Madhu Gowda: ಸೋಶಿಯಲ್ ಮೀಡಿಯಾ ಸ್ಟಾರ್ ನಿಖಿಲ್-ಮಧು ಗೌಡ ಮದುವೆ ಯಾವಾಗ ಗೊತ್ತಾ..?
ನಿಖಿಲ್ ಗೌಡ, ಮಧು ಗೌಡ, ನಿಶಾ ರವೀಂದ್ರ ಈ ಹೆಸರುಗಳು ಸಾಮಾಜಿಕ ಜಾಲತಾಣ ಬಳಸುವವರಿಗೆ ಚಿರಪರಿಚಿತ. ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದ ಮಧು ಗೌಡ ಸದ್ಯ ರೀಲ್ಸ್, ಇನ್ಸ್ಟಾಗ್ರಾಮ್ ಮತ್ತು ಯುಟ್ಯೂಬ್‌ನಲ್ಲಿ ಸಖತ್ ಫೇಮಸ್. ನಿಖಿಲ್ ಹಾಗೂ ನಿಶಾ ಕೂಡ ಸೋಶಿಯಲ್ ಮೀಡಿಯಾಲ್ಲಿ ಸಖತ್ ಫೇಮಸ್ ಆಗಿದ್ದು, ಇವರಿಬ್ಬರ ಅಣ್ಣ-ತಂಗಿ ಕಟೆಂಟ್‌ಗಳು ಎಂತವರಿಗಾದರೂ ಇಷ್ಟವಾಗುತ್ತದೆ.
ಸಾಮಾಜಿಕ ಜಾಲತಾಣಗಳಿಂದಲೇ ಜನಪ್ರಿಯತೆ ಪಡೆದ ಇವರ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಸಹಜವಾಗಿಯೇ ಕುತೂಹಲ ಇರುತ್ತದೆ. ನಿಖಿಲ್ ಗೌಡ, ಮಧು ಗೌಡ, ನಿಶಾ ವಿಡಿಯೋಗಳು ಹಲವು ವರ್ಷಗಳಿಂಡ ಟ್ರೆಂಡಿಂಗ್‌ನಲ್ಲಿದ್ದು, ನಿಖಿಲ್-ನಿಶಾ ಅಣ್ಣ ತಂಗಿ ಎನ್ನುವುದು ಸಹಜವಾಗಿಯೇ ಎಲ್ಲರಿಗೂ ಗೊತ್ತಿತ್ತು. ಆದರೆ ಇವರ ವಿಡಿಯೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮಧು ಗೌಡ ಬಗ್ಗೆ ಅನೇಕರಿಗೆ ಪ್ರಶ್ನೆಗಳಿದ್ದವು.

ಈ ಬಗ್ಗೆ ಇತ್ತೀಚಿಗಷ್ಟೇ ನಿಖಿಲ್ ಹಾಗೂ ಮಧು ಗೌಡ ತಿಳಿಸಿದ್ದು, ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಕೂಡ ಈಗಾಗಲೇ ನಡೆದು ಹೋಗಿದೆ. ಮಾರ್ಚ್ 11ರಂದು ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಈ ಬಳಿಕ ನಿಖಿಲ್ ಹಾಗೂ ಮಧು ಗೌಡ ತಮ್ಮ ಸ್ನೇಹ, ಪ್ರೀತಿ ಬಗ್ಗೆ ಯುಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿಯ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಇವರ ಪ್ರತಿ ವಿಡಿಯೋದಲ್ಲಿ ಕಮೆಂಟ್ ಮಾಡುತ್ತಿದ್ದರು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಜುಲೈ 6ರಂದು ಮಧು ಗೌಡ ಹುಟ್ಟುಹಬ್ಬವಾಗಿದ್ದು, ತನ್ನ ಭಾವಿ ಪತ್ನಿ ಮಧು ಗೌಡ ಅವರ ಹುಟ್ಟುಹಬ್ಬವನ್ನು ನಿಖಿಲ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಜೊತೆಗೆ ನಿಶಾ ಕೂಡ ತನ್ನ ಸ್ನೇಹಿತೆ ಅಂದರೆ ಭಾವಿ ಅತ್ತಿಗೆಗೆ ಸಪ್ರೈಸ್ ನೀಡಿದ್ದಾರೆ. ಸದ್ಯ ಈ ಹುಟ್ಟುಹಬ್ಬದ ಸೆಲೆಬ್ರೇಷನ್ ಫೋಟೋಗಳು ಹಾಗೂ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ.

ಇನ್ನು ಈ ಹುಟ್ಟುಹಬ್ಬದ ಸಂಭ್ರಮದಲ್ಲೇ ನಿಖಿಲ್ ಹಾಗೂ ಮಧು ಗೌಡ ಮದುವೆ ಬಗ್ಗೆ ಸಿಕ್ರೇಟ್‌ವೊಂದು ರಿವಿಲ್ ಆಗಿದೆ. ಹುಟ್ಟುಹಬ್ಬದ ದಿನ ಮಧು ಗೌಡ, ನಿಶಾ, ನಿಖಿಲ್ ರವೀಂದ್ರ ಹಾಗೂ ಮಧು ಅವರ ಅಣ್ಣ ಮಧನ್ ಇನ್ಸ್ಟಾಗ್ರಾಮ್ ಲೈವ್ಗೆ ಬಂದು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ವೇಳೆ ಮದುವೆಯ ಬಗ್ಗೆ ಮಾತನಾಡಿದ್ದು, ಈ ವರ್ಷದ ದೀಪಾವಳಿ ಸಮಯದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ಮಧು ಗೌಡ ತಿಳಿಸಿದ್ದಾರೆ. ಅಂದರೆ ಈ ವರ್ಷದ ಅಕ್ಟೋಬರ್ ಕೊನೆ ವಾರದಲ್ಲಿ ಅಥವಾ ನವೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರುವ ಸಾಧ್ಯತೆ ಇದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಗಳಿಗೆ ಶುಭಾಶಯ ಕೋರುತ್ತಿದ್ದಾರೆ.












Click it and Unblock the Notifications