ಅಮೃತಧಾರೆ ಧಾರಾವಾಹಿಗೆ ಕ್ಯಾಕರಿಸಿ ಉಗಿದ ಜನ..ಯಾಕೆ?

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಮೇಲೆ ಪ್ರೇಕ್ಷಕರು ತೀರಾ ಅಸಮಾಧಾನಗೊಂಡಿದ್ದಾರೆ. ನಟ ರಾಜೇಶ್‌ ನಟರಂಗ, ವನಿತಾ ವಾಸು, ಛಾಯ ಸಿಂಗ್‌ ಸೇರಿದಂತೆ ದೊಡ್ಡ ಕಲಾವಿದರ ಸಮಾಗಮದಿಂದ ಆರಂಭದಲ್ಲೇ ಗೆದಿದ್ದ ಅಮೃತಧಾರೆ ಧಾರಾವಾಹಿ ಮೊದಮೊದಲು ಕಥೆ ಕೂಡ ಇಂಟ್ರಸ್ಟಿಂಗ್‌ ಆಗಿ ಪ್ರೇಕ್ಷಕರಿಗೆ ಹತ್ತಿರವಾಗಿತ್ತು.

ಗೌತಮ್‌ ದಿವಾನ್‌- ಭೂಮಿ ಟೀಚರ್‌ ಜೋಡಿಯನ್ನು ಜನ ಮನಸಾರೆ ಮೆಚ್ಚುಕೊಂಡಿಕೊಂಡಿದ್ದರು. ಈ ಜೋಡಿಯ ಸುತ್ತ ಹೆಣೆಯಲಾದ ಕಥೆಯಲ್ಲಿ ಗೌತಮ್‌ ದಿವಾನ್‌ ತಾಯಿ-ತಂಗಿ ಸಿಕ್ಕ ಕಥೆ ಕೂಡ ಜನರಿಗೆ ಇಷ್ಟವಾಗಿತ್ತು. ಆದರೆ ಬರಬರುತ್ತಾ ಅಮೃತಧಾರೆ ಧಾರಾವಾಹಿ ಕಥೆ ಹಳಿ ತಪ್ಪಿದಂತೆ ಕಾಣುತ್ತಿದ್ದು, ಗೌತಮ್‌ ದಿವಾನ್‌ಗೆ ಎರಡನೇ ಮದುವೆ ಎನ್ನುವ ಕಥಾ ವಸ್ತುವನ್ನು ಕೈಗೆತ್ತಿಕೊಳ್ಳಲಾಗಿದೆ.

Viewers Outrage Against At Kannada Amruthadhare Serial story

ತನಗೆ ಮಗುವಾಗುವುದಿಲ್ಲ ಎನ್ನುವ ಸುಳ್ಳು ಮಾಹಿತಿಯನ್ನೇ ನಂಬಿರುವ ಭೂಮಿ, ಬೆಟ್ಟದಷ್ಟೂ ಪ್ರೀತಿಯಿದ್ದರೂ ಗೌತಮ್‌ ದಿವಾನ್‌ಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾಳೆ. ಮಧುರಾ ಎನ್ನುವ ಪಾತ್ರವನ್ನು ಧಾರಾವಾಹಿಯಲ್ಲಿ ಹೊಸದಾಗಿ ಪರಿಚಯಿಸಲಾಗಿದ್ದು, ಗೌತಮ್‌ ದಿವಾನ್‌ಗೆ ಎರಡನೇ ಪತ್ನಿಯಾಗಲು ಆಕೆ ಕೂಡ ಒಪ್ಪಿದ್ದಾಳೆ. ಈ ಕಥಾ ಹಂದರಲ್ಲಿ ಅಮೃತಧಾರೆ ಧಾರಾವಾಹಿ ನಡೆಯುತ್ತಿದ್ದು, ಕಥೆ ಈ ರೀತಿಯ ತಿರುವು ಪಡೆದುಕೊಂಡ ಬಗ್ಗೆ ಪ್ರೇಕ್ಷಕರು ಅಸಮಧಾನಗೊಂಡಿದ್ದಾರೆ.

