ರಿಪ್ಲೇಸ್ ಟ್ರಿಕ್ಸ್‌: ಲಕ್ಷ್ಮೀ ಬಾರಮ್ಮ ಧಾರಾವಾಹಿಯಿಂದ ನಟಿ ಹರ್ಷಿತಾ ಹೊರಬಂದಿದ್ದೇಕೆ..?

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್‌ ಕೊಟ್ಟು ಮುನ್ನುಗ್ಗುತ್ತಿದೆ. ಲಕ್ಷ್ಮೀ, ಕಾವೇರಿ, ಕೀರ್ತಿ ಹೋರಾಟದಲ್ಲಿ ಸಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ದಿಢೀರ್‌ ಬದಲಾವಣೆಯೊಂದು ಆಗಿದೆ. ಈ ಮೂಲಕ ಧಾರಾವಾಹಿ ತಂಡ ಪ್ರೇಕ್ಷಕರಿಗೆ ಶಾಕ್‌ ಕೊಟ್ಟಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮನೆ ಕೆಲಸದಾಕೆ ಗಂಗಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಹರ್ಷಿತಾ ಈ ಧಾರಾವಾಹಿಯಿಂದ ಆಚೆ ಬಂದಿದ್ದಾರೆ. ಇವರ ಜಾಗಕ್ಕೆ ಮಜಾಭಾರತ ಖ್ಯಾತಿಯ ಮತ್ತೊಬ್ಬ ನಟಿ ಮಲ್ಲಿಕಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಪ್ರೇಕ್ಷಕರು ಮೆಚ್ಚಿಕೊಂಡು ನೋಡುತ್ತಿದ್ದ ಗಂಗಾ ಪಾತ್ರ ಬದಲಾವಣೆ ಯಾಕಾಯ್ತು..? ಹಿಂದಿನ ಕಾರಣ ಏನು..? ಎನ್ನುವುದರ ಬಗ್ಗೆ ಸ್ವತಃ ನಟಿ ಹರ್ಷಿತಾ ಮಾತನಾಡಿದ್ದಾರೆ.

Why Did Actress Harshita Leave Lakshmi Baramma Serial

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದಿರುವ, ನಟಿ ಹರ್ಷಿತಾ, 'ನನ್ನ ಪೋಸ್ಟ್‌ನಲ್ಲಿ ಒಂದು ಮಾತ್ರ ನೆಗೆಟಿವ್ ಕಮೆಂಟ್ ಬಂದಿತ್ತು. ಸೆಟ್‌ನಲ್ಲಿ ಜಗಳ ಮಾಡುತ್ತಿದ್ದರು. ಸೆಟ್‌ನಲ್ಲಿ ಜಗಳ ಮಾಡಿಕೊಂಡು ಬಂದಿದ್ದಾರೆ ಅಂತ. ನೆಗೆಟಿವ್ ಕಮೆಂಟ್ ಯಾರು ಮಾಡಿದ್ದರು ಅವರಿಗೆ ಈ ಉತ್ತರ ಕೊಡುತ್ತಿದ್ದೇನೆ. ಸೆಟ್‌ನಲ್ಲಿ ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಇರುತ್ತಿದ್ದೆ. ನನ್ನ ಸೀನ್‌ ಇಲ್ಲ ಅಂದರೆ ಕೆಲವರ ಜೊತೆ ಮಾತನಾಡುತ್ತಿದ್ದೆ. ಅವರ ಜೊತೆಗೆ ರೀಲ್ಸ್‌ ಮಾಡುತ್ತಿದೆ. ಇಲ್ಲದೇ ಇದ್ದರೆ ಒಬ್ಬಳೇ ಕೂರುತ್ತಿದೆ. ವಿಷಯ ಗೊತ್ತಿಲ್ಲದೆ ನೆಗೆಟಿವ್ ಆಗಿ ಮಾತಾಡಬೇಡಿ. ಆ ಪಾತ್ರಕ್ಕೆ ನನ್ನನ್ನ ನಾನು ತೊಡಗಿಸಿಕೊಂಡಿದ್ದೆ. ಆ ಪಾತ್ರವನ್ನು ಹಚ್ಚಿಕೊಂಡು ಜೀವಿಸುತ್ತಿದೆ. ದಯವಿಟ್ಟು ನೆಗೆಟಿವ್ ಕಮೆಂಟ್ ಮಾಡಬೇಡಿ. ಅಷ್ಟು ಬಿಡುವಿದ್ದರೆ ಒಂದು ಸ್ಕ್ರಿಪ್ಟ್ ಮಾಡಿಕೊಂಡು ವಿಡಿಯೋ ಮಾಡಿ. ಅದನ್ನು ಬಿಟ್ಟು ನೆಗೆಟಿವ್‌ ಹೇಳಬೇಡಿ' ಎಂದು ಹೇಳಿದರು.

