ವಿಧಿಯಾಟ: ನಾಗಚೈತನ್ಯ-ಶೋಭಿತಾ ಮದುವೆ ಸೆಲೆಬ್ರೇಷನ್‌ ಜೋರು! ಇತ್ತ ಸಮಂತಾಗೆ ಪಿತೃವಿಯೋಗ

ಟಾಲಿವುಡ್‌ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಅವರ ವಿವಾಹ ಕಾರ್ಯಕ್ರಮವು ಭರ್ಜರಿಯಾಗಿ ಶುರುವಾಗಿದೆ. ಮಂಗಳಸ್ನಾನ ಹಾಗೂ ಹಳದಿ ಶಾಸ್ತ್ರ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಇದರ ಫೋಟೋ ಫುಲ್‌ ವೈರಲ್‌ ಆಗಿವೆ. ಇದೇ ವೇಳೆ ನಾಗಚೈತನ್ಯ ಮಾಜಿ ಪತ್ನಿ ನಟಿ ಸಮಂತಾ ಅವರಿಗೆ ಪಿತೃವಿಯೋಗವಾಗಿದೆ.

ಇನ್ನು ನಾಗಚೈತನ್ಯ ಮತ್ತು ಶೋಭಿತಾ ಅವರು ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥದೊಂದಿಗೆ ತಮ್ಮ ಮದುವೆ ವಿಚಾರವನ್ನು ರಿವೀಲ್‌ ಮಾಡಿ ಎಲ್ಲರಿಗೂ ಶಾಕ್‌ ನೀಡಿದ್ದರು. ಸದ್ಯ ಡಿಸೆಂಬರ್ 4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ವಿವಾಹ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮದುವೆಗೂ ಮುನ್ನ ಶಾಸ್ತ್ರ ಸಂಪ್ರದಾಯಗಳಂತೆ ಅವರ ವಿವಾಹ ಕಾರ್ಯಕ್ರಮಗಳು ಶುರುವಾಗಿವೆ. ಸದ್ಯ ತಮ್ಮ ಮದುವೆಗೆ ಮುಂಚಿತವಾಗಿ ಮಂಗಳಸ್ನಾನ ಹಾಗೂ ಹಳದಿ ಶಾಸ್ತ್ರ ಕಾರ್ಯಕ್ರಮಗಳು ನೆರವೇರಿವೆ.

Tollywood Actor Naga Chaitanya-Sobhita Dhulipala Wedding Ceremony Took Place In Hyderabad

ದಂಪತಿಯ ಮದುವೆಯ ಆಮಂತ್ರಣದಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಅವರ ಹೆಸರುಗಳು ಮತ್ತು ಅವರ ಎರಡೂ ಕುಟುಂಬಗಳ ಹೆಸರುಗಳಿವೆ. ಮದುವೆಯ ದಿನಾಂಕ ಡಿಸೆಂಬರ್ 4 ಎಂದು ಘೋಷಣೆಯಾಗಿದೆ. ದಕ್ಷಿಣ ಭಾರತದ ಸಂಪ್ರದಾಯದಂತೆ ವಿನ್ಯಾಸ ಮೂಡಿಬಂದಿದೆ.

ನಾಗಚೈತನ್ಯ ತಂದೆ ನಾಗಾರ್ಜುನ ಅವರು ಈ ಮದುವೆ ಸಮಾರಂಭದ ಬಗ್ಗೆ ಟ್ವೀಟ್‌ ಮಾಡಿದ್ದರು. ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥವನ್ನು ಬೆಳಿಗ್ಗೆ 9:42ಕ್ಕೆ ನಡೆದ ಶೋಭಿತಾ ಅವರೊಂದಿಗೆ ಘೋಷಿಸಲು ನಾವು ಸಂತೋಷಪಡುತ್ತೇವೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಸಂತೋಷದ ದಂಪತಿಗಳಿಗೆ ಅಭಿನಂದನೆಗಳು ಎಂದು ನಾಗಾರ್ಜುನ್‌ ಬರಮಾಡಿಕೊಂಡಿದ್ದರು.

Tollywood Actor Naga Chaitanya-Sobhita Dhulipala Wedding Ceremony Took Place In Hyderabad

ಪಿತೃಶೋಕದಲ್ಲಿ ನಟಿ ಸಮಂತಾ!

ಅತ್ತ ಮಾಜಿ ಪತಿಯ ಎರಡನೇ ಮದುವೆ ಸಂಭ್ರಮದ ಹೊತ್ತಿನಲ್ಲೆ ನಟಿ ಸಮಂತಾಗೆ ದೊಡ್ಡ ಶಾಕ್‌ ಎದುರಾಗಿದೆ. ಸಮಂತಾ ಅವರ ತಂದೆ ಜೋಸೆಫ್​ ಪ್ರಭು ನಿಧನರಾಗಿದ್ದು, ಅವರ ಕುಟುಂಬದಲ್ಲಿ ಶೋಕದಲ್ಲಿದೆ. ಇನ್ನು ಈ ನೋವಿನ ವಿಚಾರವನ್ನು ನಟಿ ಸಮಂತಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tollywood Actor Naga Chaitanya-Sobhita Dhulipala Wedding Ceremony Took Place In Hyderabad

"ಮತ್ತೆ ನಾವು ಸಿಗವವರೆಗೆ ಅಪ್ಪ.." ಎಂದು ಸಮಂತಾ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಚೂರಾದ ಹೃದಯದ ಚಿಹ್ನೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಸಮಂತಾಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ದೇವರು ನಿಜಕ್ಕೂ ಕ್ರೂರಿ ಎಂದು ಅಭಿಮಾನಿಗಳು ಬೇಸರ ಹಂಚಿಕೊಂಡಿದ್ದಾರೆ. ಸಮಂತಾ ತಂದೆ ಜೋಸೆಫ್ ಪ್ರಭು ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ನಾಳೆ ಅವರ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+