ನಟಿ ಸರೋಜಾದೇವಿಗೆ ತಮಿಳುನಾಡು ಸಿಎಂ ಆಗುವ ಅವಕಾಶ ಕೈತಪ್ಪಿದ್ದು ಹೇಗೆ?
B.Saroja Devi Passes Away:ಪದ್ಮಭೂಷಣ ಪುರಸ್ಕೃತ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ನಿಧನರಾಗಿದ್ದು, ಇಡೀ ಚಿತ್ರರಂಗ ಶೋಕದಲ್ಲಿದೆ. 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿ "ಅಭಿನಯ ಸರಸ್ವತಿ" ಎಂದೇ ಹೆಸರುವಾಸಿಯಾಗಿದ್ದ ಅವರು ತಮ್ಮ ಅಮೋಘ ನಟನೆಯಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತಮಿಳು ಚಿತ್ರರಂಗದಲ್ಲೂ ಸರೋಜಾದೇವಿ ಅವರು ಟಾಪ್ ನಟಿಯಾಗಿ ಮಿಂಚಿದ್ದರು. ಅಲ್ಲದೆ ಇವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಅವಕಾಶವೂ ಅರಸಿ ಬಂದಿತ್ತು, ಕೊನೆಯ ಸಮಯದಲ್ಲಿ ಅವಕಾಶ ಕೈತಪ್ಪಿತ್ತು ಎಂಬ ವಿಚಾರ ಬಹಿರಂಗವಾಗಿದೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಈ ವಿಚಾರವನ್ನು ಹೇಳಿದ್ದಾರೆ. ಸರೋಜಾದೇವಿ ಅವರು ಕರ್ನಾಟಕದವರೇ, ಕನ್ನಡಿಗರೇ, ಅವರು ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಇವರು ಸಿನಿಮಾರಂಗಕ್ಕೆ ಬರುವ ಮುನ್ನ ರಾಜ್ಯ ಕಂಡಂತಹ ಮಹಾನ್ ಸಂಗೀತಕಾರರಾದ ಹೊನ್ನಪ್ಪ ಭಾಗವತರು ಅವರ ಹತ್ತಿರ ಸಂಗೀತ ಕಲಿಯುತ್ತಿದ್ದರು. ಅವರೇ ಇವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದರು ಎಂದು ನೆನೆದಿದ್ದಾರೆ.

ಇವರು ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಅವರ ಜೊತೆ ಹಲವು ವರ್ಷಗಳ ಕಾಲ ನಟಿಸಿದ್ದರು. ಲೆಕ್ಕಾಚಾರವಾಗಿ ಹೇಳುವುದಾದರೆ ಸರೋಜಾದೇವಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಅಷ್ಟೊತ್ತೊಗೆ ಜೆ.ಜಯಲಲಿತಾ ಅವರು ಅಲ್ಲಿಗೆ ಬಂದರು. ಹೀಗೆ ತಮಿಳು ಚಿತ್ರರಂಗದಲ್ಲಿಯೂ ಹಲವು ವರ್ಷಗಳ ಕಾಲ ಸಿನಿಮಾಗಳಲ್ಲಿ ಸರೋಜಾದೇವಿ ಮಿಂಚಿದ್ದರು ಎಂದು ವಾಟಾಳ್ ಹೇಳಿದ್ದಾರೆ.
ಆಗ ನಾಡು ಕಂಡ ಆದರ್ಶ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಜೊತೆ ಸರೋಜಾದೇವಿ ಅವರ ಮದುವೆಯಾಗುತ್ತೆ ಎನ್ನುವ ಚಿಂತನೆಯೂ ನಡೆದಿತ್ತು. ಇವರು ಚನ್ನಪಟ್ಟಣ, ಅವರು ಮದ್ದೂರಿನವರಾಗಿದ್ದರಿಂದ ಈ ಸುದ್ದಿಯೂ ಹರಡಿತ್ತು. ಇವರ ಚಿಂತನೆ ನಮ್ಮ ನಾಡಿನಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ನಿಜಕ್ಕೂ ಇವರ ನಿಧನದಿಂದ ನಮ್ಮ ನಾಡಿಗೆ ಅಪಾರವಾಗಿ ನೋವಾಗಿದೆ. ಮೂರು ವರ್ಷದ ಹಿಂದೆ ನನ್ನೊಂದಿಗೆ ಅವರು ಫೋನ್‌ನಲ್ಲಿ ಮಾತನಾಡಿದ್ರು. ಇಂದು ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದಿದ್ದಾರೆ.

ಐವತ್ತು ವರ್ಷದ ಹಿಂದೆ ಇವರ ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದಲ್ಲಿ ಇವರು ಚೆನ್ನಮ್ಮನ ಪಾತ್ರ ಅದ್ಭುತವಾಗಿ ನಿರ್ವಹಿಸಿದ್ದರು. ಅಂದು ಸುಭಾಷ್ ಚಂದ್ರ ಬೋಸ್ ಅವರ ಪುತ್ರಿ ಕೂಡ ಈ ಸಿನಿಮಾ ನೋಡಲು ಬಂದಿದ್ದರು. ಅದು ಇಡೀ ನಾಡಿನ ಮಹಾನ್ ನಾಯಕನ ಒಬ್ಬ ಮಗಳು ಕಿತ್ತೂರು ರಾಣಿ ಚೆನ್ನಮ್ಮನ ಸಿನಿಮಾ ನೋಡಲು ಬಂದ್ರು ಅಂದ್ರೆ ನಿಜಕ್ಕೂ ಸರೋಜಾದೇವಿ ಅವರಿಗೆ ಸಿಕ್ಕ ದೊಡ್ಡ ಗೌರವ ಎಂದು ನೆನೆದಿದ್ದಾರೆ.
ದಶಾವರದಲ್ಲಿ ಅಂತ್ಯಕ್ರಿಯೆ
ಬಿ.ಸರೋಜಾದೇವಿ ಅವರ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಮಂಗಳವಾರ (ಜು.15) ಅಂತ್ಯಕ್ರಿಯೆ ನಡೆಯಲಿದೆ. ನಾಳೆ ಬೆಳಿಗ್ಗೆ 11:30ರವರೆಗೂ ಬೆಂಗಳೂರಿನ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇದೆ. ಬಳಿಕ ಪಾರ್ಥಿವ ಶರೀರ ಚನ್ನಪಟ್ಟಣಕ್ಕೆ ತೆರಳಲಿದೆ. ಅಲ್ಲಿ ದಶಾವರದ ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ. ಅವರ ತಾಯಿ ರುದ್ರಮ್ಮ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಬೇಕು ಎನ್ನುವುದು ಅವರ ಕೊನೆಯಾಸೆ ಎಂದಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications