Trivikram: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಬಿಗ್‌ಬಾಸ್‌ ತ್ರಿವಿಕ್ರಮ್

ಇತ್ತೀಚೆಗಷ್ಟೇ ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಕ್ತಾಯಗೊಂಡಿದ್ದು ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಇದೀಗ ಅಧಿಕೃತವಾಗಿ ಕರ್ನಾಟಕದ ಬುಲ್ಡೋಜರ್ ತಂಡವನ್ನು ಸೇರಿಕೊಂಡಿದ್ದಾರೆ. ಕರ್ನಾಟಕದ ಬುಲ್ಡೋಜರ್ ತಂಡದ ನಾಯಕ ಕಿಚ್ಚ ಸುದೀಪ್ ತಂಡದ ಕ್ಯಾಪ್ ನೀಡುವ ಮೂಲಕ ತ್ರಿವಿಕ್ರಮ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ರನ್ನರ್ ಅಪ್ ಹಾಗೂ ನಟ ಸದ್ಯ ಸಿಸಿಎಲ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಇದೀಗ ಅವರು ತಮ್ಮ ಮುಂದಿನ ಗುರಿ ಏನು ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ತ್ರಿವಿಕ್ರಮ್ ಮುಂದಿನ ಗುರಿ ಏನು? ಅವರಿಗೆ ಯಾವೆಲ್ಲಾ ಆಫರ್ ಬಂದಿದೆ? ಎಲ್ಲವನ್ನೂ ತಿಳಿಯೋಣ.

trivikram has given good news to his fans

ಆಟದಲ್ಲೂ ಸೈ ನಟನೆಯಲ್ಲೂ ಸೈ

ತ್ರಿವಿಕ್ರಮ್ ಅವರಿಗೆ ಬಿಗ್‌ಬಾಸ್‌ನಿಂದ ಏನೆಲ್ಲಾ ಬಯಸಿದ್ದರೂ ಅದೆಲ್ಲಾ ಸಿಕ್ಕಿದೆ. ಆದರೆ ಕಪ್ ಮಾತ್ರ ಮಿಸ್ ಆಗಿದೆ. ತ್ರಿವಿಕ್ರಮ್ ಪ್ರತಿಯೊಂದು ವಿಷಯದಲ್ಲೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸ್ವಭಾವ ನೋಡಿ ಜನ ತ್ರಿವಿಕ್ರಮ್ ನಾಟಕ ಆಡುತ್ತಿದ್ದಾರೆ ಅಂದುಕೊಳ್ಳುತ್ತಿದ್ದರು.

ಆದರೆ ತ್ರಿವಿಕ್ರಮ್ ಅವರ ಸ್ವಭಾವವವೇ ಅದು ಅನ್ನೋದು ಮತ್ತೆ ಸಾಬೀತಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡ ತ್ರಿವಿಕ್ರಮ್ ಕಪ್ ಗೆದ್ದಿಲ್ಲ. ಆದರೆ ಜನರ ಮನಸ್ಸು ಗೆದ್ದಿದ್ದೇನೆ ಎಂದಿದ್ದಾರೆ. ತ್ರಿವಿಕ್ರಮ್ ಅವರ ತಂದೆ ಲಾರಿ ಡ್ರೈವರ್ ಆಗಿದ್ದರು. ತ್ರಿವಿಕ್ರಮ್ ಎಂಬಿಎ ಮುಗಿಸಿ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಾ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ನೋಡಿದ್ದಾರೆ.

ಕಷ್ಟಪಟ್ಟು ನಟನೆಗೆ ಎಂಟ್ರಿ ಕೊಟ್ಟ ತ್ರಿವಿಕ್ರಮ್

ಆ್ಯಕ್ಟಿಂಗ್ ವೃತ್ತಿಗೆ ಎಂಟ್ರಿ ಆಗೋದಕ್ಕೆ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಅವರಿಗೆ ಯಾವುದೇ ಕಲಾವಿದರ ಹಿನ್ನೆಲೆ ಇಲ್ಲ. ಶಾಲೆಯಲ್ಲಿ ತರಬೇತಿ ಕೂಡ ಪಡೆದಿಲ್ಲ. ಆದರೆ ಆತ್ಮಿವಿಶ್ವಾಸದ ಜೊತೆಗೆ ಮುನ್ನುಗ್ಗಿದ ತ್ರಿವಿಕ್ರಮ್, ವೃತ್ತಿಯಲ್ಲಿ ಒಂದೊಂದು ಮೆಟ್ಟಿಲು ಏರುತ್ತಿದ್ದರು.

