ಸೇಫ್ಟಿ ಪಿನ್‌ನಿಂದ ಮಾಡಿದ ಬಟ್ಟೆ ಧರಿಸಿ ಕರಗುವ ಬ್ಯಾಗ್ ಹಾಕಿಕೊಂಡು ಬಂದ ಉರ್ಘಿ ಜಾವೇದ್: ಜನ ಶಾಕ್!
ಫ್ಯಾಷನ್ ಐಕಾನ್ ಎಂದು ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ಬಾಲಿವುಡ್‌ಗೆ ಕಾಲಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ಹೊರತುಪಡಿಸಿ ಮತ್ತೇನಾದ್ರು ಹೊಸ ಸುದ್ದಿ ಇದಿಯಾ ಅಂತ ಕೇಳಿದರೆ ಖಂಡಿತಾ ಇದೆ. ಉರ್ಫಿಯ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಉರ್ಫಿ ವಿಡಿಯೋ ಅಂದರೆ ಅದರಲ್ಲಿ ಏನಾದ್ರು ವಿಶೇಷತೆ ಇದ್ದೇ ಇರುತ್ತದೆ.
ತನ್ನ ಉಡುಪಿನಿಂದಲೇ ಸಖತ್ ಸದ್ದು ಮಾಡಿರುವ ಉರ್ಫಿ ಈಗ ತನ್ನ ಕೈಯಲ್ಲಿ ಇರುವ ಪರ್ಸ್‌ನಿಂದ ಸುದ್ದಿಯಾಗಿದ್ದಾರೆ. ಪರ್ಸ್ ಅಂದ ತಕ್ಷಣ ಅದು ದುಬಾರಿ ಪರ್ಸ್ ಆಗಿರಬೇಕು, ಯಾರ ಬಳಿ ಇಲ್ಲದ ಪರ್ಸ್ ಆಗಿರಬಹುದು ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಉರ್ಫಿ ಕೈಯಲ್ಲಿ ಇದ್ದ ಪರ್ಸ್ ಅನ್ನು ನೀವು ಊಹೆ ಮಾಡುವುದು ಕಷ್ಟ.

ಹೌದು ಉರ್ಫಿ ಐಸ್ ಪರ್ಸ್ ಅನ್ನು ಹಿಡಿದುಕೊಂಡು ಫೋಟೋ ಪೋಸ್ ಕೊಟ್ಟಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್ ಕೈಯಲ್ಲಿ ಐಸ್ ಪರ್ಸ್ ಹಿಡಿದುಕೊಂಡಿದ್ದು ಕಂಡು ಬಂದಿದೆ. ಸಾಮಾನ್ಯವಾಗಿ ಐಸ್ ಕರಗುತ್ತದೆ. ಅದರಿಂದ ಮಾಡಿದ ಬ್ಯಾಗ್ ಕೂಡ ಕರಗಲೇಬೇಕು. ಹೀಗಿರುವಾಗ ಅದರಲ್ಲಿ ಏನು ಇಟ್ಟುಕೊಳ್ಳಲು ಸಾದ್ಯವಾಗುತ್ತದೆ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹಾಗಾದರೆ ಉರ್ಫಿ ಬಳಿ ಇದ್ದ ಆ ಪರ್ಸ್ ಹೇಗಿತ್ತು ಅನ್ನೋದನ್ನು ನೋಡೋಣ.
ಉರ್ಫಿ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಪಕ್ಕದಲ್ಲಿರುವ ತಮ್ಮ ಅಸಿಸ್ಟೆಂಟ್ ಕೈಯಿಂದ ಪರ್ಸ್ ತೆಗೆದುಕೊಂಡು ಫೋಟೋ ಪೋಸ್ ಕೊಡುತ್ತಾರೆ. ಆ ಪರ್ಸ್ ಅನ್ನು ಐಸ್‌ನಿಂದ ತಯಾರಿಸಲಾಗಿದ್ದು, ಸ್ಮಾಲ್ ವಾನಿಟಿ ಬ್ಯಾಗ್ ಶೇಪ್‌ನಲ್ಲಿ ಇದೆ. ಅದಕ್ಕೊಂದು ಚೈನ್ ಇದ್ದು ಆ ಚೈನ್ ಅನ್ನು ಹೆಗಲಿಗೆ ಹಾಕಿ ಪರ್ಸ್ ಅನ್ನು ಉರ್ಫಿ ಕೈಯಲ್ಲಿ ಹಿಡಿದುಕೊಂಡಿದ್ದರು.