Take a Poll

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಅಮೃತಧಾರೆ ಧಾರಾವಾಹಿ ಪ್ರೋಮೋಗಳಿಗೆ ಕಮೆಂಟ್‌ ಹಾಕುವ ಮೂಲಕ ಜನ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಕಥೆಗೆ ಒಂದು ಲಾಜಿಕ್‌ ಇಲ್ಲದೇ ತಗೆದುಕೊಂಡು ಹೋಗಲಾಗುತ್ತಿದೆ. ಎಂತಹ ದಡ್ಡರು ಕೂಡ ಆರೋಗ್ಯದ ವಿಚಾರದಲ್ಲಿ ಸೆಕೆಂಡ್‌ ಒಪಿನಿಯನ್‌ ಎಂದು ಬೇರೆ ವೈದ್ಯರ ಬಳಿ ಒಮ್ಮೆ ತೋರಿಸುತ್ತಾರೆ. ಆದರೆ ಟೀಚರ್‌ ಆಗಿರುವ ಭೂಮಿ ಮಾತ್ರ ಯಾರದೋ ಮಾತು ನಂಬಿಕೊಂಡು ಗಂಡನಿಗೆ ಎರಡನೇ ಮದುವೆ ಮಾಡುತ್ತಿರುವುದು ವಾಸ್ತವತೆಗೆ ದೂರವಾಗಿದೆ.

Viewers Outrage Against At Kannada Amruthadhare Serial story

ಒಂದು ವೇಳೆ ಮಗು ಆಗುವುದಿಲ್ಲವಾದರೆ ವಿಜ್ಞಾನ ಎಷ್ಟು ಮುಂದುವರಿದೆ ಎನ್ನುವ ಅರಿವು ಗೌತಮ್ ದಿವಾನ್‌ನಂತಹ ದೊಡ್ಡ ಬ್ಯುಸಿನೆಸ್‌ಮೆನ್‌ಗೆ ಗೊತ್ತಿಲ್ಲವೇ..? ಎಂದು ಪ್ರಶ್ನಿಸಿರುವ ಜನರು ಈ ಧಾರಾವಾಹಿಯಲ್ಲಿ ದುಡ್ಡಿರುವ ವ್ಯಕ್ತಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎನ್ನುವುದನ್ನು ತೋರಿಸುತ್ತಿದೆ. ಈಗಿನ ಎಲ್ಲಾ ಡೈರೆಕ್ಟರ್‌ಗಳಿಗೆ ಹೀರೋಗೆ ಎರಡು ಮದುವೆ ಮಾಡಿಸೋದು ಬಿಟ್ಟರೆ ಬೇರೆ ಆಲೋಚನೆಗಳೇ ಇಲ್ಲ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಸದ್ಯ ಅಮೃತಧಾರೆ ಧಾರಾವಾಹಿಗೆ ಟ್ವಿಸ್ಟ್‌ ಕೊಡಲಾಗಿದ್ದು, ಇಂದಿನ ಪ್ರೋಮೋ ಪ್ರಕಾರ ಎರಡನೇ ಮದುವೆಗೆ ಸಿದ್ಧವಾಗಿ ಕುಳಿತ ಗೌತಮ್ ದಿವಾನ್ ಮತ್ತೆ ಭೂಮಿಗೆ ತಾಳಿಕಟ್ಟಿ ಏಳೇಳು ಜನ್ಮಕ್ಕೂ ಇವರೇ ನನ್ನ ಪತ್ನಿ ಎಂದು ಹೇಳುತ್ತಾನೆ. ಈ ಮೂಲಕ ಧಾರಾವಾಹಿ ತಂಡ ಪ್ರೇಕ್ಷಕರ ಅಸಮಾಧಾನವನ್ನು ಶಮನ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+