ಮಕ್ಕಳು ಆದ ಮೇಲೆ ಮದುವೆ ಆಗ್ತೀವಿ ಎಂದಿದ್ದ ಜೋಡಿಗೆ ಬ್ರೇಕಪ್: ಕಾರಣವೇನು..?
ಕನ್ನಡ ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ನಂತರ ರಾಜಾ-ರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಬ್ರೇಕಪ್ ಆಗಿದ್ದು, ಇಬ್ಬರು ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಈ ಊಹಾಪೋಹಾಗಳಿಗೆ ಸಾಕ್ಷಿ ಎನ್ನುವಂತೆ ಇಬ್ಬರು ಸದ್ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಲ್ಲದೇ, ಜೊತೆಗಿರುವ ಫೋಟೋಗಳನ್ನು, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಹಾಗೂ ಇತ್ತೀಚಿಗೆ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಈ ಬಗ್ಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಿದ್ದು, ದೂರಾಗಲು ಕಾರಣ ಏನು ಎನ್ನುವುದು ಕೂಡ ಇನ್ನಷ್ಟೇ ತಿಳಿದು ಬರಬೇಕಿದೆ.

'ನಮ್ಮಿಬ್ಬರಲ್ಲಿ ರೊಮ್ಯಾಂಟಿಕ್, ಲೇಜಿ ಎಲ್ಲಾ ನಾನೇ. ನಮ್ಮಿಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪೊಸೆಸಿವ್‍ನೆಸ್ ಇಲ್ಲ. ನನ್ನ ಫೋನ್ ಅನ್ನು ಅವರು ಚೆಕ್ ಮಾಡಲ್ಲ. ಆದರೆ ಅವನ ಫೋನ್‌ಅನ್ನು ನಾನು ಜಾಸ್ತಿ ಚೆಕ್ ಮಾಡುತ್ತೇನೆ. ಹೆಚ್ಚಾಗಿ ವಾಟ್ಸಪ್ ಅನ್ನು ಚೆಕ್ ಮಾಡುತ್ತೇನೆ. ಒಂದು ಟೈಮ್ ಅಲ್ಲಿ ವಾಟ್ಸಪ್ ವರ್ಕ್ ಆಗಲ್ಲ ಅಂತಾ ಗೊತ್ತಾಯ್ತು. ಇಮೇಲ್ ಅಲ್ಲಿ ಮೆಸೇಜ್ ಬರುತ್ತದೆ. ಅದು ಗೊತ್ತಾಯ್ತು. ಸ್ನ್ಯಾಪ್ ಚಾಟ್, ಇಮೇಲ್ ಎಲ್ಲಾ ಚೆಕ್ ಮಾಡುತ್ತೇನೆ. ಹೀಗಾಗಿ ಅವನ ಮೇಲೆ ಎಷ್ಟು ಕಣ್ಣಿಟ್ಟಿದ್ದೀನಿ ಎನ್ನುವುದು ಅವನಿಗೆ ಗೊತ್ತಾಯ್ತು' ಎಂದಿದ್ದರು.












Click it and Unblock the Notifications