ಬಿಗ್ ಬಾಸ್‌ ಕನ್ನಡ ಡಬ್ಬಾ ಶೋ ಎಂದವರ್ಯಾರು?: ಸಿಡಿದೆದ್ದ ವರ್ತೂರು ಸಂತೋಷ್‌

ಬಿಗ್‌ ಬಾಸ್‌ ಕನ್ನಡ ಸೀಜನ್‌ 10ರ ಸ್ಪರ್ಧಿ ವರ್ತೂರು ಸಂತೋಷ್‌ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ರೈತರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲೇ ಕಾಣಿಸಿಕೊಳ್ಳುವ ಅವರು ಆಗಾಗ ಮಾಧ್ಯಮಗಳ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ನೀಡಿರುವ ಸಂದರ್ಶನವೊಂದರಲ್ಲಿ ವರ್ತೂರು ಸಂತೋಷ್‌ ತಮ್ಮ ಜೀವನದ ಮೇಲೆ ಬಿಗ್‌ ಬಾಸ್‌ ಕನ್ನಡ ಬೀರಿದ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ.

ಚಿತ್ತಾರ ಯೂಟ್ಯೂಬ್‌ ವಾಹಿನಿ ಜೊತೆ ಮಾತನಾಡಿದ ಅವರು, ' ಬಿಗ್ ಬಾಸ್ ನೀಡಿದ ಅವಕಾಶಕ್ಕೆ ನಾನು ಎಂದಿಗೂ ಚಿರಋಣಿ ಆಗಿರುತ್ತೇನೆ' ಎಂದಿದ್ದಾರೆ. ಇನ್ನು ಬಿಗ್‌ ಬಾಸ್‌ ಸ್ನೇಹಿತರ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್‌, 'ಬಿಗ್‌ ಬಾಸ್‌ ಸ್ನೇಹಿತರು ಆ ಮನೆಯೊಳಗೆ ಒಂದು ರೀತಿ ಇರುತ್ತಾರೆ. ಹೊರಗಡೆ ಬಂದ ಮೇಲೆ ಮತ್ತೊಂದು ರೀತಿ ಇರುತ್ತಾರೆ. ನಾನು ಕೆಲವೊಂದು ಕಾರ್ಯಕ್ರಮಕ್ಕೆ ಹೋಗಿ ಕರೆದಿದ್ದೇನೆ. ಅವರು ಬಂದಿಲ್ಲ. ಒಂದು ಸಾರಿ ಕರೆಯಬಹುದು, ಎರಡು ಸಾರಿ ಕರೆಯಬಹುದು ಅವರು ಬಂದಿಲ್ಲ ಎಂದ ಮೇಲೂ ಮತ್ತೆ ಮತ್ತೆ ಕರೆದರೆ ನಮ್ಮ ಗೌರವನೂ ಕಡಿಮೆ ಆಗುತ್ತದೆ ಅಂತಾ ಗೊತ್ತಾಗಿ ನಾನು ಸುಮ್ಮನಾದೆ 'ಎಂದು ಹೇಳಿದರು.

Varthur Santhosh Discusses the Impact of Bigg Boss Kannada on Personal Growth

ಬಿಗ್‌ ಬಾಸ್‌ನಲ್ಲಿ ಕಳಿತ ಒಂದು ಪಾಠದ ಬಗ್ಗೆ ಮಾತನಾಡಿದ ಅವರು, 'ಬಿಗ್‌ ಬಾಸ್‌ ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು. ಒಂದು ಊಟದ ಬೆಲೆ, ಒಂದು ಸಮಯದ ಬೆಲೆ, ಒಂದು ಸ್ನೇಹ ಸಂಬಂಧದ ಬೆಲೆ ನನಗೆ ಅಲ್ಲಿ ಗೊತ್ತಾಯಿತು. ಸರಳವಾಗಿ ಹೇಳಬೇಕು ಎಂದರೆ ಬಿಗ್‌ ಬಾಸ್‌ ಎನ್ನುವುದು ಒಂದು ಜೀವನ. ಒಂದು ಆತ್ಮದ ಜೀವನ ಅದು.

ಬಿಗ್‌ ಬಾಸ್‌ ಎನ್ನುವುದು ಒಂದು ಭೂಮಿ. ಅದರ ಒಳಗೆ ಇರುವವರು ನಾವೆಲ್ಲಾ ಜನ. ಅಲ್ಲಿ ನಾವೊಬ್ಬರನ್ನು ಸ್ನೇಹಿತ ಅಂತಾ ಅಂದುಕೊಂಡಿರುತ್ತೇವೆ. ಇಲ್ಲಿ ನಿಜ ಜೀವನದಲ್ಲಿಯೂ ಒಬ್ಬನನ್ನು ಸ್ನೇಹಿತ ಎಂದುಕೊಂಡಿರುತ್ತೇವೆ.

Varthur Santhosh Discusses the Impact of Bigg Boss Kannada on Personal Growth

ಆದರೆ ಅವರು ಮೋಸ ಮಾಡಿರುವುದು ಗೊತ್ತಾಗುವುದು ಯಾವಾಗ ಅಂದರೆ ನಾವು ಸತ್ತ ಮೇಲೆ ಆತ್ಮಕ್ಕೆ ಗೊತ್ತಾಗುತ್ತದೆ. ಯಾರು ಏನೇನು ಆಟ ಆಡಿದ್ದಾರೆ ಎಂದು. ಅದೇ ರೀತಿ ಬಿಗ್‌ ಬಾಸ್‌ ಮನೆಯಲ್ಲಿ ನನ್ನ ಜೊತೆಗೆ ಚೆನ್ನಾಗಿದ್ದು, ನನ್ನನ್ನೇ ನಾಮಿನೇಟ್‌ ಮಾಡುತ್ತಾರೆ' ಎಂದರು.

'ಇಂತಹ ಪಾಠವನ್ನು ಜೀವನದಲ್ಲಿ ಯಾರು ಕಲಿಸಲು ಸಾಧ್ಯ. ಬಿಗ್‌ ಬಾಸ್‌ ಅನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರು ಹೇಳುತ್ತಾರೆ ಬಿಗ್ ಬಾಸ್‌ ವೇಸ್ಟ್ ಶೋ..ಡಬ್ಬಾ ಶೋ ಅಂತಾ. ಅಲ್ಲಿಗೆ ಹೋದವರಿಗೆ ಗೊತ್ತು ಅದರ ಬೆಲೆ ಏನು ಅಂತಾ. ಅದರ ಘನತೆ ಏನು ಅಂತಾ. ಇಲ್ಲಿದ್ದ ನನ್ನನ್ನು ಈಗ ಎಲ್ಲಾ ಕಡೆ ಗುರುತಿಸುತ್ತಾರೆ. ಅದಕ್ಕೆ ಕಾರಣ ಆ ವೇದಿಕೆ. ನಾನು ಯಾವಗಲೂ ಆ ವೇದಿಕೆಗೆ ಗೌರವ ನೀಡುತ್ತೇನೆ. ಆ ಅವಕಾಶಕ್ಕೆ ನಾನು ಎಂದಿಗೂ ಚಿರಋಣಿ ಆಗಿಗುತ್ತೇನೆ' ಎಂದು ಬಿಗ್‌ ಬಾಸ್‌ ಕನ್ನಡದ ಬಗ್ಗೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+