ಕಂಗನಾ ರನೌತ್‌ಗೆ ಹೊಡೆದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಬೆಂಬಲಕ್ಕೆ ಬಂದ ವಿಶಾಲ್ ದದ್ಲಾನಿ; ನೆಟ್ಟಿಗರು ಹೇಳಿದ್ದೇನು?
ಮುಂಬೈ, ಜೂನ್. 08: ಇತ್ತೀಚೆಗಷ್ಟೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಸುದ್ದಿ ವೈರಲ್ ಆಗುತಿದ್ದ ಹಾಗೆ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದೆ ವೇಳೆ ಘಟನೆಗೆ ಪ್ರತಿಕ್ರಿಯೆಯಾಗಿ, ಹೆಸರಾಂತ ಸಂಗೀತ ಸಂಯೋಜಕ ಮತ್ತು ಗಾಯಕ ವಿಶಾಲ್ ದಾದ್ಲಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಿಐಎಸ್ಎಫ್ ಸಿಬ್ಬಂದಿಯನ್ನು ಬೆಂಬಲಿಸಿದ್ದಾರೆ.

ಕೆಲಸ ನೀಡುವುದಾಗಿ ಹೇಳಿದ ವಿಶಾಲ್ ದಾದ್ಲಾನಿ
ಸಂಗೀತ ಸಂಯೋಜಕರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, "ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಈ ಸಿಐಎಸ್‌ಎಫ್ ಸಿಬ್ಬಂದಿಯ ಕೋಪವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಸಿಐಎಸ್‌ಎಫ್ ಆಕೆಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡರೆ, ಅವರ ವಿರುದ್ಧ ಸಿಐಎಸ್ ಎಫ್ ಕ್ರಮ ಕೈಗೊಂಡರೆ ಅವರಿಗಾಗಿ ಕೆಲಸ ಕಾಯುತ್ತಿರುತ್ತದೆ. ಜೈ ಹಿಂದ್, ಜೈ ಜವಾನ್ ಜೈ ಕಿಸಾನ್" ಎಂದು ಬರೆದಿದ್ದಾರೆ.
ಇದಕ್ಕೆ ನೆಟ್ಟಿಗರು ಹಲವು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಶಾಲ್ ದದ್ಲಾನಿ ಅವರಿಗೆ ಹಲವರು ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಕಂಗನಾ ರನೌತ್‌ಗೆ ಬೆಂಬಲ ನೀಡಿದ್ದಾರೆ. ಹಿಂಸೆಯನ್ನು ಬೆಂಬಲಿಸುತ್ತಿರುವುದನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ರೈತರ ಪ್ರತಿಭಟನೆ ಬೆಂಬಲಿಗರು ಸಕತ್ ಸಪೋರ್ಟ್ ಮಾಡುತ್ತಿದ್ದಾರೆ.
ಒಬ್ಬ ಬಳಕೆದಾರ, "ನಾನು ಕಂಗನಾ ರನೌತ್ ಅವರ ಅಸಂಬದ್ಧತೆಯನ್ನು ನಿಜವಾಗಿಯೂ ದ್ವೇಷಿಸುತ್ತೇನೆ. ಆದರೆ ವಿಶಾಲ್ ದದ್ಲಾನಿಯವರ ಹೇಳಿಕೆಯು ಅತ್ಯಂತ ದುಃಖಕರವಾಗಿದೆ. ನೀವು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಪೂರ್ಣವಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ನೀವು ಸಾರ್ವಜನಿಕ ವ್ಯಕ್ತಿಯಾಗಿ ಯಾರ ವಿರುದ್ಧವೂ ಇಂತಹ ಹಿಂಸೆಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರಚೋದಿಸುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಇನ್ನು, ರೈತ ಪ್ರತಿಭಟನೆಯ ಬೆಂಬಲಿಗರು ಕೆಲವು ಬಳಕೆದಾರರು ವಿಶಾಲ್ ದಾದ್ಲಾನಿ ಅವರ ಬೆಂಬಲವನ್ನು ಶ್ಲಾಘಿಸಿದ್ದಾರೆ. "ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ CISF ಮಹಿಳೆ ಕುಲ್ವಿಂದರ್ ಕೌರ್‌ಗೆ ಕೆಲಸ ನೀಡುವುದಾಗಿ ವಿಶಾಲ್ ದದ್ಲಾನಿ ಹೇಳುತ್ತಾರೆ. ನಿಜವಾಗಿಯೂ ಒಳ್ಳೆಯತನಕ್ಕೆ ಬೆಂಬಲ ನೀಡುವ ಜನರಿದ್ದಾರೆ ಎಂಬುದೇ ಖುಷಿ" ಎಂದು ಹೇಳಿದ್ದಾರೆ.

ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ CISF ಸಿಬ್ಬಂದಿ ಯಾರು?
ಕ್ವೀನ್ ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ, ಕಂಗನಾ ರನೌತ್ ದೂರು ದಾಖಲಿಸಿದ ಪರಿಣಾಮವಾಗಿ ಕುಲ್ವಿಂದರ್ ಕೌರ್ ಅವರನ್ನು ಬಂಧೀಸಲಾಗಿದೆ. ಕೆಲಸದಿಂದ ಅಮಾನತು ಮಾಡಲಾಗಿದೆ.
35 ವರ್ಷದ ಕುಲ್ವಿಂದರ್ ಕೌರ್ ಪಂಜಾಬ್‌ನ ಸುಲ್ತಾನ್‌ಪುರ ಲೋಧಿಯವರು. ಕುಲ್ವಿಂದರ್ ಕೌರ್ ಅವರು 2009 ರಲ್ಲಿ ಸಿಐಎಸ್ಎಫ್ ಸೇರ್ಪಡೆಗೊಂಡರು ಮತ್ತು 2021 ರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ CISF ಪಡೆಯ ವಾಯುಯಾನ ಭದ್ರತಾ ಗುಂಪಿನಲ್ಲಿದ್ದಾರೆ. ಕುಲ್ವಿಂದರ್ ಕೌರ್ ಸಹೋದರ ಶೇರ್ ಸಿಂಗ್ ರೈತ ನಾಯಕ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಸಹೋದರಿಯ ಬೆಂಬಲಕ್ಕೆ ನಿಂತಿದ್ದಾರೆ.
ಇನ್ನು, ಕುಲ್ವಿಂದರ್ ಕೌರ್ ಹೇಳುವಂತೆ ರೈತ ಪ್ರತಿಭಟನೆಯ ಸಮಯದಲ್ಲಿ, "ಪ್ರತಿಭಟನೆ ಮಾಡುತ್ತಿರುವ ಮಹಿಳಾ ರೈತರು ತಲಾ 100 ರೂಪಾಯಿಗಾಗಿ ರೈತರ ಪ್ರತಿಭಟನೆಗೆ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲಿ ಇದ್ದ ರೈತ ಮಹಿಳೆಯರಲ್ಲಿನನ್ನ ತಾಯಿ ಕೂಡ ಕುಳಿತಿದ್ದರು. ನನ್ನ ತಾಯಿಗೆ ಆದ ಅವಮಾನವನ್ನು ಸಹಿಸಲಾಗಲಿಲ್ಲ" ಎಂದು ಹೇಳಿದ್ದರು.












Click it and Unblock the Notifications