ಉರ್ಫಿ ಜಾವೇದ್‌ಗೆ ಇನ್ಸ್ಟಾಗ್ರಾಮ್ ಶಾಕ್: ಏಕಾಏಕಿ ಅಕೌಂಟ್ ಬ್ಲಾಕ್
ಸದಾ ಒಂದಿಲ್ಲ ಒಂದು ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್. ತಮ್ಮ ವಿಚಿತ್ರ ವೇಷ ಭೂಷಣದ ಮೂಲಕ ಉರ್ಫಿ ಜಾವೇದ್ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಿಕೊಂಡಿದ್ದಾರೆ. ಉರ್ಫಿ ಜಾವೇದ್ ಬಟ್ಟೆಗಳು ಟ್ರೋಲಿಗರಿಗೆ ಆಹಾರವಾದರೆ, ಇನ್ನೂ ಕೆಲವರು ನಿಜವಾಗಿಯೂ ಆಕೆಯ ಫ್ಯಾಷನ್ ಸೆನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ.
ತಮ್ಮ ವಿಭಿನ್ನವಾದ ಬಟ್ಟೆ ಹಾಗೂ ಮೇಕಪ್‌ನಿಂದ ಉರ್ಫಿ ಜಾವೇದ್ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಉರ್ಫಿ ಜಾವೇದ್‌ಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್‌ಗಳಿದ್ದಾರೆ. ಆದರೆ ಇದೀಗ ಉರ್ಫಿಗೆ ಇನ್ಸ್ಟಾಗ್ರಾಮ್‌ನಿಂದ ಏಕಾಏಕಿ ಶಾಕ್ ನೀಡಲಾಗಿದೆ.

ಬಿಗ್ಬಾಸ್ ಒಟಿಟಿ ಖ್ಯಾತಿಯ ನಟಿ ಉರ್ಫಿ ಜಾವೇದ್ ಅವರ ಇನ್ಸ್ಟಾಗ್ರಾಮ್ ಖಾತೆ ಏಕಾಏಕಿ ಅಮಾನತಾಗಿದೆ. ಈ ಮೂಲಕ ಹಿಂದಿ ನಟಿ ಉರ್ಫಿ ಜಾವೇದ್‌ಗೆ ಇನ್ಸ್ಟಾಗ್ರಾಮ್ ಶಾಕ್ ಕೊಟ್ಟಿದೆ. ಉರ್ಫಿ ಜಾವೇದ್ ಹಲವಾರು ವಿನ್ಯಾಸದ ಡ್ರೆಸ್ ಧರಿಸಿ ಫೋಟೋ ವಿಡಿಯೋ ಮಾಡಿ ಶೇರ್ ಮಾಡುತ್ತಲೇ ಫಾಲೋವರ್ಸ್ಗಳನ್ನು ಗಳಿಸಿಕೊಂಡಿದ್ದಾರೆ.
ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಉರ್ಫಿ ಜಾವೇದ್‌ಗೆ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಆದರೆ ಇದರ ಮಧ್ಯೆ ಇನ್ಸ್ಟಾಗ್ರಾಮ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ಇನ್ಸ್ಟಾಗ್ರಾಮ್ ನಟಿಗೆ ಸಂದೇಶ ಕೂಡಾ ಕಳುಹಿಸಿದೆ. ಇದನ್ನು ನಟಿ ಉರ್ಫಿ ಜಾವೇದ್ ತಮ್ಮ ಪೋಸ್ಟ್ ಆಗಿ ಶೇರ್ ಮಾಡಿದ್ದಾರೆ.
ನಾವು ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತಿದ್ದೇವೆ. ಇನ್ನು ಮುಂದೆ ನಿಮ್ಮ ಖಾತೆ ಜನರಿಗೆ ಕಾಣುವುದಿಲ್ಲ. ಈ ಕ್ಷಣದಿಂದ ನೀವು ಈ ಖಾತೆ ಬಳಸಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಅದೇ ರೀತಿ ಇನ್ಸ್ಟಾಗ್ರಾಮ್‌ನ ಈ ನಿರ್ಧಾರವನ್ನು 180 ದಿನದಲ್ಲಿ ನೀವು ಪ್ರಶ್ನೆ ಮಾಡಬಹುದು. ಇಲ್ಲವಾದರೆ ನಿಮ್ಮ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಬರೆಯಲಾಗಿದೆ.
ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ 4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದರು. ಇದೀಗ ಆಕೆಯ ಅಕೌಂಟ್ ಬ್ಲಾಕ್ ಆಗಿದ್ದು, ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ಖಾತೆ ಅಮಾನತಾದ ಬಗ್ಗೆ ಉರ್ಫಿ ಜಾವೇದ್ ಬೇಸರ ವ್ಯಕತಪಡಿಸಿದ್ದು, ನಿಮಗೆ ಈಗ ಖುಷಿಯಾಗಿರಬೇಕು ಅಲ್ಲವೇ ಎಂದು ತಮ್ಮ ವಿರೋಧಿಗಳನ್ನು ಪ್ರಶ್ನಿಸಿದ್ದಾರೆ.












Click it and Unblock the Notifications