ಮೇಘನಾ ರಾಜ್ ಜೊತೆಗೆ 2ನೇ ಮದುವೆ ಬಗ್ಗೆ ಮಾತನಾಡಿದವರಿಗೆ ಉಗಿದ ವಿಜಯರಾಘವೇಂದ್ರ ಫ್ಯಾನ್ಸ್
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ನೊಂದು ಹೋಗಿದ್ದಾರೆ. ಒಡಲಲ್ಲಿ ಪುಟ್ಟ ಕಂದಮ್ಮನ್ನು ಇಟ್ಟುಕೊಂಡು ಯಾತನೆ ಅನುಭವಿಸುತ್ತಿದ್ದಾರೆ. ಮಗುವಿನ ಮುಖದಲ್ಲಿ ಪತಿಯ ಮುಖ ಕಾಣುತ್ತಾ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಆದರೂ ಆ ಕಷ್ಟ ತೋರಿಸಿಕೊಳ್ಳದೆ ನಗುವ ಮೇಘನಾ ರಾಜ್ ಅವರನ್ನು ಕಂಡರೆ ಎಂಥವರ ಕಲ್ಲು ಹೃದಯ ಕೂಡ ಕರಗಿ ಹೋಗುತ್ತದೆ.
ಇಂಥಹ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಮನಸ್ಸಿಗೆ ನೋವು ಮಾಡಬಾರದು. ಆದರೆ ಕೆಲವರು ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಮಾಡುತ್ತಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು ಚಿರಂಜೀವಿ ಸರ್ಜಾ ಅಭಿಮಾನಿಗಳ ಬಳಿಕ ಇದೀಗ ವಿಜಯರಾಘವೇಂದ್ರ ಅಭಿಮಾನಿಗಳು ಸುಳ್ಳು ಸುದ್ದಿ ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಎರಡನೇ ಮದುವೆ ಬಗ್ಗೆ ಮೇಘನಾರಾಜ್ ಹಾಗೂ ವಿಜಯರಾಘವೇಂದ್ರ ಇಬ್ಬರೂ ಕೂಡ ನೇರವಾಗಿ ಮಾಧ್ಯಮದ ಮುಂದೆ ಬಂದು ಮಾತನಾಡದೇ ಇದ್ದರೂ ಕೂಡ ಕೆಲ ಖಾಸಗಿ ವಾಹಿನಿಯ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಮೇಘನಾರಾಜ್ ಹಾಗೂ ವಿಜಯರಾಘವೇಂದ್ರ ಇಬ್ಬರೂ ಕೂಡ ನಾವು ಮದುವೆ ಆಗುತ್ತೇವೆ ಅನ್ನೋ ಸುದ್ದಿ ಸುಳ್ಳು. ನಮ್ಮಿಬ್ಬರ ನಡುವೆ ಅಂತಹ ಆಲೋಚನೆಗಳೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ತಾವಿಬ್ಬರು ಮದುವೆ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಮೇಘನಾರಾಜ್ ಆಗಲಿ ವಿಜಯರಾಘವೇಂದ್ರ ಆಗಲಿ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಜೊತೆಗೆ ಇವರಿಬ್ಬರ ಕುಟುಂಬಸ್ಥರೂ ಕೂಡ ಈ ಬಗ್ಗೆ ಯಾವುದೇ ವಿಷಯಗಳನ್ನು ಹಂಚಿಕೊಂಡಿಲ್ಲ.
ಹೀಗಿದ್ದರೂ ಕೂಡ ಯಾವ ಆಧಾರದ ಮೇಲೆ ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ವಿಜಯರಾಘವೇಂದ್ರ ಅಭಿಮಾನಿಗಳು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಮೇಘನಾರಾಜ್ ವಿಜಯರಾಘವೇಂದ್ರ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಜೊತೆಗೆ ಈ ಬಗ್ಗೆ ಕುಟುಂಬಸ್ಥರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿಗಳು ವೈರಲ್ ಆಗಿವೆ.
ಇದರಿಂದಾಗಿ ವಿಜಯರಾಘವೇಂದ್ರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸುಳ್ಳು ಸುದ್ದಿ ಮಾಡೋರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಿಂದ ಕಾನೂನು ಜಾರಿಗೆ ತರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆಧಾರ ರಹಿತ ಸುದ್ದಿಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಯೂಸರ್ಸ್ ಆಸೆಗೆ ಕೆಲ ಸುದ್ದಿ ವಾಹಿನಿಗಳು, ಯೂಟ್ಯೂಬ್ ಚಾನೆಲ್‌ಗಳು ಯಾವ ಮಟ್ಟಕ್ಕೂ ಮಾನ ಹಾನಿ ಮಾಡಬಹುದು ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿದೇಶ ಪ್ರವಾಸದಲ್ಲಿ ಇರುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು. ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದ ವಿಜಯರಾಘವೇಂದ್ರ ನೋವಿನ ದಿನಗಳಿಂದ ಇನ್ನೂ ಕೂಡ ಹೊರಬರಲು ಆಗದೇ ಒದ್ದಾಡುತ್ತಿದ್ದಾರೆ. ಮಗನನ್ನು ನೋಡಿ ತಮ್ಮೆಲ್ಲಾ ದುಖ:ವನ್ನು ನುಂಗಿಕೊಂಡು ಇದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಮನಸ್ಸಿಗೆ ನೋವುಂಟು ಮಾಡುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸುಳ್ಳು ಸುದ್ದಿ ಮಾಡೋರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಒಬ್ಬ ನಟಿ ಅನ್ನೋದಕ್ಕಿಂತ ಅವರು ಒಬ್ಬ ಹೆಣ್ಣು, ಅವರಿಗೆ ಇದರಿಂದ ಎಷ್ಟು ನೋವಾಗುತ್ತದೆ ಅನ್ನೋದನ್ನು ಯೋಚನೆ ಮಾಡಬೇಕು. ಮೇಘನಾ ರಾಜ್ ಒಬ್ಬ ನಟಿ ಅವರ ಬಗ್ಗೆ ಸುದ್ದಿ ಮಾಡಿದರೆ ಅದರಿಂದ ಫಾಲೋವರ್ಸ್ ಹೆಚ್ಚಾಗುತ್ತಾರೆ, ಅದರಿಂದ ಹಣ ಬರುತ್ತದೆ ಅನ್ನೋ ಸ್ವಾರ್ಥಕ್ಕೆ ಬೀಳಬಾರದು.












Click it and Unblock the Notifications