ಹಾಸ್ಯನಟ ರಾಕೇಶ್ ಸಾವಿಗೂ ಮುನ್ನ ಎಚ್ಚರಿಕೆ ಕೊಟ್ಟಿತ್ತು ದೈವ!
ಹೆಸರಾಂತ ಹಾಸ್ಯಕಲಾವಿದ ರಾಕೇಶ್ ಪೂಜಾರಿ ಇಹಲೋಕ ತ್ಯಜಿಸಿ ಕೆಲ ದಿನಗಳು ಕಳೆದಿವೆ. ಅವರ ಸಾವಿನ ಬಗ್ಗೆ ಕೆಲ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ದೈವ ಈಗಾಗಲೇ ಈ ಬಗ್ಗೆ ಎಚ್ಚರಿಕೆ ಕೊಟ್ಟಿತ್ತು ಎಂದು ಹೇಳಲಾಗುತ್ತಿದೆ. ಹಾಗಾದರೆ ರಾಕೇಶ್ ಸಾವಿನ ಆ ರಹಸ್ಯ ಯಾವುದು? ದೈವ ಕೊಟ್ಟ ಎಚ್ಚರಿಕೆ ಏನು?
ಕನ್ನಡ ಚಿತ್ರರಂಗ, ತುಳು ಚಿತ್ರರಂಗ ಹಾಗೂ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ. ಇವರು ತಮ್ಮ 33 ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಇನ್ನುಮುಂದೆ ನೆನಪು ಮಾತ್ರ. ನೂರಾರು ಕನಸು ಕಟ್ಟಿಕೊಂಡಿದ್ದ ಈ ಯುವಕ ಇನ್ನೂ ಮದುವೆ ಸಹ ಆಗಿರಲಿಲ್ಲ.

ರಾಕೇಶ್ ಸಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾವನ್ನು ನೆನಪಿಸುತ್ತದೆ. ಯಾಕೆಂದರೆ ಆರೋಗ್ಯವಾಗಿದ್ದ ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾದರು. ಈ ವಿಚಾರ ಕನ್ನಡ ನಾಡಿಗೆ ಮಾತ್ರವಲ್ಲದೇ ಸಿನಿರಂಗದ ಪ್ರತಿಯೊಬ್ಬರನ್ನೂ ದಂಗಾಗಿಸಿತ್ತು. ಈ ಘಟನೆ ಯಾರಿಗೂ ಕೂಡ ಅರಿಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇನ್ನೂ ಜೀವನದಲ್ಲಿ ಬಾಳಿ ಬದುಕಬೇಕಾಗಿದ್ದ ಪ್ರತಿಭೆ ರಾಕೇಶ್ ಪುನೀತ್ ರಾಜಕುಮಾರ್ ಅವರಂತೆ ಸಾವನ್ನಪ್ಪಿದ್ದಾರೆ. ಇಂತಹ ಸಾವುಗಳು ಹೆಚ್ಚಾಗುತ್ತಿದ್ದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಶೂಟಿಂಗ್ ವೇಳೆ ಸುಸ್ತಾಗಿದ್ದ ರಾಕೇಶ್
ಗಟ್ಟಿಮುಟ್ಟಾಗಿದ್ದ ರಾಕೇಶ್ ಅತ್ಯಂತ ಲವಲವಿಕೆಯಿಂದ ಇದ್ದವರು. ಎಲ್ಲರೊಂದಿಗೆ ನಗುತ್ತಾ ಮಾತನಾಡಿಕೊಂಡು ಇದ್ದ ರಾಕೇಶ್ ಇಷ್ಟುಬೇಗ ಅಗಲಿದ್ದು ತುಂಬಾ ನೋವಿನ ಸಂಗತಿ. ಎಲ್ಲೆಡೆ ಮಿಂಚಿ ಈಗ ಏಕಾಏಕಿ ಕಣ್ಮರೆಯಾದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಕೇಶ್ ಪೂಜಾರಿ ಸಾವನ್ನಪ್ಪಿದ ನಂತರ ಹಲವಾರು ವಿಚಾರಗಳು ಮುನ್ನಲೆಗೆ ಬಂದಿವೆ. ರಿಷಬ್ ಶೆಟ್ಟಿಗೆ ಮೊದಲೇ ದೈವ ಎಚ್ಚರಿಕೆ ಕೊಟ್ಟಿತ್ತು ಎನ್ನುವ ವಿಚಾರ ಮುನ್ನಲೆಗೆ ಬಂದಿದೆ.

