ರಶ್ಮಿಕಾ ಜತೆ ಎಂಗೇಜ್ಮೆಂಟ್ ಬೆನ್ನಲ್ಲೆ ಅಪಘಾತ: ವಿಜಯ್ ದೇವರಕೊಂಡ ಪ್ರತಿಕ್ರಿಯೆ: ಜಾತಕ ಪರಿಶೀಲಿಸಿ ಅಣ್ಣಾ..!
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ವರ್ಷಗಳಿಂದಲೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ ನಡುವೆ ಇತ್ತೀಚೆಗೆ ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಅದರ ಬೆನ್ನಲ್ಲೆ ನಟ ವಿಜಯ್ ಅವರ ಕಾರು ನೆನ್ನೆ ಸೋಮವಾರ ಸಂಜೆ ಅಪಘಾತಕ್ಕೀಡಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದಾರೆ. ಎಂಗೇಜ್‌ಮೆಂಟ್ ಬೆನ್ನಲ್ಲೆ ಹೀಗಾಗಿದ್ದಕ್ಕೆ ಕೆಲವರು ವಿಜಯ್‌ಗೆ ಜಾತಕ ಪುನಃ ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಇದು ಮತ್ತೊಂದು ಹಂತದ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.
ಎಂಗೇಜ್ ಮೆಂಟ್ ಖುಷಿಯಲ್ಲಿದ್ದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಈ ಅಪಘಾತ ಆಘಾತ ನೀಡಿದೆ. ಸೋಮವಾರ ಸಂಜೆ ವಿಜಯ್ ಅವರು ಪುಟ್ಟಪರ್ತಿ ಸಾಯಿಬಾಬಾ ಅವರ ಸಮಾಧಿ ದರ್ಶನ ಮುಗಿಸಿ ತಮ್ಮ ಐಶಾರಾಮಿ ಕಾರಿನಲ್ಲಿ ಹೈದರಾಬಾದ್‌ಗೆ ತೆರಳುತ್ತಿದ್ದರು. ಈ ವೇಳೆ ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬರ್ತಿದ್ದಾಗ ಬೊಲೆರೋ ವಾಹನ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಏನು ಆಗಿಲ್ಲ. ಕಾರು ಜಖಂಡಗೊಂಡಿದೆ. ವಿಜಯ್ ಜಸ್ಟ್ ಮಿಸ್ ಆಗಿದ್ದಾರೆ.

ಈ ಘಟನೆಯಿಂದ ಅವರ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಎಂಗೇಜ್ ಮೆಂಟ್ ಖುಷಿಯನ್ನು ಈ ಘಟನೆ ಕಹಿ ಅನುಭವ ನೀಡಿದೆ. ಇದೆಲ್ಲವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಂತೆ ನಟ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಆಕ್ಸಿಡೆಂಟ್ ಬಳಿಕ ವಿಜಯ್ ದೇವರಕೊಂಡ ಪ್ರತಿಕ್ರಿಯೆ
"ಆಲ್ ಈಸ್ ವೆಲ್. ಕಾರು ಅಪಘಾತವಾಗಿದೆ. ನಾವೆಲ್ಲರು ಸುರಕ್ಷಿತವಾಗಿದ್ದೇವೆ. ನಾನು ಅಪಘಾತ ಸ್ಥಳದಿಂದ ತೆರಳಿ ಆರಾಮಾಗಿ ವರ್ಕೌಟ್ ಮಾಡಿ ಮನೆಗೆ ತೆರಳಿದ್ದೇನೆ. ನನ್ನ ತಲೆಗೆ ನೋವಾಗಿದೆ. ಯಾವ ತೊಂದರೆ ಇಲ್ಲ. ಒಂದು ಬಿರಿಯಾನಿ ತಿಂದು ನಿದ್ದೆ ಮಾಡಿದ್ರೆ ಎಲ್ಲವು ಸರಿ ಹೋಗುತ್ತೆ. ಸ್ಪಂದಿಸಿದ ಎಲ್ಲರಿಗೂ ನನ್ನ ಕಡೆಯಿಂದ ಅಪ್ಪುಗೆ' ಎಂದು ಹಾರ್ಟ್ ಎಮೋಜಿ ಹಾಕಿ ವಿಜಯ್ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ.
ವಿಜಯ್ ಅವರ ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಿಮಗೆ ನಿದ್ದೆ, ಬಿರಿಯಾನಿ ಅಲ್ಲ ತುರ್ತಾಗಿ ರಶ್ಮಿಕಾ ಅವರ ಅಪ್ಪುಗೆ ಬೇಕಿದೆ ಎಂದಿದ್ದಾರೆ. ನೀಮಗೆ ಬಿರಿಯಾ, ನಿದ್ದೆ ಸರಿಯಾಗಲ್ಲ ಅನ್ನ, ನೀವು ಈಗಷ್ಟೇ ಎಂಗೇಜ್ ಮೆಂಟ್ ಆಗಿದ್ದೀರಿ. ನಿಮಗೆ ದೃಷ್ಟಿ ತಾಗಿದೆ. ದೃಷ್ಟಿ ತೆಗೆಸಿಕೊಳ್ಳಿ ಅಂತಲೂ ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ.
