ಪುನೀತ್ ರಾಜ್‌ಕುಮಾರ್ ರಾಜಕೀಯದ ಸಹವಾಸ ಬೇಡ ಅಂತಿದ್ದು ಯಾಕೆ?
ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಮನೆ, ಡಾ. ರಾಜ್‌ಕುಮಾರ್ ಕುಟುಂಬದ ಕಿರಿಯ ಮಗ ಡಾ. ಪುನೀತ್ ರಾಜ್‌ಕುಮಾರ್ ಅವರು ಎಲ್ಲಾ ವಿಚಾರದಲ್ಲೂ ಕನ್ನಡಿಗರಿಗೆ ಮಾದರಿ ಆಗುತ್ತಾರೆ. ಹೀಗೆ ಕನ್ನಡ ಅಭಿಮಾನಿಗಳ ಕಣ ಕಣದಲ್ಲೂ ಬೆರೆತು ಹೋಗಿರುವ ಕರ್ನಾಟಕ ರತ್ನ, ನಟ ಪುನೀತ್ ರಾಜ್‌ಕುಮಾರ್ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು. ಸ್ವತಃ ಅವರ ಅತ್ತಿಗೆ ಗೀತಾ ಶಿವರಾಜ್‌ಕುಮಾರ್ ಚುನಾವಣೆಗೆ ನಿಂತಾಗ, ಪ್ರಚಾರ ಮಾಡುವ ಬಗ್ಗೆ ಪುನೀತ್ ಏನು ಹೇಳಿದ್ದರು ಗೊತ್ತೆ?
ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದಾಗ ಯಾವುದೇ ಜಾತಿ, ಧರ್ಮ ನೋಡದೆ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದ್ದವರು. ಇಂತಹ ನಟ ತಮ್ಮ ಅಭಿಮಾನಿ ದೇವರುಗಳಿಗೆ ಎಂದಿಗೂ ದಾರಿ ತಪ್ಪುವ ವಿಚಾರಗಳನ್ನು ಹೇಳಿಕೊಡಲಿಲ್ಲ. ಎಲ್ಲರಿಗೂ ಮಾದರಿಯಾಗಿ ಕನ್ನಡ ನಾಡಿನಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿದ್ದ ಪುನೀತ್ ರಾಜ್‌ಕುಮಾರ್ ಅವರು, ಮನಸ್ಸು ಮಾಡಿದ್ದರೆ ಎಂದೋ ದೊಡ್ಡ ರಾಜಕಾರಣಿ ಆಗಬಹುದಿತ್ತು. ಆದ್ರೆ ಅವರು ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರ ರೀತಿಯೆ ರಾಜಕೀಯದಿಂದ ದೂರ ಉಳಿದು ಸಮಾಜ ಸೇವೆ & ಸಿನಿಮಾ ಸೇವೆ ಮಾಡಿದ್ದವರು.

