ಕೆಲವೇ ನಿಮಿಷದ ಡಬ್ಬಿಂಗ್‌ಗೆ ವಸಿಷ್ಠ ಸಿಂಹ ಪಡೆಯುವ ಪೇಮೆಂಟ್ ಎಷ್ಟು ಗೊತ್ತಾ?
ಸ್ಯಾಂಡಲ್‌ವುಡ್‌ನ ಖಡಕ್ ನಟರಲ್ಲಿ ಒಬ್ಬರಾಗಿರುವ ವಸಿಷ್ಠ ಸಿಂಹ ಅವರು ಇದೀಗ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಖಳನಟರಾಗಿ ಪೋಷಕ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಾಯಕನಟರಾಗಿ ಹವಾ ಕ್ರಿಯೇಟ್ ಮಾಡಿದ್ದಾರೆ. ನಟನೆ ಜೊತೆಗೆ ತಮ್ಮ ಕಂಚಿನ ಕಂಠದಿಂದಲೂ ಹೆಸರುವಾಸಿಯಾಗಿರುವ ಅವರು ಗಾಯನಕ್ಕೂ ಸೈ, ಡಬ್ಬಿಂಗ್‌ಗೂ ಸೈ ಎಂದಿದ್ದಾರೆ. ಇದೀಗ ವಸಿಷ್ಠ ಅವರು ಒಂದು ಸಣ್ಣ ಜಾಹೀರಾತಿಗೆ ಪಡೆದಿರುವ ಸಂಭಾವನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ವಸಿಷ್ಠ ಸಿಂಹ ನಟನೆಯ ಓದೆಲ-2 ತೆಲುಗು ಸಿನಿಮಾ ಇತ್ತೀಚೆಗೆ ತೆರೆಕಂಡು ಹಿಟ್ ಕಂಡಿತ್ತು. ಇದೀಗ ಬೇರೆ ಚಿತ್ರರಂಗದಲ್ಲೂ ವಸಿಷ್ಠ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಬಳಿಕ ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ. ಇದರ ನಡುವೆ ಅವರು ತಮ್ಮ ಸಂಭಾವನೆ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ನಟ ವಸಿಷ್ಠ ಅವರೇ ತಮ್ಮ ಡಬ್ಬಿಂಗ್ ಸಂಭಾವನೆಯನ್ನ ರಿವೀಲ್ ಮಾಡಿದ್ದರು. ಒಂದು ಸಣ್ಣ ಜಾಹೀರಾತಿಗೆ ತಮ್ಮ ಧ್ವನಿ ನೀಡಲು ಪಡೆದಿದ್ದ ಸಂಭಾವನೆ ಕೇಳಿ ಜನ ಶಾಕ್ ಕೂಡ ಆಗಿದ್ದರು.

ಸಂಭಾವನೆ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ವಸಿಷ್ಠ ಸಿಂಹ, ಕೆಲವೇ ನಿಮಿಷಗಳ ಜಾಹೀರಾತಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆದಿದ್ದಾಗಿ ಹೇಳಿದ್ದರು. ಈ ಇದಾದ ಬಳಿಕ ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ವಸಿಷ್ಠ, ಒಂದಷ್ಟು ಹತಾಶ ಜೀವಿಗಳಿದ್ದಾರೆ. ಆ ನೊಂದ ಜೀವಗಳಿಗೆ ಸಾಂತ್ವನ ಹೇಳಬೇಕಷ್ಟೇ. ಆ ಕಾಮೆಂಟ್‌ಗಳಿಗೆ ರಿಯಾಕ್ಟ್ ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ, ಅದರಿಂದ ಅವರ ಮನಸ್ಥಿತಿ, ನಮ್ಮ ಪರಿಸ್ಥಿತಿ ಕೂಡ ಬದಲಾಗಲ್ಲ ಎಂದಿದ್ದಾರೆ.
ನಾನು ತಗೊಂಡಿರೋ ಪೇಮೆಂಟ್ ಇದ್ದೇ ಇದೆ, ನನ್ನ ಅಕೌಂಟ್‌ಗೆ ಬಂದಿದೆ. ಅದಕ್ಕೆ ಟ್ಯಾಕ್ಸ್, ಜಿಎಸ್‌ಟಿ ಕಟ್ಟಿರ್ತೀವಿ. ಒಂದು ಜಾಹೀರಾತಿಗೆ ವಾಯ್ಸ್ ಓವರ್ ಮಾಡೋಕೆ 6,00,000 ರೂಪಾಯಿ ತಗೊಂಡಿದ್ದು ನಿಜ. ಧ್ವನಿ ನನ್ನದು, ಸಮಯ ನನ್ನದು, ದುಡ್ಡು ಅವರದ್ದು ಎಂದು ತಿರುಗೇಟು ನೀಡಿದ್ದಾರೆ. ಅವನಿಗೆ ನನ್ನ ವಾಯ್ಸ್ ಬೇಕಿತ್ತು, ಹಾಗಾಗಿ ಹಣ ಕೊಟ್ಟು ವಾಯ್ಸ್ ತಗೊಂಡ. ಇದರಲ್ಲಿ ಯಾವುದೇ ಅತಿಶಯ, ಉತ್ಪ್ರೇಕ್ಷೆ ಏನಿಲ್ಲ, ಇದು ಯಾರೂ ಮಾಡದೇ ಇರೋದು ಕೂಡ ಅಲ್ಲ ಎಂದು ನಟ ಹೇಳಿದ್ದಾರೆ.
ಡಬ್ಬಿಂಗ್ ಅನ್ನೋದೆ ಒಂದು ದೊಡ್ಡ ಇಂಡಸ್ಟ್ರಿ. ಬರೀ ಸಿನಿಮಾ ವಾಯ್ಸ್, ಡಬ್ಬಿಂಗ್ ಅಲ್ಲದೆ ಜಾಹೀರಾತಿನಲ್ಲಿ ಡಬ್ಬಿಂಗ್ ಅನ್ನೋದೇ ಒಂದು ದೊಡ್ಡ ಉದ್ಯಮ. ಅದರಲ್ಲಿ ಸಹಜವಾಗಿ ದುಡ್ಡಿದೆ. ಅವರ ಅಗತ್ಯತೆಗೆ ತಕ್ಕಂತೆ ಸಂಭಾವನೆ ಕೊಡ್ತಾರೆ. ಇನ್ನು ಡಬ್ಬಿಂಗ್ ಅಂದ್ರೆ ಸುಮ್ಮನೆ ಹೋಗಿ ಏನೋ ಹೇಳಿ ಬರೋದಲ್ಲ. ಸ್ಕ್ರಿಪ್ಟ್‌ಗಾಗಿ ನಾನು ಸಮಯ ಕೊಡ್ತೀನಿ, ವರ್ಕ್ ಮಾಡ್ತೀನಿ, ಅದಕ್ಕೆ ನಾನು ಚಾರ್ಜ್ ಕೂಡ ಮಾಡ್ತೀನಿ, ಹಾಗಾಗಿ ಅಷ್ಟು ಪೇಮೆಂಟ್ ತಗೊಂಡಿರೋದು ಸತ್ಯ, ಒಂದು ಕಂಪನಿಗೆ ಇದನ್ನ ನಾನು ಪ್ರತಿ ವರ್ಷವೂ ಮಾಡ್ತೀನಿ ಎಂದಿದ್ದಾರೆ.












Click it and Unblock the Notifications