ತ್ರಿವಿಕ್ರಮ್ ಕೇವಲ ನಟರಲ್ಲಿ ಒಳ್ಳೆಯ ಕ್ರಿಕೆಟಿಗ ಕೂಡ ಹೌದು. ಹಾಗೆಯೇ ಉತ್ತಮ ಮಾರ್ಕ್ಸ್ ಜೊತೆಗೆ ಎಂಬಿಎ ಮುಗಿಸಿದ್ದಾರೆ. ಜಿಮ್ ಟ್ರೈನರ್ ಕೋರ್ಸ್‌ ಮುಗಿಸಿದ ಅವರಿಗೆ ನಟನೆ ಪ್ರೀತಿಯ ಕ್ಷೇತ್ರವಾಗಿದೆ. ಅವಕಾಶ ಇಲ್ಲದೇ ಇದ್ದಾಗ ಕುಗ್ಗದೇ ಅವಕಾಶ ಬಂದಾಗ ಹಿಗ್ಗದೆ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಹೆಜ್ಜೆ ಇಡುವ ತ್ರಿವಿಕ್ರಮ್ ಮುಂದೆ ನಿರ್ಮಾಪಕರು ನಿಮ್ಮ ಆ್ಯಕ್ಟಿಂಗ್ ಚೆನ್ನಾಗಿದೆ. ಆದರೆ ಸಿನಿಮಾ ಓಡುತ್ತಾ ಅನ್ನೋ ಪ್ರಶ್ನೆ ಇಟ್ಟಿದ್ದರು. ಧಾರವಾಹಿಯಲ್ಲಿ ಅವರನ್ನು ನೋಡಿ ಮೆಚ್ಚಿಕೊಂಡವರು ಥಿಯೇಟರ್‌ಗೆ ಬರುತ್ತಾರೆ ಅನ್ನೋ ಭಯಾ ಕೂಡ ತ್ರಿವಿಕ್ರಮ್‌ಗೆ ಇತ್ತು.

ಬಿಗ್‌ಬಾಸ್‌ ಮನೆಗೆ ತ್ರಿವಿಕ್ರಮ್ ಹೋಗಲು ಕಾರಣ ಇದು..

ಈ ಭಯದಲ್ಲೇ ನಾಲ್ಕೈದು ಸಿನಿಮಾ ಮಾಡಿದ್ದ ತ್ರಿವಿಕ್ರಮ್, ಜನರ ಪ್ರೀತಿಯನ್ನು ಸಂಪಾದನೆ ಮಾಡಲು ಆಯ್ಕೆ ಮಾಡಿಕೊಂಡಿದ್ದು ಬಿಗ್‌ಬಾಸ್‌ ಮನೆಯನ್ನ. ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ನಟನೆ ಹಾಗೂ ತಮ್ಮ ಕನಸುಗಳ ಬಗ್ಗೆ ಮಾತನಾಡಿದ್ದ ತ್ರಿವಿಕ್ರಮ್, ಕೋಪವನ್ನು ಕಂಟ್ರೋಲ್ ಮಾಡಿಕೊಂಡು ಚಾಲೆಂಜ್‌ನಲ್ಲಿ ಗೆದ್ದಿದ್ದಾರೆ.

ಮಾತು ಮಾತಿಗೆ ಕೋಪ ಮಾಡಿಕೊಂಡು ಕೈ ಮುಂದೆ ಮಾಡುತ್ತಿದ್ದ ತ್ರಿವಿಕ್ರಮ್ ಬಿಗ್‌ಬಾಸ್‌ ಮನೆಗೆ ಹೋದ ಮೇಲೆ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡಿದ್ದರು. ಅವರ ಸ್ವಭಾವ, ತಾಳ್ಮೆ ಅವರನ್ನು ಬಿಗ್‌ಬಾಸ್‌ ಮನೆಯಲ್ಲಿ ರನ್ನರ್ ಅಪ್ ಆಗಿಸಿದೆ. ತ್ರಿವಿಕ್ರಮ್ ಕಪ್ ನಿಮ್ಮದಾಗಬೇಕಿತ್ತು ಎಂದು ಹತ್ತಿರ ಬರುವ ಜನರಿಗೆ ಹತ್ತಿರವಾಗುವ ಗುರಿ ತ್ರಿವಿಕ್ರಮ್‌ದ್ದಾಗಿದೆ. ಅದನ್ನು ಮಾಡಲು ಅವರೀಗ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ ತ್ರಿವಿಕ್ರಮ್ ಕೈಗೆ ಒಳ್ಳೆಯ ಪ್ರಾಜೆಕ್ಸ್‌ಗಳು ಬರುತ್ತಿವೆ ಎಂದು ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ.

ಹಾಗೆಯೇ ಸಂದರ್ಶನದಲ್ಲಿ ಮಾತನಾಡಿದ ತ್ರಿವಿಕ್ರಮ್ ಮದುವೆಯ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಸದ್ಯ ತಮ್ಮ ಮನಸ್ಸಿನಲ್ಲಿ ಯಾವುದೇ ಹುಡುಗಿ ಇಲ್ಲ ಎಂದು ಹೇಳುವ ಮೂಲಕ ತ್ರಿವಿಕ್ರಮ್ ಗುಂಗಿನಲ್ಲಿ ಇರುವ ಹುಡುಗಿಯರಿಗೆ ಖುಷಿಗೊಳಿಸಿದ್ದಾರೆ. ಒಟ್ಟಿನಲ್ಲಿ ಧಾರವಾಹಿಯಲ್ಲಿ ಜನರಪ್ರೀತಿ ಗಳಿಸಿದ್ದ ತ್ರಿವಿಕ್ರಮ್ ಅವರಿಗೆ ಸಿನಿಮಾ ಹಿಟ್ ಆಗುತ್ತಿರಲಿಲ್ಲ. ಆದರೀಗ ಜನರಿಂದ ಪ್ರೀತಿ ಗಳಿಸಿದ ತ್ರಿವಿಕ್ರಮ್ ಮತ್ತೆ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+