Sri Murali: ಬಘೀರ ಸಿನಿಮ ರಿಲೀಸ್ ಬಗ್ಗೆ ಬಿಗ್ ಬಾಸ್ ಹೋಟೆಲ್‌ನಲ್ಲಿ ರೋರಿಂಗ್ ಸ್ಟಾರ್ ಹೇಳಿದ್ದೇನು?-ಮಾಹಿತಿ
ಚಿತ್ರದುರ್ಗ, ಮಾರ್ಚ್, 12: ಬಘೀರ ಚಿತ್ರ ಇನ್ನು ಶೂಟಿಂಗ್ ಹಂತದಲ್ಲಿದ್ದು, ಈ ಸಿನಿಮಾ ಥಿಯೇಟರ್‌ಗೆ ಬರೋಕೆ ಇನ್ನು ನಾಲ್ಕೈದು ತಿಂಗಳು ಬೇಕು ಎಂದು ನಟ ಶ್ರೀ ಮುರಳಿ ಚಿತ್ರದುರ್ಗದಲ್ಲಿ ತಿಳಿಸಿದರು. ಆನೆಗುಂದಿ ಉತ್ಸವಕ್ಕೆ ಹೊರಟಿದ್ದ ಶ್ರೀ ಮುರಳಿ ಅವರು ಚಿತ್ರದುರ್ಗದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ನಗರದ ಬಿಗ್ ಬಾಸ್ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಭೈರತಿ ರಣಗಲ್ ಚಿತ್ರದಲ್ಲಿ ನಟನೆ ಮಾಡಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಭೈರತಿ ರಣಗಲ್ ಚಿತ್ರದಲ್ಲಿ ನಾನಿಲ್ಲ. ಅದು ಶಿವಣ್ಣ ಮಾಮಂದು ಮಾತ್ರ, ಅದು ಬಿಫೋರ್ ಮಫ್ತಿ ಆಗುವಂಥ ಕಥೆಯಾಗಿದೆ. ಗೀತಾ ಅತ್ತಿಗೆ ಪ್ರೋಡಕ್ಷನ್‌ನಲ್ಲಿ ಮೂಡಿ ಬರುತ್ತಿದ್ದಾರೆ. ಇದು ಡಿಫರೆಂಟ್ ಥಿಂಗ್ ಅನ್ಸುತ್ತೆ, ಸಧ್ಯ ಭೈರತಿ ರಣಗಲ್ ಬರುತ್ತದೆ. ಲೆಟ್ಸ್ ವಿಶ್ ಭೈರತಿ ರಣಗಲ್ ಎಂದರು.

ಕಾರ್ಯಕ್ರಮದ ನಂತರ ತಮ್ಮನ್ನು ಬೈಕ್‌ನಲ್ಲಿ ಚೇಜ್ ಮಾಡುವ ಅಭಿಮಾನಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಮುರಳಿ, ಕಾರ್ಯಕ್ರಮ ನಂತರ ಬೈಕಲ್ಲಿ ಚೇಸ್ ಮಾಡ್ಕೊಂಡು ಬರಬೇಡಿ. ನಿಮ್ಮನ್ನು ನೋಡಿ ಬೇರೆಯವರೂ ಕೂಡ ಚೇಸ್ ಮಾಡ್ತಾರೆ, ಅದು ತುಂಬಾ ಡೇಂಜರಸ್. ಮತ್ತೆ ಬೇರೆ ಕಡೆ ನಾವು ಸಿಗಬಹುದು, ಮನೆಗೇ ಬರಬಹುದು, ಈ ರೀತಿ ಮಾಡಿ ನನ್ನನ್ನೂ ಭಯ ಪಡಿಸಬೇಡಿ ಎಂದರು.
ಹೊಸಪೇಟೆಯ ಅಪ್ಪು ಪ್ರತಿಮೆ ನೋಡೋಕೆ ನಾನು ಕಾಯ್ತಾ ಇದೀನಿ, ಅಪ್ಪು ಮಾಮಾಗೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಫ್ಯಾನ್ಸ್ ಇರೋದು ಹೊಸಪೇಟೆಯಲ್ಲಿ. ನಾನು ಮೂರು ದಿನದ ಹಿಂದೆ ಹೋಸಪೇಟೆಗೆ ಹೋಗುತ್ತಿದೀನಿ ಅಂತಾ ಪೋಸ್ಟ್ ಹಾಕಿದ್ದೆ. ಆಗ ಅಲ್ಲಿನ ಅಭಿಮಾನಿಗಳು ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕು ಅಂದಿದ್ದರು.
ಈಗ ಮೂರು ದಿನದ ನಂತರ ನಾನು ಅಲ್ಲಿಗೆ ಹೋಗಬೇಕಾಗಿದೆ. ಲೈಫ್ ನಾ ಯಾರೋ ನಡೆಸುತ್ತಿದ್ದಾರೆ, ಅದು ನಡಕೊಂಡು ಹೋಗ್ತಿದೆ. ಶಿವಣ್ಣ ಚಿತ್ರದುರ್ಗ ಅದೃಷ್ಟದ ಸಂಕೇತ ಅಂದಿದ್ರು, ಅವ್ರು ಮನೆ ಹಿರಿಯರು, ಅವರು ಹೇಳಿದಂತೆ ನಾವೂ ಹೇಳ್ಬೇಕು ಎಂದರು.
ಮಾರ್ಚ್ 15ಕ್ಕೆ ಪುನೀತ್ ಅಭಿನಯದ ಚಿತ್ರ ಜಾಕಿ ರೀ ರಿಲೀಸ್ ಕುರಿತು ಮಾತನಾಡಿದ ಅವರು, ಸೂಪರ್ ಹಿಟ್ ಚಿತ್ರ ಜಾಕಿ. ಜನ ಅಷ್ಟೇ ಖುಷಿಯಾಗಿ ಈ ಸಿನಿಮಾವನ್ನು ನೋಡುತ್ತಾರೆ. ಸಿನಿಮಾದಲ್ಲಿ ಅವರು ಬಂದ ರೀತಿ, ಹಾಡು ಕಣ್ಣಿಗೆ ಕಟ್ಟಿದಂಗಿದೆ.
ಮೂವಿ ರೀ ರಿಲೀಸ್ ಆದ್ರೆ ಥೇಟರ್‌ನಲ್ಲಿ ಧೂಳೆಬ್ಬಿಸಿ ಒಂದು ಹಬ್ಬ ಆಗುತ್ತದೆ. ನಾನು ಆಗ ಥೇಟರ್‌ಗೆ ವಿಸಿಟ್ ಮಾಡಲ್ಲ. ಆ ಚಿತ್ರ ಅಪ್ಪುಮಾಮ ಹಾಗೂ ಅವರ ಅಭಿಮಾನಿಗಳದ್ದು. ಅವರ ಅಭಿಮಾನಿಗಳು ಅವತ್ತು ಅಂದು ಕಂಪ್ಲೀಟ್ ಎಂಜಾಯ್ ಮಾಡಲಿ ಎಂದರು.
ಮಾರ್ಚ್ 17ರಂದು ಅವರನ್ನ ಮಾತ್ರ ಕೊಂಡಾಡಬೇಕು. ಅಂದು ಬೇರೆ ಏನೂ ಆಗಬಾರ್ದು, ಒಂದು ವೇಳೆ ನಾನು ಅಂದು ಥೇಟರ್‌ಗೆ ಹೋದ್ರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗ್ತೀನಿ, ಯಾರಿಗೂ ಹೇಳಿ ಥೇಟರ್‌ಗೆ ಹೋಗಲ್ಲ ಎಂದು ಚಿತ್ರದುರ್ಗದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೇಳಿದರು.












Click it and Unblock the Notifications