Darshan Thoogudeepa: ಮದುವೆಗೆ ಕರೆದ ರಕ್ಷಿತಾ ಸಹೋದರನಿಗೆ ದರ್ಶನ್ ಹೇಳಿದ್ದೇನು?

ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ರಕ್ಷಿತಾ ಅವರ ಸಹೋದರ ರಾಣಾ ಮದುವೆ ಆಗುತ್ತಿದ್ದಾರೆ. ಮದುವೆಗೆ ಚಿತ್ರರಂಗದ ಹಲವಾರು ತಾರೆಯರಿಗೆ ಆಹ್ವಾನಿಸಲಾಗಿದೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನೂ ಮದುವೆಗೆ ಕರೆಯಲಾಗಿದೆ. ಖುದ್ದು ರಕ್ಷಿತಾ ಹಾಗೂ ರಾಣಾ ಅವರು ದರ್ಶನ್ ಮನೆಗೆ ತೆರಳಿ ಮದುವೆ ಆಮಂತ್ರಣ ನೀಡಿದ್ದಾರೆ. ಹಾಗಾದರೆ ಮದುವೆಗೆ ಹೋಗುತ್ತಾರಾ ದರ್ಶನ್? ದರ್ಶನ್ ಮದುವೆಗೆ ಕರೆದಾಗ ಹೇಳಿದ್ದೇನು?

ರಕ್ಷಿತಾ ಪ್ರೇಮ್ ಅವರು ದರ್ಶನ್ ತೂಗುದೀಪ ಅವರಿಗೆ ಸಹೋದರನ ರಾಣಾ ಮದುವೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ದರ್ಶನ್ ನೀಡಿದ ಮೊದಲ ಪ್ರತಿಕ್ರಿಯೆ ಏನು? ರಾಣಾ ಅವರನ್ನು ನೋಡಿ ದರ್ಶನ್ ಹೇಳಿದ್ದೇನು? ದರ್ಶನ್ ಭೇಟಿ ಮಾಡಿ ಬಂದ ಬಳಿಕ ರಾಣಾ ಹೇಳಿದ್ದೇನು?

what did darshan say to rakshithas brother who invited her to the wedding

ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ರಾಣಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡರು. ದರ್ಶನ್ ಅವರನ್ನು ಭೇಟಿ ಮಾಡಿದಾಗ ದರ್ಶನ್ ಅವರು ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ರಾಣಾ ಅವರಿಗೆ ದರ್ಶನ್ ಅವರು, 'ಆಗಲೇ ಮದುವೆ ವಯಸ್ಸಿಗೆ ಬಂದಾ ನೀನು? ಇಷ್ಟು ಬೇಗ ಅಷ್ಟೊಂದು ದೊಡ್ಡವನಾದಾ ನೀನು? ತುಂಬಾ ಸಣ್ಣವನು ಅನ್ಕೊಂಡಿದ್ದೆ ನಾನು' ಎಂದು ದರ್ಶನ್ ಕಾಮಿಡಿ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನಾಚಿಕೆ ಆಯ್ತು ಎಂದು ರಾಣಾ ಹೇಳಿಕೊಂಡಿದ್ದಾರೆ. ಮದುವೆ ವಿಚಾರ ಕೇಳಿ ದರ್ಶನ್ ಅವರು ತುಂಬಾ ಖುಷಿ ಪಟ್ಟರು. ಮನಸ್ಸಿಂದ ಶುಭ ಹಾರೈಸಿದರು. ನನಗೆ ಹಾಗೂ ಅಕ್ಕ ರಕ್ಷಿತಾ ಅವರಿಗೆ ಇದು ತುಂಬಾ ಖುಷಿ ಆಯ್ತು ಎಂದು ರಾಣಾ ಅವರು ಹೇಳಿದ್ದಾರೆ.

