ಪ್ರಭಾಕರ್ ಮಗನನ್ನ ತುಳೀಬೇಡಿ: ನಟ ವಿನೋದ್ ರಾಜ್ ಹೀಗಂದಿದ್ದೇಕೆ?
ಸ್ಯಾಂಡಲ್‌ವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿದ್ದ ನಟ ಟೈಗರ್ ಪ್ರಭಾಕರ್. ಇದೀಗ ಅವರ ಪುತ್ರ ವಿನೋದ್ ಪ್ರಭಾಕರ್ ಕೂಡ ನಟರಾಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಗೆದ್ದಿರುವ ಅವರ ವಿನೋದ್ ಪ್ರಭಾಕರ್ ಅವರು ಮಾದೇವ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಇದೀಗ ನಟ ವಿನೋದ್ ರಾಜ್ ಅವರು ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ. ಪ್ರಭಾಕರ್ ಅವರ ಮಗನನ್ನು ತುಳಿಯಬೇಡಿ ಎಂದು ಹೇಳಿದ್ದಾರೆ. ವಿನೋದ್ ರಾಜ್ ಹೀಗೆ ಹೇಳಲು ಕಾರಣವೇನು ಎಂಬ ವಿವರ ಇಲ್ಲಿದೆ..
ಕನ್ನಡ ಸಿನಿಮಾಗಳಿಗೆ ಕನ್ನಡ ನೆಲದಲ್ಲೇ ಉಳಿಗಾಲವಿಲ್ಲ, ಬೆಲೆ ಇಲ್ಲ ಎನ್ನುವ ದೂರು ಮೊದಲಿನಿಂದಲೂ ಇದೆ. ಈಗ ಇದೇ ಪ್ರವೃತ್ತಿ ಮುಂದುವರಿದಿದೆ. ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗುತ್ತಿಲ್ಲ, ಸಿಕ್ಕರೂ ಪರಭಾಷೆ ಸಿನಿಮಾಗಳು ಬಂದರೆ ಕನ್ನಡ ಸಿನಿಮಾಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದು ಹಲವು ನಟರು ಕಣ್ಣೀರು ಹಾಕಿದ್ದರು. ಈಗ ವಿನೋದ್ ಪ್ರಭಾಕರ್ ಅವರು ಕೂಡ ಇದೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ.

ತಮ್ಮ ಮಾದೇವ ಸಿನಿಮಾಗೆ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಫಿಲ್ಮ್ ಚೇಂಬರ್ ಬಳಿ ಅಳಲು ತೋಡಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಈ ಅನ್ಯಾಯವನ್ನು ಕೂಡಲೇ ತಪ್ಪಿಸಿ ಎಂದು ಬೇಡಿಕೊಂಡಿದ್ದಾರೆ. ಇದೇ ವಿಚಾರವಾಗಿ ನಟ ವಿನೋದ್ ರಾಜ್ ಕೂಡ ವಿನೋದ್ ಪ್ರಭಾಕರ್ ಅವರೊಂದಿಗೆ ಧ್ವನಿ ಎತ್ತಿದ್ದಾರೆ. ವಿನೋದ್ ಅವರ ಮಾದೇವ ಸಿನಿಮಾ ರಿಲೀಸ್ ಆಗಿ, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿನೋದ್ ಅವರು ಪ್ರಭಾಕರ್ ಅವರ ಮಗ, ಅವರು ಕೂಡ ಬೆಳೆಯುತ್ತಿರುವ ವ್ಯಕ್ತಿ. ಅವರೂ ಬೆಳೆದರೆ ಇಂಡಸ್ಟ್ರಿಯ ಆಸ್ತಿ ಆಗ್ತಾರೆ. ಅವರನ್ನ ಬೆಳೆಯಲು ನಾವೇ ಬಿಡಬೇಕು ಎಂದು ವಿನೋದ್ ರಾಜ್ ಹೇಳಿದ್ದಾರೆ.
ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳಲ್ಲಿ ಅವಕಾಶವಿಲ್ಲ. ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳನ್ನ ಯಾಕೆ ತೆಗೆಯುತ್ತಿದ್ದೀರಿ? ಕನ್ನಡ ಸಿನಿಮಾಗಳಿಗೆ ಒಂದಷ್ಟು ಸ್ಕ್ರೀನ್‌ಗಳನ್ನ, ಪ್ರೈಮ್ ಟೈಮ್ ಅನ್ನ ಮೀಸಲಿಡಬೇಕು. ನಾವು ತಿಂತಿರೋದು ಕರ್ನಾಟಕದ ಅನ್ನ, ಬೇರೆ ಭಾಷೆಗಳ ಸಿನಿಮಾಗಳಿಗೂ ಅವಕಾಶ ಕೊಡಿ, ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ ಎಂದು ಮನವಿ ಮಾಡಿದ್ದಾರೆ. ನನ್ನ ಕಾಲದಲ್ಲಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ನಾನು ಪಟ್ಟಪಾಡನ್ನೇ ವಿನೋದ್ ಪ್ರಭಾಕರ್ ಕೂಡ ಅನುಭವಿಸುತ್ತಿದ್ದಾರೆ. ಅವರು ಬೇರೆ ಸಿನಿಮಾಗಳಿಗೂ ಕಷ್ಟ ಆಗಬಾರದು ಅಂತ ಒದ್ದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವಕಾಶ ಸಿಕ್ಕರೆ ಎಷ್ಟೋ ಜನ ಮುಂದೆ ಬರುವವರಿದ್ದಾರೆ. ಕಾಂತಾರ ರೀತಿ ವಿನೋದ್ ಪ್ರಭಾಕರ್ ಸಿನಿಮಾ ಕೂಡ ಬೆಳೆಯಬಹುದು. ಯಾರಿಗೆ ಗೊತ್ತು ವಿನೋದ್ ಕೂಡ ದೊಡ್ಡ ನಟರಾಗಿ ಬೆಳೆಯಬಹುದು. ಪ್ರೋತ್ಸಾಹ ಕೊಟ್ಟರೆ ಮಾತ್ರವೇ ಇದೆಲ್ಲ ಸಾಧ್ಯವಾಗುತ್ತೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ವಿನೋದ್ ಅವರಿಗೆ ದೇವರು ಒಳ್ಳೇದು ಮಾಡ್ತಾರೆ ಎಂದು ಧೈರ್ಯ ತುಂಬಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications