Rishab Shetty: ಕಾಂತಾರಕ್ಕೆ ಎದುರಾಗಿದ್ಯಾ ದೈವ ಕಂಟಕ: ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಹೇಳಿದ್ದೇನು?
ಕಾಂತಾರ ಚಿತ್ರ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರೀಕ್ವೆಲ್ ಶೂಟಿಂಗ್ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ತಂಡದಲ್ಲಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ ವೇಳೆ ಈಗ ಮೂರನೇ ಕಲಾವಿದ ಮೃತಪಟ್ಟಿದ್ದಾರೆ. ಚಿತ್ರತಂಡಕ್ಕಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಈ ಸಾವು ಶಾಕಿಂಗ್ ಆಗಿದೆ. ಕಾರಣ ಕಾಂತಾರ ಶೂಟಿಂಗ್ ಶುರುವಾದ ಮೇಲೆ ಇದು ಮೂರನೇ ಸಾವು ಸಂಭವಿಸಿದೆ.
ಕಳೆದ ಮೇ 6 - ಜೂನಿಯರ್ ಕಲಾವಿದ ಕಪಿಲ್ ಸೌಪರ್ಣಿಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೇ 12ಕ್ ಕೆ ಕುಂದಾಪುರದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ರಾಕೇಶ್ ಪೂಜಾ ಸಾವನ್ನಪ್ಪಿದ್ದರು. ಇದೀಗ ಕಾಂತಾರ ತಂಡಕ್ಕೆ ಮತ್ತೊಂದು ಸಾವಿನ ಶಾಕ್ ಆಗಿದೆ. ಕಾಂತಾರ ಚಿತ್ರದ ಯುವ ಕಲಾವಿದ ಆಗುಂಬೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಕಾಂತಾರ ಚಿತ್ರ ತಂಡಕ್ಕೆ ಮಾತ್ರವಲ್ಲದೇ ಅಭಿಮಾನಿಗಳಿಗೂ ಸಹ ಮತ್ತಷ್ಟು ಶಾಕ್ ಮೂಡಿಸಿದೆ.

ಕಾಂತಾರ ಚಿತ್ರದ ಕಲಾವಿದ ಕೇರಳದ ವಿಜು ವಿಕೆ ಸಾವನ್ನಪ್ಪಿದ್ದಾರೆ. ಕಾಂತಾರ ಪ್ರೀಕ್ವೆಲ್ ಸಿನಿಮಾದ ಮತ್ತೊಬ್ಬ ಸಹ ಕಲಾವಿದ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಕಾಮಿಡಿ ಕಲಾವಿದ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಆಗುಂಬೆ ಬಳಿಯ ಹೋಂ ಸ್ಟೇಯಲ್ಲಿ ಸಾವು ಸಂಭವಿಸಿದೆ. ಶೂಟಿಂಗ್‌ಗೆ ಬಂದಿದ್ದ ಕಾಮಿಡಿ ಕಲಾವಿದ ವಿಜು ವಿ ಕೆ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ. ಕಾಂತಾರದ ಶೂಟಿಂಗ್‌ಗೆ ಬಂದಿದ್ದ ಕಲಾವಿದ ವಿಜು ಆಗುಂಬೆಯಲ್ಲಿ ಮೃತಪಟ್ಟಿದ್ದಾರೆ.
ಇದೀಗ ಕಾಂತಾರ ಸಿನಿಮಾದಲ್ಲಿ ಮೂರನೇ ಕಲಾವಿದ ಸಾವನ್ನಪ್ಪಿದ್ದು ಶಾಕಿಂಗ್ ಆಗಿದೆ. ಈಗಾಗಲೇ ಇಬ್ಬರು ಕಲಾವಿದರನ್ನು ಕಳೆದುಕೊಂಡ ಚಿತ್ರತಂಡ ನೋವಿನಲ್ಲಿತ್ತು. ರಾಕೇಶ್ ಪೂಜಾರಿ ಮೃತ ಪಟ್ಟ ಒಂದು ತಿಂಗಳಿಗೆ ಇನ್ನೊಬ್ಬ ಕಲಾವಿದ ವಿಜು ಮೃತಪಟ್ಟಿದ್ದಾರೆ. ಸಿನಿಮಾ ಶೂಟಿಂಗ್ ಆರಂಭದಿಂದಲೂ ಒಂದಲ್ಲ ಒಂದು ದುರಂತಗಳು ನಡೆಯುತ್ತಿವೆ. ಕಾಂತಾರ ಚಿತ್ರತಂಡಕ್ಕೆ ಸಾಲು ಸಾಲು ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಈ ಹಿಂದೆಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ರಿಷಬ್ ಶೆಟ್ಟಿ ಅವರು ಪತ್ನಿ ಮತ್ತು ಮಕ್ಕಳು ಜೊತೆಗೆ ಭೇಟಿ ನೀಡಿದ್ದರು.
ನೇಮೋತ್ಸವದಲ್ಲಿ ಭಾಗಿಯಾದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ದೈವ ಕೆಲವು ಮಾತುಗಳನ್ನು ಹೇಳಿದೆ. ರಿಷಬ್ ಶೆಟ್ಟಿ ಅವರಿಗೆ ನಂಬಿ ಸಂಸಾರ ಎಂದು ಹೇಳಿದರೆ ಅವರ ಚಲನಚಿತ್ರದ ಒಂದು ತಂಡ. ಅದರಲ್ಲಿ ಸ್ವಲ್ಪ ಜಾಗ್ರತೆ ಇರಬೇಕು. 5 ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿಕೊಡುತ್ತೇನೆ ಅಂತ ದೈವ ಉತ್ತರ ನೀಡಿದೆ. ಈಗ ಟಿವಿಯಲ್ಲಿ ದುಷ್ಮನ್ ಎಂಬ ಒಂದು ಪದ ಬರುತ್ತಿದೆ. ಪ್ರತಿಯೊಬ್ಬರ ಏಳಿಗೆಗೂ ಯಾರಾದರೂ ಒಬ್ಬ ಅಡ್ಡ ಇರುತ್ತಾನೆ. ಏನೂ ಮಾಡದೇ ಇರುವ ಭಿಕ್ಷುಕನಿಗೂ ಕಲ್ಲು ಹೊಡೆಯುವವರು ಇದ್ದಾರೆ. ಕಾರಿನಲ್ಲಿ ಹೋಗುವವರಿಗೂ ಕಲ್ಲು ಹೊಡೆಯುವವರು ಇದ್ದಾರೆ. ಆದ್ದರಿಂದ ತಾಯಿ ಆದವಳು ಮಕ್ಕಳಿಗೆ ಜಾಗ್ರತೆಯಲ್ಲಿ ಹೋಗು ಅಂತ ಹೇಳುತ್ತಾಳೆ. ತಾಯಿ ಸ್ಥಾನದಲ್ಲಿ ನಿಂತುಕೊಂಡು ವಾರಾಹಿ ಪಂಜುರ್ಲಿ ಈ ರೀತಿ ಹೇಳಿದೆ ಎಂದು ಗೌರವಾಧ್ಯಕ್ಷ ರವಿ ಪ್ರಸನ್ನ ಅವರು ತಿಳಿಸಿದ್ದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications