Sangeetha Sringeri: ಸಂಗೀತಾ ಶೃಂಗೇರಿ ಸರ್ಪ ಸೂತ್ರ ಧರಿಸೋದ್ಯಾಕೆ? ಏನಿದರ ಗುಟ್ಟು.?

ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ನಟಿ ಸಂಗೀತಾ ಶೃಂಗೇರಿ ಕನ್ನಡ ಬಿಗ್‌ ಬಾಸ್‌ ಶೋನಿಂದ ಮತ್ತಷ್ಟು ಜನಪ್ರಿಯತೆ ಪಡೆದರು. ತಮ್ಮ ಮಾತು, ವರ್ತನೆ, ದಿಟ್ಟ ನಿರ್ಧಾರ, ಛಲದಿಂದ ಕರ್ನಾಟಕದ ಜನತೆಯ ಮನಸ್ಸು ಗೆದ್ದರಷ್ಟೇ ಅಲ್ಲದೇ, ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸಿಂಹಿಣಿ ಅಂತಾನೇ ಖ್ಯಾತಿ ಪಡೆದರು. ಶೋ ಮುಗಿದರೂ ಕೂಡ ನಟಿ ಸಂಗೀತಾ ಶೃಂಗೇರಿ ಅವರ ಹವಾ ಮಾತ್ರ ಕಡಿಮೆಯಾಗಿರಲಿಲ್ಲ. ಸದ್ಯ ಸಂಗೀತಾ ಶೃಂಗೇರಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಟ್ರಾಂಗ್‌ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಸಂಗೀತಾ ಶೃಂಗೇರಿ ತಮ್ಮ ಬೆರಳಿಗೆ ವಿಶೇಷ ಉಂಗುರವೊಂದನ್ನು ಧರಿಸಿದ್ದು, ಈ ಉಂಗುರದ ಬಗ್ಗೆ ಹಲವಾರು ಕುತೂಹಲಕಾರಿ ಪ್ರಶ್ನೆಗಳಿವೆ. ಈ ಉಂಗುರದ ವಿಶೇಷತೆ ಏನು..? ತಾವು ಅದನ್ನು ಯಾಕೆ ಧರಿಸಿರುವುದು..? ಅದರ ಉಪಯೋಗ ಏನು ಎನ್ನುವುದನ್ನು ಸಂಗೀತಾ ಸವಿವರವಾಗಿ ವಿವರಿಸಿದ್ದಾರೆ.

Why Did Actress Sangeetha Sringeri Wear Copper Ring

ನಟಿ ಸಂಗೀತಾ ಶೃಂಗೇರಿ ತಮ್ಮ ಎಡಗೈಯ ಉಂಗುರ ಬೆರಳಿಗೆ ತಾಮ್ರದ ಸದ್ಗುರು ಉಂಗುರ ಅಥವಾ ಸರ್ಪ ಸೂತ್ರವನ್ನು ಧರಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಗೀತಾ ಶೃಂಗೇರಿ, ಇದೊಂದು ತಾಮ್ರದ ಉಂಗುರ. ಸದ್ಗುರು ಕೂಡ ಒಂದು ಸಾರಿ ಹೇಳಿದ್ದಾರೆ. ಅವರು ಹೇಳುವ ಬಹಳಷ್ಟು ವಿಚಾರ ನನಗೆ ಲಾಜಿಕಲ್‌ ಅನಿಸುತ್ತದೆ. ನನಗೆ ಲಾಜಿಕಲ್‌ ಅನಿಸುವುದನ್ನು ನಾವು ಒಪ್ಪಿಕೊಳ್ಳುತ್ತೇನೆ. ಯಾವುದು ಅನಿಸುವುದಿಲ್ಲವೋ ಅದನ್ನು ಬಿಟ್ಟು ಬಿಡುತ್ತೇನೆ ಎಂದರು.

ಸಾಮಾನ್ಯವಾಗಿ ತಾಮ್ರದ ಉಂಗುರವನ್ನು ಉಂಗುರ ಬೆರಳಿಗೆ ಹಾಕಬೇಕು ಎಂದು ಹೇಳುತ್ತಾರೆ. ಯಾಕೆಂದರೆ ನಾವು ಧ್ಯಾನ ಮಾಡುವಾಗ ನಮ್ಮ ಆತ್ಮ ನಮ್ಮ ದೇಹವನ್ನು ಬಿಟ್ಟು ಹೋಗುತ್ತದೆ. ಒಂದು ಪೀಸ್‌ ಆಫ್‌ ಸ್ಟೇಟ್‌ ಹೋಗುತ್ತದೆ. ನಾವು ಧ್ಯಾನದಲ್ಲಿ ಮುಳುಗಿ ಹೋಗಿರುತ್ತೇವೆ. ಈ ಶರೀರದ ಬಗ್ಗೆ ನಮಗೇನು ಗಮನನೇ ಇರಲ್ಲ. ನಾವು ಮರೆತು ಬಿಡುತ್ತೇವೆ. ನಮಗೆ ದೇಹವಿದೆ ಎನ್ನುವುದನೆಲ್ಲ ಮರೆತು ಬಿಡುತ್ತೇವೆ.

Why Did Actress Sangeetha Sringeri Wear Copper Ring

ಒನ್ಸ್‌ ಇನ್‌ ಮಿಲಿಯನ್‌ ಚಾನ್ಸ್‌ಸ್‌ ಅಂತೆ ಇದು ಆಗುವುದು. ಅಷ್ಟು ಅಲ್ಲಿ ಶಾಂತಿ ಇರುತ್ತದೆ. ಆಗ ಎಲ್ಲವೂ ಮರೆತು ಬಿಡುತ್ತದೆ. ಹಾಗೆ ಆಗಬಾರದು ಅಂತಾ ಈ ಉಂಗುರ ಧರಿಸಲಾಗುತ್ತದೆ. ಇದು ಒಂದು ಥಿಯೇರಿ ಆದರೆ ಇನ್ನೊಂದು ತಾಮ್ರದ ಉಂಗುರ ಇನ್ನು ಜಾಸ್ತಿ ನಮ್ಮ ಧ್ಯಾನಕ್ಕೆ ಶಕ್ತಿ ಕೊಡುತ್ತದೆ ಅಂತಾ ಹೇಳುತ್ತಾರೆ ಎಂದು ತಾವು ಧರಿಸಿರುವ ಉಂಗುರದ ಬಗ್ಗೆ ಸಂಗೀತ ಶೃಂಗೇರಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+