ಅಲ್ಲದೆ ದರ್ಶನ್ ಅವರ ಬಗ್ಗೆ ರಕ್ಷಿತಾ ಕೂಡ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಿತಾ ಅವರು, 'ದರ್ಶನ್ ಅವರನ್ನು ಮದುವೆಗೆ ಆಹ್ವಾನ ಮಾಡಿದ್ವಿ. ಅವರು ಖುಷಿಯಿಂದ ಮದುವೆಗೆ ಬರುವುದಾಗಿ ಹೇಳಿದ್ದಾರೆ. ಅವರ ಖುಷಿ ಹಾಗೂ ಅವರ ಮಾತುಗಳನ್ನು ಕೇಳಿ ನಮಗೆ ತುಂಬಾ ಸಂತೋಷವಾಯ್ತು' ಎಂದು ರಕ್ಷಿತಾ ಹೇಳಿದ್ದಾರೆ.

ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದ ರಕ್ಷಿತಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ದರ್ಶನ್ ತೂಗುದೀಪ ಅವರು ಜೈಲಿನಲ್ಲಿ ಇರುವಾಗ ನಟಿ ರಕ್ಷಿತಾ ಅವರನ್ನು ಮೊದಲು ಭೇಟಿ ಮಾಡಿ ಬಂದಿದ್ದರು. ದರ್ಶನ್ ಅವರು ಜೈಲಿಗೆ ಹೋದ ಬಳಿಕ ಅವರನ್ನು ಕಂಡು ಹೆಚ್ಚು ಬೇಸರ ವ್ಯಕ್ತಪಡಿಸಿದವರಲ್ಲಿ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ಒಬ್ಬರಾಗಿದ್ದಾರೆ.

ದರ್ಶನ್ ಜೈಲಿನಲ್ಲಿ ಇರುವಾಗ ರಕ್ಷಿತಾ ಅವರು 'ದರ್ಶನ್ ನನ್ನ ಕುಟುಂಬಸ್ಥರು. ಅವರಿಗೆ ತೊಂದರೆ ಆಗಿದೆ. ನಾವೆಲ್ಲರೂ ಅವರೊಂದಿಗೆ ಇರುತ್ತೇವೆ. ಅವರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ನಮಗೆ ಏನಾದರೂ ಆದರೆ ಅವರು ನಮ್ಮ ಜೊತೆ ನಿಲ್ಲುವಂತೆ ನಾವೂ ಕೂಡ ಅವರ ಜೊತೆಗೆ ನಿಂತಿದ್ದೇವೆ' ಎಂದಿದ್ದರು.

ಈಗ ರಕ್ಷಿತಾ ಅವರ ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯುತ್ತಿದೆ. ಇದರಲ್ಲಿ ದರ್ಶನ್ ಭಾಗಿಯಾಗಬೇಕು ಅನ್ನೋದು ರಕ್ಷಿತಾ ಅವರ ಆಸೆ. ದರ್ಶನ್ ಕಷ್ಟದ ಸಮಯದಲ್ಲಿ ರಕ್ಷಿತಾ ಅವರ ಬೆನ್ನಿಗೆ ನಿಂತಿದ್ದರು. ಈಗ ಸಂತೋಷದ ಸಮಯದಲ್ಲೂ ರಕ್ಷಿತಾ ದರ್ಶನ್ ಅವರನ್ನು ಆಹ್ವಾನಿಸಿದ್ದಾರೆ.

ರಾಣಾ ಮದುವೆಯಲ್ಲಿ ದರ್ಶನ್ ಭಾಗಿ ಸಾಧ್ಯತೆ-

ರಾಣಾ ಮದುವೆ ಫೆಬ್ರವರಿ 7-8ರಂದು ನಡೆಯಲಿದೆ. ಇದರಲ್ಲಿ ದರ್ಶನ್ ತೂಗುದೀಪ ಭಾಗಿ ಆಗುವ ಸಾಧ್ಯತೆ ಇದೆ. ಯಾಕೆಂದರೆ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಮೊದಲಿನಿಂದಲೂ ಸಿನಿಮಾ ಮಾಡಿಕೊಂಡು ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇವರು ಕಷ್ಟದ ಸಮಯದಲ್ಲಿ ದರ್ಶನ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಮೊದಲ ವ್ಯಕ್ತಿ ಅಂದರೆ ತಪ್ಪಾಗುವುದಿಲ್ಲ. ಇದರಿಂದಾಗಿ ದರ್ಶನ್ ರಾಣಾ ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+