ತಾಯಾಗುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಮೊದಲ ಬಯಕೆ ಏನು ಗೊತ್ತಾ?
ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿರುವ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕುಟುಂಬಸ್ಥರ ಜೊತೆ ಕೊಡಗಿನ ಶೈಲಿಯಲ್ಲಿ ವಿಡಿಯೋ ಮಾಡಿ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಈ ಬಗ್ಗೆ ಸ್ವತಃ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿದ್ದು, ಕೊಡವ ಸಂಪ್ರದಾಯದಲ್ಲಿ ರಿವೀಲ್ ಮಾಡಿದ ಬಗ್ಗೆ ನನ್ನ ಗಂಡನಿಗೆ ಕ್ರೆಡಿಟ್ ಕೊಡಬೇಕು. ನಾವು ಈ ರೀತಿ ರಿವೀಲ್ ಮಾಡಿದಾಗ ಡಿಫರೆಂಟ್ ಆಗಿ ಮಾಡಬೇಕು. ಸಾಮಾನ್ಯವಾಗಿ ಬೇಡ ಎಂದು ಭುವನ್ ಅವರಿಗೆ ಸ್ಪಷ್ಟವಾಗಿತ್ತು. ಹೀಗಾಗಿ ಅವರು ಹಾಗೂ ನಾವು ನಮ್ಮ ಕೊಡವ ಸಮುದಾಯದ ಹಿರಿಯರು ಹೇಗಿದ್ದರು ಎನ್ನುವುದನ್ನು ರಿಸರ್ಚ್ ಮಾಡಿದೆವು.

ಅವಾಗ ನಮಗೆ ಕೋವಿ ಹಿಡಿದುಕೊಂಡು, ದೊಡ್ಡ ಮೀಸೆ ಇರುವಂತವರ ಫೋಟೋಗಳು ಒಂದಿಷ್ಟು ಸಿಕ್ಕವು. ಆಮೇಲೆ ಭುವನ್ ಅವರು ನಮ್ಮ ಸಂಪ್ರದಾಯವು ಎಷ್ಟು ಚೆನ್ನಾಗಿದೆ. ಕೊಡವ ಸಂಸ್ಕೃತಿಯಲ್ಲೇ ಎಷ್ಟು ಚೆನ್ನಾಗಿ ಹಿಂದಿನಿಂದ ಬಂದಿದ್ದಾರೆ. ಈಗ ನಾವೆಲ್ಲಾ ಸೀರೆಗೆ ಬ್ರೋಚ್ ಹಾಕುತ್ತೇವೆ. ಅವಾಗೆಲ್ಲಾ ಗಂಟು ಕಟ್ಟುತ್ತಿದ್ದರು.
ಇದೆನೆಲ್ಲಾ ನೋಡಿದ ಮೇಲೆ ಇದನ್ನೇ ರಿಕ್ರೀಯೆಟ್ ಮಾಡೋಣ ಚೆನ್ನಾಗಿರುತ್ತದೆ ಅಂತಾ ಹೀಗೆ ರಿವೀಲ್ ಮಾಡಿದೆವು.ಆದರೆ ನಾವು ಈ ಮಟ್ಟದ ಪ್ರೀತಿ ಸಿಗುತ್ತದೆ ಎಂದುಕೊಂಡಿರಲಿಲ್ಲ. ಎಲ್ಲರೂ ಕರೆ ಮಾಡಿ ವಿಶ್ ಮಾಡಿದ್ದಾರೆ. ಮೆಸೇಜ್ ಮಾಡಿ ವಿಶ್ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ ಎಂದರು.
ಗರ್ಭಿಣಿ ಅಂತಾ ಗೊತ್ತಾದಾಗ ಭುವನ್ ಅವರು ಹೊರಡಗೆ ಟ್ರಾವೆಲ್ ಮಾಡುತ್ತಿದ್ದರು. ಗರ್ಭಿಣಿ ಅಂತಾ ಖಚಿತವಾಗಿರುವುದು ನೋಡಿ ಜೋರಾಗಿ ಅಳು ಬಂತು. ಯಾರ ಹತ್ತಿರವಾದರು ಹೇಳಿಕೊಳ್ಳಬೇಕು ಅಂತಾ ಭುವನ್ ಅವರಿಗೆ ವಿಡಿಯೋ ಕಾಲ್ ಮಾಡಿ ಜೋರಾಗಿ ಅಳುತ್ತಿದ್ದೆ. ಆ ಬಳಿಕ ಕಿಟ್ ತೋರಿಸಿ ಹೇಳಿದೆ. ಅವರು ತುಂಬಾ ಖುಷಿ ಪಟ್ಟರು. ಮತ್ತೆ ಇದು ದೇವರ ಆಶೀರ್ವಾದ ಅಂತಾ ಇಬ್ಬರೂ ಖುಷಿಪಟ್ಟೆವು ಎಂದು ಹರ್ಷಿಕಾ ಖುಷಿ ಹಂಚಿಕೊಂಡರು

ಇನ್ನು ಬಯಕೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಗರ್ಭಿಣಿ ಆದ ಮೇಲೆ ನಾನು ಎಲ್ಲವನ್ನೂ ತಿನ್ನುತ್ತೇನೆ. ನಾನು ಹೊರಗಡೆ ಊಟ ತಿನ್ನುವುದಿಲ್ಲ. ಹೀಗಾಗಿ ಮನೆಯೂಟ ಇಷ್ಟ. ಮನೆಯಲ್ಲಿ ಪ್ರೀತಿಯಿಂದ ಭುವನ್ ಅವರು, ಅಮ್ಮ, ಅತ್ತೆ ಮಾಡುವ ಅಡುಗೆ ಇಷ್ಟ. ಈಗ ಸ್ನೇಹಿತರು ಕೂಡ ಮನೆಯಿಂದ ಅಡುಗೆ ಮಾಡಿ ಕಳುಹಿಸುತ್ತಿದ್ದಾರೆ. ಅದೆಲ್ಲಾ ನನಗೆ ತುಂಬಾ ಇಷ್ಟ ಎಂದು ಹೇಳಿದರು.
ಈ ದಿನಗಳನ್ನು ಊರಿನಲ್ಲಿ ಕಳೆಯಬೇಕು ಎನ್ನುವ ಆಸೆ ಇದೆ. ಆದರೆ ಅಲ್ಲಿ ಜೋರು ಮಳೆ. ಊರಿಗೆ ಹೋಗಲು ಆಗುತ್ತಿಲ್ಲ. ಅಲ್ಲಿ ರೆಡ್ ಅಲರ್ಟ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ತುಂಬಾ ಜಾರುತ್ತದೆ. ಹೀಗಾಗಿ ಇಲ್ಲೇ ಇದ್ದೇನೆ. ಅಲ್ಲಿನ ಪ್ರಕೃತಿ, ಪ್ರಶಾಂತತೆ ನನಗೆ ಇಷ್ಟ. ಗರ್ಭಿಣಿಯರು ಹಸಿರನ್ನು ಹೆಚ್ಚಾಗಿ ನೋಡಬೇಕು ಎನ್ನುತ್ತಾರೆ. ಹೋಗಬೇಕು ಎನ್ನುವ ಆಸೆ ಇದೆ. ಆದರೆ ಸದ್ಯ ಅಲ್ಲಿ ಹೆಚ್ಚು ಮಳೆ ಇರುವುದರಿಂದ ಬೆಂಗಳೂರು ಸೇಫ್ ಅಂತಾ ಇಲ್ಲೇ ಇದ್ದೇವೆ ಎಂದರು.












Click it and Unblock the Notifications