Yash Tiger Pendant Viral: ನಟ ಯಶ್ ಕೊರಳಲ್ಲಿರೋದು ಹುಲಿ ಉಗುರಲ್ಲ, ಹುಲಿನೇ: ಫ್ಯಾನ್ಸ್

ಬೆಂಗಳೂರು, ಆಗಸ್ಟ್ 19: ಕನ್ನಡದ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಮಹೂರ್ತ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನಂತರ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಆಚರಿಸಿದ್ದರು. ಈ ವೇಳೆ ನಟ ಯಶ್ ಮೈ ಮೇಲೆ ಕಂಡು ಬಂದ ಚಿನ್ನದ 'ಹುಲಿ' ಡಾಲರ್ ಎಲ್ಲ ಕಣ್ಣಿಗೆ ಕುಕ್ಕುತ್ತಿದೆ.

ಶೂಟಿಂಗ್, ಸಿನಿಮಾ ಎಂದು ಅದೆಷ್ಟೋ ಬ್ಯೂಸಿ ಇದ್ದರೂ ಸಹ ನಟ ಯಶ್ ಅವರು ತಮ್ಮ ಫ್ಯಾಮಿಲಿಗೆ ಸಮಯ ಮೀಸಲಿಡುತ್ತಾರೆ. ಹಬ್ಬಗಳು ಸಂದರ್ಭದಲ್ಲಿ ಕುಟುಂಬದ ಜೊತೆಗೆ ಅವರು ಆಚರಣೆ ಮಾಡುತ್ತಾರೆ. ಮೊನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬವನ್ನು ಸಾಂಪ್ರದಾಯಿಕ ವಾಗಿ ಆಚರಿಸಿದ್ದಾರೆ.

Viral Photo of Actor Yash s Gold Tiger Face Pendant Fans Crazy About Him

ಯಶ್ ಅವರು ಪಂಚೆ, ಶಲ್ಯ ಶೆರ್ಟ್‌ನಲ್ಲಿ, ರಾಧಿಕಾ ಪಂಡಿತ್ ಅವರು ಸೀರೆಯಲ್ಲಿ ವಲಮಹಾಲಕ್ಷ್ಮಿ ಆಚರಿಸಿದ್ದಾರೆ. ಇದರ ಫೋಟೋಗಳನ್ನು ನಟಿ ರಾಧಿಕಾ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ನಟ ಯಶ್ ಕೊರಳಲ್ಲಿ ಹುಲಿ ಡಾಲರ್ ಇರುವುದನ್ನು ಅವರ ಅಭಿಮಾನಿಗಳು ಗುರುತಿಸಿದ್ದಾರೆ.

ಹುಲಿ ಡಾಲರ್ ಧರಿಸಿದ ಯಶ್ ಫೋಟೋವನ್ನು ಫ್ಯಾನ್ಸ್ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ಎಲ್ಲರು ಹುಲಿ ಉಗುರು ಧರಿಸಿದರೆ ನಮ್ ಭಾಸ್ ಹುಲಿಯನ್ನು ಧರಿಸಿದ್ದಾರೆ, ರಾಜಾಹುಲಿ ಎಂದೆಲ್ಲ ಬರೆದುಕೊಂಡು ಪೋಸ್ಟ್ ಹಾಕಿಕೊಂಡಿದ್ದಾರೆ.

ಅಭಿಮಾನಿಗಳು ತಾವು ಇಷ್ಟಪಡುವ ನಟ, ನಟಿಯರ ದೈನಂದಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಉಡುಪಿ, ಅವರ ಸ್ಟೈಲ್ ಎಲ್ಲವನ್ನು ಸೂಕ್ಷ್ಮವಾಗಿ ಫ್ಯಾನ್ಸ್ ಗಮನಿಸುತ್ತಾರೆ. ಸದ್ಯ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರ ಮುಂದಿನ ಸಿನಿಮಾ ಟಾಕ್ಸಿಕ್ ಮೇಲೆ ಭಾರೀ ನಿರೀಕ್ಷೆ ಇದೆ.

ಟಾಕ್ಸಿಕ್ ಮೇಲೆ ಭಾರೀ ನಿರೀಕ್ಷೆ

ಅಭಿಮಾನಿಗಳು ತಾವು ಇಷ್ಟಪಡುವ ನಟ, ನಟಿಯರ ದೈನಂದಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಉಡುಪಿ, ಅವರ ಸ್ಟೈಲ್ ಎಲ್ಲವನ್ನು ಸೂಕ್ಷ್ಮವಾಗಿ ಫ್ಯಾನ್ಸ್ ಗಮನಿಸುತ್ತಾರೆ. ಸದ್ಯ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರ ಮುಂದಿನ ಸಿನಿಮಾ ಟಾಕ್ಸಿಕ್ ಮೇಲೆ ಭಾರೀ ನಿರೀಕ್ಷೆ ಇದೆ.

ನಟ ಯಶ್ ಅವರ ಮುಂದಿನ ಹೈಬಜೆಟ್ ಸಿನಿಮಾ ಟಾಕ್ಸಿಕ್ ದೇಶಾದ್ಯಂತ ಅತ್ಯಧಿಕ ನಿರೀಕ್ಷೆ ಹುಟ್ಟಿಸಿದೆ. ಕಾರಣ ಯಶ್ ಅವರ ಈ ಹಿಂದಿನ ಕೆಜಿಎಫ್ ಸರಣಿ ಸಿನಿಮಾಗಳು. ಅಲ್ಲದೇ ಯಶ್ ಅವರ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಬೇರೆ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಹೀಗಾಗಿ ಈ ಟಾಕ್ಸಿಕ್ ಮೇಲೆ ಎಲ್ಲ ಕಣ್ಣು ನೆಟ್ಟಿದೆ.

ಟಾಕ್ಸಿಕ್ ಯಾವಾಗ ರಿಲೀಸ್

ಈಗಷ್ಟೇ ಶುರುವಾಗಿರುವ ಟಾಕ್ಸಿಕ್ ಶೂಟಿಂಗ್ ಮುಗಿಯಲು 250 ದಿನಗಳು ಬೇಕಾಗಬಹುದು. ಈ ಮೊದಲೇ ನಿಗದಿಯಂತೆ 2025ರಂದು ಏಪ್ರಿಲ್ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತು. ಆದರೆ ಸ್ವಲ್ಪ ತಡವಾಗಬಹುದು ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+