ಈ ವೇಳೆ ಪರ್ಸ್ ನೀರಾಗಿ ಕರಗುತ್ತಿರುವುದು ಕಂಡು ಬಂದಿದೆ. ಹಾಗಿದ್ದರೂ ಕೂಡ ಉರ್ಫಿ ಆ ಪರ್ಸ್ ಅನ್ನು ಕೈಯಲ್ಲಿ ಹಿಡಿದುಕೊಂಡು ಸ್ಟೈಲ್ ಆಗಿ ನಿಂತುಕೊಳ್ಳುತ್ತಾರೆ. ಈ ವೇಳೆ ಅವರು ಸೇಫ್ಟಿ ಪಿನ್‌ನಿಂದ ಮಾಡಿದ ಉಡುಪನ್ನು ಧರಿಸಿರುತ್ತಾರೆ. ಆ ಪರ್ಸ್‌ನಲ್ಲಿ ಏನಿಟ್ಟುಕೊಂಡಿದ್ದೀರಿ ಎಂದು ಹಲವರು ಪ್ರಶ್ನೆ ಮಾಡಿದಾಗ ಉರ್ಫಿ ಏನು ಇಲ್ಲ ಎಂದು ಉತ್ತರಿಸುತ್ತಾ ಮುಂದೆ ನಡೆಯುತ್ತಾರೆ. ಆ ಪರ್ಸ್‌ನಲ್ಲಿ ಮೊಬೈಲ್ ಫೋನ್ ಇರುವಂತೆ ಕಾಣಿಸುತ್ತದೆ. ಕೆಲ ಸೆಕೆಂಡ್‌ಗಳ ಬಳಿಕ ಉರ್ಫಿ ಐಸ್ ಪರ್ಸ್ ಅನ್ನು ತಮ್ಮ ಅಸಿಸ್ಟೆಂಟ್ ಕೈಗೆ ನೀಡುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ಜನ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಉರ್ಫಿ ಫ್ಯಾಷನ್ ಅನ್ನು ಮೆಚ್ಚಿಕೊಂಡಿದ್ದಾರೆ. ಇಂತಹ ಐಡಿಯಾಗಳು ಉರ್ಫಿಗೆ ಬರಲು ಮಾತ್ರ ಸಾಧ್ಯ ಎಂದು ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಬಟ್ಟೆ, ಚಪ್ಪಲ್, ಹೇರ್ ಸ್ಟೈಲ್ ಹಾಗೂ ಮೇಕಪ್ ಮಾಡಿಕೊಳ್ಳುವುದರಲ್ಲಿ ಉರ್ಫಿ ಎಲ್ಲರಿಗಿಂತಲೂ ತುಂಬಾನೇ ಡಿಫರೆಂಟ್. ಇವರಂತೆ ಫ್ಯಾಷನ್ ಲೋಕದಲ್ಲಿ ಈವರೆಗೂ ಯಾರೂ ಕೂಡ ಸದ್ದು ಮಾಡಿಲ್ಲ ಸುದ್ದಿ ಆಗಿಲ್ಲ. ಹೀಗಾಗಿ ಉರ್ಫಿ ಎಲ್ಲೇ ಹೋಗಲಿ ಎಲ್ಲಿಗೇ ಬರಲಿ ಆಕೆಯ ಉಡುಪನ್ನು ನೋಡಲು ಜನ ಕುತೂಹಲದಿಂದ ಕಾಯುತ್ತಾರೆ.
ಮೈಮೇಲೆ ಎಷ್ಟು ಕಡಿಮೆ ತುಂಡಿನ ಬಟ್ಟೆ ಧರಿಸಬೇಕೋ ಅಷ್ಟು ಕಡಿಮೆ ತುಂಡಿನ ಬಟ್ಟೆ ಧರಿಸುವುದರಲ್ಲಿ ಉರ್ಫಿ ಫೇಮಸ್. ಅಲ್ಲದೆ ಆಕೆ ಧರಿಸುವ ಬಟ್ಟೆ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ತರಕಾರಿ, ನೂಡಲ್ಸ್, ಹೂವು, ಹಣ್ಣು, ಬ್ಯಾಟರಿ, ಎಲೆಕ್ಟ್ರಿಕ್ ಐಟಮ್ ಹೀಗೆ ಹೇಳ್ತಾ ಹೋದರೆ ಉರ್ಫಿ ಇಂತಹ ವಿಭಿನ್ನವಾದ ಬಟ್ಟೆ ಧರಿಸಿಲ್ಲ ಅನ್ನೋ ಹಾಗೇ ಇಲ್ಲ. ಯಾವೆಲ್ಲಾ ವಿಭಿನ್ನ ಬಟ್ಟೆಗಳನ್ನು ತಯಾರಿಸಲು ಸಾಧ್ಯವೋ ಉರ್ಫಿ ಅದನ್ನೆಲ್ಲಾ ಧರಿಸಿಬಿಟ್ಟಿದ್ದಾರೆ. ಹೀಗಾಗಿ ಉರ್ಫಿ ಬಳಿ ಇರುವ ಪ್ರತಿಯೊಂದು ವಸ್ತುಗಳು ಕೂಡ ವಿಭಿನ್ನವಾಗಿ ಮಾತ್ರವಲ್ಲದೆ ಜನಾಕರ್ಷಣೀಯವಾಗಿಯೂ ಇರುತ್ತವೆ ಅನ್ನೋದರಲ್ಲಿ ಎರಡು ಮಾತಿಲ್ಲ.












Click it and Unblock the Notifications