ಕಾಮಿಡಿ ಕಿಲಾಡಿಗಳ ಮೂಲಕ ಜನಪ್ರಿಯತೆ ಪಡೆದ ರಾಕೇಶ್ ಪೂಜಾರಿ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲೂ ಸಾಕಷ್ಟು ಶ್ರಮ ವಹಿಸಿದ್ದರು. ಈ ಶೂಟಿಂಗ್ ಸಮಯದಲ್ಲಿ ರಾಕೇಶ್ ಅವರಿಗೆ ಒಂದಿಷ್ಟು ಆರೋಗ್ಯ ಸಮಸ್ಯೆಗಳು ಆಗಿದ್ದು, ಶೂಟಿಂಗ್ ಸಮಯದಲ್ಲಿ ಏಕಾಏಕಿ ಅಸ್ವಸ್ಥರಾಗಿದ್ದರು ಎನ್ನುವ ಮಾಹಿತಿ ಇದೆ. ಬಹುಶ: ಆಗಲೇ ಅವರು ಎಚ್ಚೆತ್ತುಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಅನಿಸುತ್ತದೆ.
ಇನ್ನೂ ಸಾಯುವ ಹಿಂದಿನ ದಿನ ಇಡೀ ದಿನ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು ರಾಕೇಶ್. ಅದಾದ ನಂತರ ಸ್ನೇಹಿತನ ಮದುವೆ ಮೆಹೆಂದಿ ಕಾರ್ಯಕ್ರಮಕ್ಕೆ ಹೋಗಿದ್ದರು. ಸುಸ್ತಾಗಿದ್ದರೂ ಸಹ ಹೆಚ್ಚು ಡ್ಯಾನ್ಸ್ ಮಾಡಿದ್ದರು ಎನ್ನುವ ಆರೋಪ ಇದೆ. ಕೊನೆಗೆ ಇದ್ದಕ್ಕಿದ್ದಂತೆ ಕುಸಿದು ಬಿಳ್ತಾರೆ, ಆಸ್ಪತ್ರೆಗೆ ಸಾಗಿಸಿದರೂ ಕೂಡ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ರಾಕೇಶ್ ಡ್ರೀಮ್ ಪ್ರಾಜೆಕ್ಟ್ ಕಾಂತಾರ!
ಇನ್ನೂ ರಾಕೇಶ್ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಒಂದು ಡ್ರೀಮ್ ಪ್ರಾಜೆಕ್ಟ್ ಆಗಿ ಪರಿಗಣಿಸಿದ್ದರು. ರಾಕೇಶ್ ಅಗಲಿದ ಬಳಿಕ ಅವರ ಸ್ನೇಹಿತ ರಿತೇಶ್ ಅವರು ಆರೋಪವೊಂದನ್ನು ಮಾಡಿದ್ದಾರೆ. ನಮ್ಮ ಸಿನಿಮಾ ಅಂದುಕೊಂಡು ರಾಕೇಶ್ ಅಷ್ಟೆಲ್ಲಾ ಶ್ರಮ ಪಡುತ್ತಿದ್ದರು. ಆದರೆ ರಾಕೇಶ್ ನಿಧನದ ಸುದ್ದಿ ಕೇಳಿದ ಬಳಿಕವೂ ಕಾಂತಾರ ಶೂಟಿಂಗ್ ಮುಂದುವರೆಸಿದ್ದಾರೆ. ಒಬ್ಬ ಕಲಾವಿದನಿಗೆ ಬೆಲೆ ಇಲ್ಲ. ಸಿನಿಮಾಗಳು ದುಡ್ಡಿನ ಹಿಂದೆ ಬಿದ್ದಿವೆ ಎಂದು ತಮ್ಮ ಮನದಾಳದ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ. ಇದೇ ರೀತಿ ರಾಕೇಶ್ ಅವರ ಅನೇಕ ಸ್ನೇಹಿತರು ನೋವಿನಲ್ಲಿದ್ದಾರೆ.
ಅಷ್ಟೇ ಅಲ್ಲ ರಾಕೇಶ್ ನಿಧನದ ಬಳಿಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಅಂತ್ಯಕ್ರಿಯೆಗೂ ಬರಲಿಲ್ಲ. ಇದರಿಂದ ರಾಕೇಶ್ ಸ್ನೇಹಿತರಿಗೆ ಬೇಸರ ಕಾಡುತ್ತಿದೆ. ಹೀಗಾಗಿ ರಿಷಬ್ ಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ ಮಂಗಳೂರಿಗೆ ಭೇಟಿ ನೀಡಿದಾಗ ದೈವ ಹೇಳಿದ ಮಾತು ಕೂಡ ಈಗ ಮುನ್ನಲೆಗೆ ಬರುತ್ತಿದೆ.
