Bigg Boss: ಮೋಕ್ಷಿತಾ ನಿನ್ನ ಮದುವೆ ಮುರಿದು ಬೀಳುತ್ತೆ- ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ
ಬಿಗ್‌ಬಾಸ್ ಮನೆಗೆ ಕಳೆದ ದಿನ ಬೆಳ್ಳಂಬೆಳಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದರು. ಮನೆಯಲ್ಲಿ ಪೂಜೆ ಮಾಡಿ ಎಲ್ಲರಿಗೂ ಆಶೀರ್ವಾದ ಮಾಡಿದ ಗುರೂಜಿ ಮನೆಯಲ್ಲಿ ಉಳಿದುಕೊಂಡ ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ. ಹಾಗಾದರೆ ಯಾವ ಸ್ಪರ್ಧಿಗಳ ಜಾತಕ ಹೇಗಿದೆ? ಮೋಕ್ಷಿತಾ ಬಗ್ಗೆ ಗುರೂಜಿ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆ ತಲುಪಿದೆ. ಕೆಲವೇ ದಿನಗಳಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಮನೆಯಲ್ಲಿ ಸದ್ಯ ಆರು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಹನುಮಂತ, ಮಂಜು, ರಜತ್, ಭವ್ಯಾ ಹಾಗೂ ಮೋಕ್ಷಿತಾ. ಇವೆರೆಲ್ಲರಿಗೂ ಆಶೀರ್ವಾದ ಮಾಡಿದ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಅವರು ಇವರು ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ. ಹಾಗಾದರೆ ಗುರೂಜಿ ಯಾರ ಬಗ್ಗೆ ಏನು ಹೇಳಿದರು?

ಬಿಗ್‌ಬಾಸ್ ಮನೆಗೆ ಆಗಮಿಸಿದ ವಿದ್ಯಾ ಶಂಕರಾನಂದ ಗುರೂಜಿ ಎಲ್ಲರನ್ನೂ ಕೂಡಿಸಿಕೊಂಡು ಕಷ್ಟಗಳು ಬಂದಾಗ ಹೇಗಿರಬೇಕು? ಯಾವ ರೀತಿ ಎದುರಿಸಬೇಕು ಎಂದು ಕೆಲ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಬಳಿಕ ರಜತ್ ಕಿಶನ್ ಅವರನ್ನು ಕೂಡಿಸಿಕೊಂಡು- 'ನೀನು ಸೊಂಬೇರಿ, ನಾಲಕ್ಕಾಣೆ ಕೆಲಸ ಮಾಡಲ್ಲ' ಎಂದು ಹೇಳಿದರು.
ಇನ್ನೂ ಭವ್ಯಾ ಗೌಡ ಅವರಿಗೆ 'ವ್ಯಾಮೋಹ, ಪ್ರೀತಿ ಇಂತವೇ ನಿನಗೆ ಕಾಟ ಕೊಡುತ್ತವೆ' ಎಂದು ಹೇಳಿದರು. ಜೊತೆಗೆ ಮೋಕ್ಷಿತಾ ಅವರನ್ನು ಕುಡಿಸಿಕೊಂಡು, 'ಈ ವರ್ಷ ಆಗಸ್ಟ್‌ನಲ್ಲಿ ನಿನ್ನ ಮದುವೆ ಇದೆ, ಹುಷಾರಾಗಿ ಮಾಡ್ಕೋ ಇಲ್ಲವಾದಲ್ಲಿ ನಿನಗೆ ಪೆಟ್ಟು ಬೀಳುತ್ತೆ' ಎಂದಿದ್ದಾರೆ. ಗುರೂಜಿ ಭವಿಷ್ಯ ಕೇಳಿ ಮನೆ ಸ್ಪರ್ಧಿಗಳು ಚಿಂತಿತರಾಗಿದ್ದಾರೆ.

ಜೊತೆಗೆ ಹನುಮಂತ ಅವರನ್ನು ಕೂಡಿಸಿಕೊಂಡು ಮಾತನಾಡಿದ ಗುರೂಜಿ, 'ಹನುಮಂತ ಈ ವರ್ಷದಲ್ಲಿ ನಿನಗೆ ಮದುವೆ ಆಗುತ್ತೆ, ಎರಡು ವರ್ಷ ಆದ್ಮೇಲೆ ನಿಮ್ಮ ತಾಯಿ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ಮದುವೆಗೂ ಕೂಡ ಸಮಸ್ಯೆ ಆಗುತ್ತದೆ' ಎಂದು ಹೇಳಿದ್ದಾರೆ. ಇದರಿಂದ ಹನುಮಂತ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಅಲ್ಲದೆ ತ್ರಿವಿಕ್ರಮ್‌ಗೂ ಕೂಡ ಗುರೂಜಿ ಹಾಗೇ ಹೇಳಿದ್ದಾರೆ. 'ನಿಮಗೆ ಮದುವೆ ಆಗುತ್ತೆ. ಮದ್ವೆ ಆಗಿ ನಾಲ್ಕು ವರ್ಷ ಆದ್ಮೆಲೆ ಸಮಸ್ಯೆ ಬರುತ್ತದೆ' ಎಂದು ಗುರೂಜಿ ತ್ರಿವಿಕ್ರಮ್‌ಗೆ ಹೇಳಿದ್ದಾರೆ. ಇದರಿಂದ ಮದುವೆ ಆಗದವರು ಮದುವೆ ಆಗೋದು ಹೇಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿಗಳಿಗೆ ಮದುವೆಯಿಂದಲೇ ಗಂಡಾಂತರ
ಬಿಗ್‌ಬಾಸ್ ಮನೆಯಲ್ಲಿ ಸದ್ಯ ಉಳಿದಿರುವ ಸ್ಪರ್ಧಿಗಳ ಪೈಕಿ ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ, ಹನುಮಂತು ಹಾಗೂ ಮಂಜುಗೆ ಇನ್ನೂ ಕೂಡ ಮದುವೆ ಆಗಿಲ್ಲ. ಆದರೆ ಎಲ್ಲರ ಜಾತಕ ಹೇಳಿದ ಗುರೂಜಿ, ಮದುವೆ ಆದ ಬಳಿಕ ಅಥವಾ ಆಗುವ ಮುಂಚೆ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ. ಇದರಿಂದಾಗಿ ಸ್ಪರ್ಧಿಗಳು ಸಿಕ್ಕಾಪಟ್ಟೆ ಟೆನ್ಶನ್ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಗೆ ಆಗಮಿಸಿದ ಗುರೂಜಿ ಎಲ್ಲರ ತಲೆಗೆ ಹುಳ ಬಿಟ್ಟು ಹೋದಂತಾಗಿದೆ. ಇಷ್ಟು ದಿನ ಮದುವೆ ಬಗ್ಗೆ ಯೋಚನೆ ಮಾಡದ ಸ್ಪರ್ಧಿಗಳಿಗೆ ಮದುವೆಯಿಂದಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಭಯ ಹುಟ್ಟಿಸಿದಂತಾಗಿದೆ. ಹೀಗಾಗಿ ಸ್ಪರ್ಧಿಗಳು ಮದುವೆ ಆಗುವಾಗ ಇದೆಲ್ಲವನ್ನು ನೆನಪಿಸಿಕೊಳ್ಳುತ್ತಾರಾ ಅಥವಾ ಮರೆತುಬಿಡ್ತಾರಾ ಕಾದು ನೋಡಬೇಕಿದೆ.












Click it and Unblock the Notifications