Darshan Thoogudeepa: ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡಗೆ ನಾಯಿ ಮರಿ ಕೊಡಿಸಿದ್ದ ದರ್ಶನ್ ತೂಗುದೀಪ್?
ಪವಿತ್ರಾ ಗೌಡ & ದರ್ಶನ್ ತೂಗುದೀಪ್ ತುಂಬಾ ಆತ್ಮೀಯ ಸಂಬಂಧ ಹೊಂದಿದ್ದರು. ಈ ಕಾರಣಕ್ಕೆ ನಟ ದರ್ಶನ್ ತೂಗುದೀಪ್ ಅವರು, ಪವಿತ್ರಾ ಗೌಡಗೆ ಎಲ್ಲಾ ರೀತಿಯ ಬೆಂಬಲ ನೀಡಿದ್ದರು ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅದರಲ್ಲೂ ಈ ವಿಚಾರದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ನಡೆದಿದ್ದು ಕೂಡ ಪವಿತ್ರಾ ಗೌಡ ಕಾರಣಕ್ಕೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗಲೇ ನಟ ದರ್ಶನ್ ಮತ್ತೊಂದು ಅಮೂಲ್ಯ ಉಡುಗೊರೆ ಒಂದನ್ನ ಪವಿತ್ರಾ ಗೌಡಗೆ ಕೊಡಿಸಿದ್ದರು ಎಂಬ ಚರ್ಚೆ ಶುರುವಾಗಿದೆ.
ಪವಿತ್ರಾ ಗೌಡಗೆ ದರ್ಶನ್ ಕಾರು ಕೊಡಿಸಿದ್ದರು, ಹಾಗೇ ಕೋಟಿ ಕೋಟಿ ಬೆಲೆ ಬಾಳುವ ಭಾರಿ ಐಷಾರಾಮಿ ಮನೆ ಕೂಡ ಕೊಡಿಸಿದ್ದರು ಎಂಬ ಆರೋಪ ಇದೆ. ಮತ್ತೊಂದು ಕಡೆ ಇಬ್ಬರ ನಡುವೆ ಆತ್ಮೀಯ ಸಂಬಂಧ ಕೂಡ ಇತ್ತು, ಅಲ್ಲದೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ತೂಗುದೀಪ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಕೂಡ ಪವಿತ್ರಾ ಗೌಡ ವಿಚಾರದಲ್ಲಿ ಈ ಹಿಂದೆ ಹಲವು ಬಾರಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ್ದರು ಎಂಬ ಆರೋಪ ಇದೆ. ಹೀಗೆ ಎಲ್ಲಾ ರೀತಿಯ ಚರ್ಚೆಗಳೂ ನಡೆಯುವ ಸಮಯದಲ್ಲೇ, ದರ್ಶನ್ ತೂಗುದೀಪ್ ಅವರು ಈ ಹಿಂದೆ ಪವಿತ್ರಾ ಗೌಡಗೆ ಕೊಡಿಸಿದ್ದರು ಎನ್ನಲಾದ ಮತ್ತೊಂದು ಭರ್ಜರಿ ಉಡುಗೊರೆ ಬಗ್ಗೆ ಕೂಡ ಚರ್ಚೆ ಶುರುವಾಗಿದೆ!

ನಾಯಿ ಮರಿ ಗಿಫ್ಟ್ ಕೊಟ್ಟಿದ್ದ ಡಿ-ಬಾಸ್?
ಪವಿತ್ರಾ ಗೌಡ ಒಬ್ಬರೇ ಇರುತ್ತಿದ್ದ ಕಾರಣಕ್ಕೆ ಅವರ ರಕ್ಷಣೆಗೆ ಅಂತಾ ಖುದ್ದು ದರ್ಶನ್ ಅವರೇ ಬುಲ್ ಡಾಗ್ ನಾಯಿ ತಳಿಯನ್ನು ಕೊಡಿಸಿದ್ದರು ಎಂಬ ಮಾತು ಓಡಾಡುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಿದ್ದಾಗ, ರೇಣುಕಾ ಸ್ವಾಮಿ ಮರ್ಡರ್ ಆಗಲು ಪವಿತ್ರಾ ಕಾರಣ ಎಂಬ ಆರೋಪದ ಹಿನ್ನೆಲೆ, ಪೊಲೀಸರು ಅರೆಸ್ಟ್ ಮಾಡಿಕೊಂಡು ಕರ್ಕೊಂಡು ಹೋಗಿ ಜೈಲಿಗೆ ತಳ್ಳಿದ್ದಾರೆ. ಹೀಗೆ ಪವಿತ್ರಾ ಜೈಲಿಗೆ ಹೋದ ನಂತರ ಆ ನಾಯಿಗಳು ಅನಾಥವಾಗಿವೆ.
ದರ್ಶನ್ ಮನೆಗೆ ನಾಯಿಗಳು ಶಿಫ್ಟ್?
ಕೇಸ್‌ನ ಮತ್ತೊಬ್ಬ ಕೊಲೆ ಆರೋಪಿ ಪವನ್ ನಾಯಿಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಆದರೆ ದರ್ಶನ್ ಬಳಿ ಫಿಟಿಂಗ್ ಇಟ್ಟು, ಎಲ್ಲರ ಬಾಳು ಹಾಳು ಮಾಡಿದ್ದೇ ಈ ಪವನ್ ಎಂಬ ಆರೋಪ ಇದೆ. ಹೀಗಿದ್ದಾಗ ಅನಾಥವಾಗಿದ್ದ ಪವಿತ್ರಾ ಗೌಡ ಮನೆ ನಾಯಿಗಳನ್ನ ರಕ್ಷಣೆ ಮಾಡಿ ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ನಾಯಿ ಮರಿಯನ್ನು ಪವಿತ್ರಾ ಗೌಡಳ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರಂತೆ. ನಾಯಿಗಳು ಈಗ ದರ್ಶನ್ ತೂಗುದೀಪ್ ಮನೆಯಲ್ಲಿ ಸೇಫ್ ಆಗಿವೆ ಎಂಬ ಮಾಹಿತಿ ಸಿಕ್ಕಿದ್ದು, ದರ್ಶನ್ ಅವರ ಮನೆಯಲ್ಲಿ ನಾಯಿಗಳನ್ನ ಆರೈಕೆ ಕೂಡ ಮಾಡಲಾಗುತ್ತಿದೆಯಂತೆ.












Click it and Unblock the Notifications