ಕಾಂತಾರಾ ಸಿನಿಮಾಕ್ಕೆ ಗಂಡಾಂತರ: ದೈವದ ಮಾತು ನಿಜ
ಸಿನಿಮಾ ಶೂಟಿಂಗ್ ಶುರುವಾದಾಗಿನಿಂದಲೂ ಸಾಲು ಸಾಲು ದುರಂತಗಳು ಸಂಭವಿವೆ. ಸಿನಿಮಾ ನಿರ್ಮಾಣಕ್ಕೆ ಭಾರಿ ಅಡೆತಡೆಗಳು ಎದುರಾಗಿದೆ. ಆರಂಭದಲ್ಲಿ ಶೂಟಿಂಗ್ ತೆರಳುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗುತ್ತದೆ. ಶೂಟಿಂಗ್ ಸಮಯದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಸಿನಿಮಾ ತಂಡ ಅರಣ್ಯ ನಾಶ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತದೆ. ಸಿನಿಮಾ ತಂಡ ಶೂಟಿಂಗ್ ಅನುಮತಿ ಪಡೆದಿಲ್ಲ ಅನ್ನೋ ಆರೋಪ ಕೂಡ ಕೇಳಿ ಬಂದಿದ್ದವು.
ಇನ್ನೂ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಶೂಟಿಂಗ್ ಮುಗಿಸಿ ಈಜಲು ಹೋದಾಗ ನೀರಿನಲ್ಲಿ ಮುಳಗಿ ಸಾವನ್ನಪ್ಪುತ್ತಾರೆ. ಈ ಘಟನೆ ನಡೆದು ಒಂದು ವಾರದಲ್ಲಿ ರಾಕೇಶ್ ಸಾವು ಸಂಭವಿಸಿದೆ. ಆದರೆ ಚಿತ್ರತಂಡ ಇದು ಶೂಟಿಂಗ್ ವೇಳೆ ಸಂಭವಿಸಿದ ಸಾವಲ್ಲ ಎಂದು ಹೇಳಿದೆ. ಇದೆಲ್ಲವನ್ನು ಗಮನಿಸಿದ ಕೆಲವರು ಚಿತ್ರದ ನಟ ರಿಷಬ್ ಶೆಟ್ಟಿಗೆ ದೈವ ಹೇಳಿದ ಮಾತು ನಿಜವಾಗಿದೆ ಎಂದು ಹೇಳುತ್ತಿದ್ದಾರೆ.
ರಿಷಬ್ ಶೆಟ್ಟಿಗೆ ದೈವ ಹೇಳಿದ ಮಾತು
ಕಳೆದ ತಿಂಗಳು ರಿಷಬ್ ಮಂಗಳೂರಿನ ಬಾರೆಬೈಲ್ನ ವಾರಾಹಿ ಪಂಜುರ್ಲಿ (Panjurli) ದೈವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ದೈವ, 'ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳು ಇದ್ದಾರೆ. ನಿನ್ನ ಕೆಲಸ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನಗೆ ಕೇಡು ಬಯಸಿದ್ದಾರೆ. ನಾನು ನಿನಗೆ ಕೇಡು ಆಗದಂತೆ ನೋಡಿಕೊಳ್ಳುತ್ತೇನೆ. ಐದು ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ' ಎಂದು ಅಭಯವನ್ನು ನೀಡಿತ್ತು. ಇದಾದ ನಂತರ ಕಾಂತಾರದ ಇಬ್ಬರು ಕಲಾವಿದರು ಸಾವನ್ನಪ್ಪಿದ್ದಾರೆ. ಹೀಗಾಗಿ ರಿಷಬ್‌ಗೆ ದೈವ ನುಡಿದಿದ್ದು ನಿಜವಾಗುತ್ತಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಕಾಂತಾರಾ ಸಿನಿಮಾ ಶೂಟಿಂಗ್ ಶುರುವಾದಾಗಿನಿಂದ ಒಂದಲ್ಲಾ ಒಂದು ಅಡೆತಡೆಗಳು ಎದುರಾಗುತ್ತಿದ್ದು ಆತಂಕವನ್ನು ಹುಟ್ಟುಹಾಕಿದೆ. ಕೊಂಚ ಶೂಟಿಂಗ್ ಬಾಕಿ ಇರುವ ಕಾಂತಾರಾ ಚಾಪ್ಟರ್ ಒಂದು ಇದೇ ವರ್ಷದ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ನಡೆದ ಘಟನೆಗಳು ನಟ, ನಿರ್ದೇಶಕರ ರಿಷಬ್ ಶೆಟ್ಟಿ ಅವರನ್ನು ಚಿಂತಿಗೀಡು ಮಾಡಿದೆ.












Click it and Unblock the Notifications