಿಂತಿದ್ದಾರೆ. ಗಿಲ್ಲಿ ಮೇಲೆ ರಘು ಅವಾಜ್ ಹಾಕಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತ ಗಿಲ್ಲಿ ಫ್ಯಾನ್ಸ್ ರಘು ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ.
ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಧನುಷ್ ಅವರು ಮನೆಯ ಎಲ್ಲ ಸದಸ್ಯರಿಗೆ 1ರಿಂದ 11ವರೆಗೆ ರ‍್ಯಾಂಕಿಂಗ್ ನೀಡುವಂತೆ ಟಾಸ್ಕ್ ನೀಡಿದ್ದರು. ಆಗ ಗಿಲ್ಲಿಗೆ 2ನೇ ಸ್ಥಾನ ನೀಡಿ, ರಘು ಅವರಿಗೆ 6ನೇ ಸ್ಥಾನ ನೀಡಿದ್ದರು. ಆಗ ಕೋಪಗೊಂಡ ರಘು, ಮನೆ ಕೆಲಸದ ಮಾಡದ ಗಿಲ್ಲಿಗೆ ಯಾವ ಆಧಾರದ ಮೇಲೆ 2ನೇ ಸ್ಥಾನ ನೀಡಿದ್ದೀರಾ? ಎಂದು ಕೇಳಿದರು. ಇದರಿಂದ ಕೋಪಗೊಂಡ ಗಿಲ್ಲಿ ರಘು ಜೊತೆ ಜಗಳಕ್ಕೆ ನಿಂತರು. ಅಲ್ಲಿವರೆಗೆ ಸ್ನೇಹಿತರಾಗಿದ್ದ ಗಿಲ್ಲಿ ಹಾಗೂ ರಘು ನಡುವೆ ಗಲಾಟೆ ನಡೆಯಿತು. ದೋಸ್ತಿಗಳ ಕಚ್ಚಾಟ ನೋಡಿ ಪ್ರೇಕ್ಷಕರು ಕೂಡ ಶಾಕ್ ಆಗಿದ್ದಾರೆ.












Click it and Unblock the Notifications