ಪ್ರಚಾರಕ್ಕೆ ಹೋಗಿದ್ದರಾ ಕರ್ನಾಟಕ ರತ್ನ ಪುನೀತ್?
ಪುನೀತ್ ರಾಜ್‌ಕುಮಾರ್ ಅವರು ರಾಜಕೀಯ ರಂಗದಿಂದ ದೂರ ಉಳಿದಿದ್ದರೂ, ಅವರ ಅಣ್ಣ ಅಂದ್ರೆ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗದಿಂದ ಈ ಹಿಂದೆ ಕೂಡ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ಪುನೀತ್ ರಾಜ್‌ಕುಮಾರ್ ಅವರು ಕೂಡ ಚುನಾವಣಾ ಪ್ರಚಾರಕ್ಕೆ ಹೋಗಲಿದ್ದಾರೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಈ ಕುರಿತಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಂದು ಉತ್ತರ ನೀಡಿದ್ದ ಪುನೀತ್ ರಾಜ್‌ಕುಮಾರ್ ಅವರು, ತಾವು ತಮ್ಮ ಅತ್ತಿಗೆ ಅಂದ್ರೆ ಗೀತಾ ಶಿವರಾಜ್‌ಕುಮಾರ್ ಅವರ ಪರ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ಹಾಗೇ ಅಪ್ಪು ಅವರು ಎಷ್ಟು ಒಳ್ಳೆಯವರು & ನೇರ ನುಡಿಯ ಮನುಷ್ಯ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಮನವರಿಕೆ ಆಗುತ್ತಿದೆ.
ಅಪ್ಪು ಅಭಿಮಾನ ಮತ್ತಷ್ಟು ಹೆಚ್ಚು
ಭಾರತೀಯರಿಗೆಲ್ಲ ರಾಜ್‌ಕುಮಾರ್ ಹೇಗೋ ಅದೇ ರೀತಿ ಪುನೀತ್ ರಾಜ್‌ಕುಮಾರ್ ಕೂಡ ಹೃದಯದ 'ಅಪಧಮನಿ & ಅಭಿಧಮನಿ' ಆಗೋಗಿದ್ದಾರೆ. ಇಂದಿಗೂ, ಭಾರತದಲ್ಲಿ ಮೂಲೆ ಮೂಲೆಯಲ್ಲೂ ಡಾ. ರಾಜ್ & ಪುನೀತ್ ರಾಜ್ ಇಬ್ಬರೂ ಚಿರಪರಿಚಿತ ಆಗೋಗಿದ್ದಾರೆ. ಹೀಗಿದ್ದಾಗ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರಾಜಕೀಯಕ್ಕೆ ಯಾಕೆ ಬರಲಿಲ್ಲ? ಎಂಬ ಚರ್ಚೆಗಳು ನಡೆಯುತ್ತಿವೆ. ಈ ಪ್ರಶ್ನೆಗಳಿಗೆ ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ನೀಡಿರುವ ಉತ್ತರ ಹಾಗೂ ಹಳೇ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಪುನೀತ್ ಅವರ ಮೇಲಿನ ಅಭಿಮಾನ ಮತ್ತಷ್ಟು ಈಗ ಹೆಚ್ಚಾಗುತ್ತಿದೆ.

ಒಟ್ನಲ್ಲಿ ನಮ್ಮ ಅಪ್ಪು ಪುನೀತ್ ಅವರು, ಎಂದೆಂದಿಗೂ ರಾಜಕೀಯಕ್ಕೆ ಹೋಗದೆ & ಯಾವುದೇ ರಾಜಕೀಯ ವ್ಯಕ್ತಿ ಪರ ಚುನಾವಣೆ ಪ್ರಚಾರ ಮಾಡದೆ ಮಾದರಿ ಆಗಿದ್ದವರು. ಪುನೀತ್ ಅವರು ತಮ್ಮ ಜೀವನದ ಉದ್ದಕ್ಕೂ ಸಮಾಜ ಸೇವೆ & ಸಿನಿಮಾ ಸೇವೆ ಮಾಡಿ ಬಡವರಿಗೆ ನೆರವಾಗಿದ್ದರು. ಸ್ವತಃ ಅವರದ್ದೇ ಕುಟುಂಬದ ಸದಸ್ಯರು ಚುನಾವಣೆಗೆ ನಿಂತಾಗ ಕೂಡ ಅಪ್ಪು ಪುನೀತ್ ರಾಜ್‌ಕುಮಾರ್ ಚುನಾವಣಾ ಪ್ರಚಾರ ಮಾಡದೆ ಮಾದರಿ ಆದರು. ಇದೀಗ ಅಭಿಮಾನಿಗಳು ಅಪ್ಪು ಅವರ ಹಳೇ ವಿಡಿಯೋ ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದಾರೆ, ಅಪ್ಪು ದೇವರು ಅನ್ನೋ ಮಾತನ್ನ ಇದೀಗ ಮತ್ತೆ ಮತ್ತೆ ಹೇಳುತ್ತಿದ್ದಾರೆ ಫ್ಯಾನ್ಸ್.












Click it and Unblock the Notifications