Anupama Gowda: ಅನುಪಮಾ ಗೌಡ ಮನೆಗೆ 'ನಮ್ಮನೆ' ಎನ್ನುವ ಹೆಸರು ಯಾಕೆ..?
ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ತಮ್ಮ ಬಹುಕಾಲದ ಕನಸು ನನಸಾದ ಖುಷಿಯಲ್ಲಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ತುಂಬ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದ ಅನುಪಮಾ ಈಗ ತಮ್ಮ ಇಚ್ಛೆಯಂತೆ ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿದ್ದಾರೆ. ದಸರಾ ಶುಭಗಳಿಗೆಯಲ್ಲೇ ಅನುಪಮಾ ತಮ್ಮ ಹೊಸ ಮನೆಗೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ಅನುಪಮಾ ತಮ್ಮ ಮನೆಗೆ 'ನಮ್ಮನೆ' ಅಂತಾ ಹೆಸರಿಟ್ಟಿದ್ದಾರೆ.
ತಮ್ಮ ಮನೆಗೆ 'ನಮ್ಮನೆ' ಅಂತಾ ಯಾಕೆ ಹೆಸರಿಟ್ಟರು ಎನ್ನುವುದನ್ನು ಸ್ವತಃ ಅನುಪಮಾ ಅವರೇ ವಿವರಿಸಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಅನುಪಮಾ, 'ಮೂವತ್ತಾ ಮೂರು ವರ್ಷಕ್ಕೆ ನಾನು ಒಂದು ಮನೆ ಮಾಡಿದ್ದೇನೆ. ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ. ನನಗೆ ಹೆಮ್ಮೆ ವಿಚಾರ ಇದು. ನಮ್ಮ ಮನೆಗೆ ನಮ್ಮನೆ ಅಂತಾನೇ ಹೆಸರಿಟ್ಟೆ. ಯಾಕಂದರೆ ಯಾರೇ ಬಂದರೂ ನಮ್ಮನೆ ನಮ್ಮನೆ ಅಂತಾ ಹೇಳುವಾಗ ಕೇಳೋಕು ಖುಷಿ ಅನಿಸಿತು. ಹೀಗಾಗಿ ನಮ್ಮನೆ ಅಂತಾ ನಮ್ಮ ಮನೆಗೆ ನಾನು ಹೆಸರಿಟ್ಟಿದ್ದೇನೆ' ಎಂದರು.

ಎಲ್ಲರೂ ಬರುತ್ತಾರೆ. ಫ್ಯಾಮಿಲಿ ಇಂದ ಒಂದಷ್ಟು ಜನ. ನನಗೆ ಹದಿನಾಲ್ಕು ವರ್ಷದಿಂದ ಕೆಲಸ ಮಾಡ್ತಾ ಫ್ಯಾಮಿಲಿ ಆಗಿರುವ ನನ್ನ ಇಂಡಸ್ಟ್ರಿ ಫ್ರೆಂಡ್ಸ್ ಇರಬಹುದು, ಡೈರೆಕ್ಟರ್‌ಗಳಿರಬಹುದು, ನನ್ನ ಕೈಯಲ್ಲಿ ಎಷ್ಟು ಜನ ಆಗುತ್ತೋ ಅಷ್ಟು ಜನರನ್ನು ನೆನಪಿಟ್ಟುಕೊಂಡು ಕರೆದಿದ್ದೇನೆ. ಎಲ್ಲರೂ ಸೇರಿ ವಿಶ್ ಮಾಡಿ ಈ ಮನೆಗೆ ಒಳ್ಳೆದಾಗಲಿ ಅಂತಾ ಹರಸಿದರೆ ಅಷ್ಟೇ ಸಾಕು.
ಇನ್ನು ಜಾಸ್ತಿ ಕೆಲಸ ಸಿಗಲಿ ಅಂತಾ ಎಲ್ಲರೂ ಹಾರೈಸಿದರೆ ನಾನು ಕರೆಕ್ಟ್ ಆಗಿ ಲೋನ್ ತೀರಿಸಬಹುದು. ನೀವೆಲ್ಲರೂ ವಿಡಿಯೋ ಮೂಲಕ ನಮ್ಮ ಮನೆ ಗೃಹಪ್ರವೇಶಕ್ಕೆ ಬಂದಿದ್ದೀರಾ. ನೀವು ಅಷ್ಟೇ ಅಲ್ಲಿಂದಲೇ ಒಳ್ಳೆದಾಗಲಿ ಅಂತಾ ಶುಭ ಹಾರೈಸಿ ಎಂದು ಅನುಪಮಾ ಗೌಡ ವೀಕ್ಷಕರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮನೆ ಮಾಡುವುದು ಅಷ್ಟು ಸುಲಭ ಅಲ್ಲ. ಈಗಂತಲ್ಲ ಕೆಲವು ವರ್ಷದಿಂದ ಅದು ಕಷ್ಟನೇ. ಜೀವನದಲ್ಲಿ ನನಗೊಂದು ಗುರಿ ಇತ್ತು. ಏನಾಗಬೇಕು? ಏನು ಮಾಡಬೇಕು ಅಂತಾ? ಒಂದು ಸ್ವಂತ ಮನೆ ಮಾಡಬೇಕು ಎನ್ನುವುದು ಮೊದಲಿನಿಂದಲೂ ಇತ್ತು. ಮೊದಲು ಅಪಾರ್ಟ್ಮೆಂಟ್ ಅಂತಾ ತಲೆಯಲ್ಲಿತ್ತು. ಅದಾದ ಮೇಲೆ ಬೇಡ ಮನೆ ಬೇಕು. ನನ್ನದೇ ಆದಂತಹ ಒಂದು ಮನೆ ಬೇಕು ಅಂತಾ ನಿರ್ಧರಿಸಿದ್ದೆ.

ನನ್ನ ಕೈಯಲ್ಲಿ ಆದ ಮಟ್ಟಿಗೆ ಈ ಮನೆಯನ್ನು ಮಾಡಿ ಆಗಿದೆ. ಎಲ್ಲರಿಗೂ ಜೀವನದಲ್ಲಿ ಮನೆ ಮಾಡಬೇಕು ಎನ್ನುವುದು ಇರುತ್ತದೆ. ನನಗೆ ಎಲ್ಲರೂ ಮದುವೆಯಾಗು ಅನ್ನುತ್ತಿದ್ದರು. ಆದರೆ ನನಗೆ ಮನೆ ಮೊದಲು ಆಗಬೇಕಿತ್ತು. ಕೊನೆಗೂ ಕನಸು ನನಸಾದ ಘಳಿಗೆ ಬಂದಿದೆ. ಒಂದು ವರ್ಷದಿಂದ ಕಾದು, ಈ ಮನೆ ಬಗ್ಗೆ ಯಾರಿಗೂ ಹೇಳದೆ, ಇಂದು ಗೃಹಪ್ರವೇಶ ಆಗಿದೆ. ನನಗಂತೂ ಸಿಕ್ಕಾಪಟ್ಟೆ ಖುಷಿಯಾಗಿದೆ ಎಂದು ಅನುಪಮಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.












Click it and Unblock the Notifications