ಜಾತಕ ಚೆಕ್ ಮಾಡಿಸಿ ಎಂದ ನೆಟ್ಟಿಗರು
ಈ ಮಧ್ಯೆ ಇತ್ತೀಚೆಗಷ್ಟೇ ನಿಮಗೆ ರಶ್ಮಿಕಾ ಜೊತೆಗೆ ಎಂಗೇಜ್ ಮೆಂಟ್ ಆಗಿದೆ. ನಿಮ್ಮ ಜಾತಕ ಪರಿಶೀಲಿಸಿದ್ದೀರಾ ಅಣ್ಣಾ?. ಅಯ್ಯ ನಿಮ್ಮ ಜಾತಕ ಹೊಂದಿಸಿ ನೋಡಿ. ಕಾರು ಡಿಕ್ಕಿ ಹೊಡೆದದ್ದು ಆಮೇಲೆ ಪರಿಶೀಲಿಸೋಣ ಎಂದು ವಿಜಯ್ ದೇವರಕೊಂಡ ಮೇಲೆ ಪ್ರೀತಿ ತೋರಿಸಿದ್ದಾರೆ. ಈ ಮೂಲಕ ಎಂಗೇಜ್ ಮೆಂಟ್ ಬಳಿಕ ಅಂದರೆ ರಶ್ಮಿಕಾ ಅಧಿಕೃತವಾಗಿ ಜೊತೆಯಾದ ಬಳಿಕ ಇದೆಲ್ಲ ಆಗಿದೆ ಎಂಬರ್ಥದಲ್ಲಿಯು ಹಲವು ಮಾತನಾಡುತ್ತಿದ್ದಾರೆ.
ಈವರೆಗೆ ಕದ್ದು ಮುಚ್ಚಿ ಓಡಾಡುತ್ತಿದ್ದ ರಶ್ಮಿಕಾ, ವಿಜಯ್ ಜೋಡಿ ಇದೀಗ ಕುಟುಂಬ ಸಮೇತರಾಗಿ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲವು ಕುಟುಂಬದ ಮೂಲಗಳಿಂದ ಬಂದ ಮಾಹಿತಿ ಆಗಿದೆ. ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ದೇವರಕೊಂಡ ಆಗಲಿ ಪ್ರತಿಕ್ರಿಯಿಸಿಲ್ಲ. ಇದೆಲ್ಲ ಸುದ್ದಿ ಓಡಾಡುವಾಗಲೇ ವಿಜಯ್ ಕಾರು ಅಪಘಾತವು ಕುಟುಂಬಸ್ಥರನ್ನು, ರಶ್ಮಿಕಾರನ್ನು ಚಿಂತೆಗೀಡು ಮಾಡಿದೆ.
ರಶ್ಮಿಕಾ-ವಿಜಯ್ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ
ಎಂಗೇಜ್ ಮೆಂಟ್ ಬೆನ್ನಲ್ಲೆ ಅವರಿಬ್ಬರು ಹೆಚ್ಚು ವರ್ಷಗಳ ಕಾಲ ಜೊತೆಗೆ ಇರುವುದಿಲ್ಲ ಅಂತಲೂ ಜ್ಯೋತಿಷ್ಯರೊಬ್ಬರು ಭವಿಷ್ಯ ನುಡಿದಿದ್ದಾರೆ ಎಂದು ವರದಿ ಆಗಿದೆ. ಕರ್ನಾಟಕದ ಕೊಡಗಿನ ರಶ್ಮಿಕಾ ವಿಜಯ್‌ಗೂ ಮೊದಲು ನಟ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿದ್ದರು. ನಿಶ್ಚಿತಾರ್ಥ ಸಹ ಆಗಿತ್ತು. ನಂತರ ಅದು ಮುರಿದು ಬೀಳುತ್ತಿದ್ದಂತೆ ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ಬ್ಯೂಸಿಯಾದರು. ಅಲ್ಲಿ ವಿಜಯ್ ಜೊತೆಗೆ ಸ್ನೇಹವಾಗಿ, ನಂತರ ಅದು ಪ್ರೀತಿಗೆ ತಿರುಗಿದ್ದು, ಅವರಿಬ್ಬರು ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿರುವಾಗಲೇ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಗುಲ್ಲೆದ್ದಿದೆ.












Click it and Unblock the Notifications