'ಧಾರಾವಾಹಿಯಿಂದ ಯಾಕೆ ಹೊರಬಂದೆ ಎನ್ನುವುದನ್ನು ಹೇಳಬೇಕೋ ಬೇಡವೋ ಗೊತ್ತಿಲ್ಲ. ಕಲರ್ಸ್ ಚಾನೆಲ್ ಕಡೆಯಿಂದ ಯಾವುದೇ ಬೇಜಾರಿಲ್ಲ. ನನ್ನ ಮೊದಲ ಹೆಜ್ಜೆ ಮಜಭಾರತ. ನಿಮ್ಮೆಲ್ಲರ ಪ್ರೀತಿಯ ಗಂಗಕ್ಕ ಪಾತ್ರದಿಂದ ವಾಪಾಸ್ ಬಂದಿದ್ದಕ್ಕೆ ನನಗೂ ಬೇಸರ ಇದೆ. ನನ್ನದಲ್ಲದ ತಪ್ಪಿನಿಂದ ಆ ಪಾತ್ರವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟಿದ್ದೀನಿ. ಕಾರಣ ಏನು ಎಂಬುದನ್ನು ಕಲರ್ಸ್ ಕನ್ನಡ ಪೇಜ್ ನಲ್ಲಿಯೇ ಮೆನ್ಶನ್ ಮಾಡಿದ್ದೀನಿ. ಆದರೆ ಟೆಕ್ನಿಕಲ್ ಸಮಸ್ಯೆ ಇರಬಹುದು. ಯಾರಿಗೂ ಕಾಣಿಸುತ್ತಿಲ್ಲ. ಕಲರ್ಸ್ ಚಾನೆಲ್ ಬಗ್ಗೆ ಗೌರವ ಇದೆ. ಭಾವನಾತ್ಮಕ ಸಂಬಂಧ ಇದೆ' ಎಂದಿದ್ದಾರೆ.

Why Did Actress Harshita Leave Lakshmi Baramma Serial

'ನಾನು ಬೇರೆ ಪ್ರಾಜೆಕ್ಟ್ ಮಾಡುತ್ತಿದೆ. ಆದರೂ ಹೆಚ್ಚಿನ ಸಮಯವನ್ನು ಇಲ್ಲಿಯೇ ಕೊಡುತ್ತಿದೆ. ಆದರೂ ತಂಡದಲ್ಲಿಯೇ ರಿಪ್ಲೇಸ್ ಮಾಡುವುದಕ್ಕೆ ನೋಡಿದರು. ಆದರೂ ಸಹಿಸಿಕೊಂಡೆ, ಮತ್ತೆ ಮತ್ತೆ ರಿಪ್ಲೇಸ್ ಎನ್ನುತ್ತಿದ್ದರು ಅದನ್ನು ಕೇಳಿದಾಗ ನನಗೆ ಬೇಸರ ಆಯ್ತು. ಇಲ್ಲಿಗೆ ಸಮಯ ಹೆಚ್ಚು ಕೊಟ್ಟೆ ಆದರೂ ರಿಪ್ಲೇಸ್‌ಗೆ ಹುಡುಕುತ್ತಾ ಇರುವುದನ್ನು ಮತ್ತೆ ಕೇಳಿದೆ. ಹೀಗಾಗು ನನ್ನಿಂದ ಅವರಿಗೂ ತೊಂದರೆ ಆಗುವುದು ಬೇಡ ಅಂತ ಪಾತ್ರದಿಂದ ಹೊರಗೆ ಬಂದೆ. ಒಂದು ಮಾತನ್ನಾದರೂ ನನಗೆ ತಲುಪಿಸಿ ರಿಪ್ಲೇಸ್‌ಗೆ ಹುಡುಕಬಹುದಿತ್ತು. ಪರವಾಗಿಲ್ಲ ಆದರೂ ನನಗೆ ಪ್ರೊಡಕ್ಷನ್ ಮೇಲೆ ಬೇಸರ ಇಲ್ಲ' ಎಂದು ತಮಗೆ ಅವಕಾಶ ಕೊಟ್ಟ ಎಲ್ಲರಿಗೂ ಹರ್ಷಿತಾ ಧನ್ಯವಾದ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+