Darshan Thoogudeepa: ರೇಣುಕಾಸ್ವಾಮಿ ರೀತಿ ಬಡಕಲು ದೇಹದವರ ಮೇಲಾ ನಿಮ್ಮ ದರ್ಪ? ಹಿಂಗೆ ಹೇಳ್ತಿದ್ದಾರೆ ಕನ್ನಡಿಗರು...
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಇದೀಗ ಭಾರಿ ಆಕ್ರೋಶ ಮೊಳಗುತ್ತಿದ್ದು, ಕೊಲೆ ಆಗಿರುವ ರೇಣುಕಾಸ್ವಾಮಿ ಫೋಟೋ ರಿಲೀಸ್ ಆದ ನಂತರ ಸಂಚಲನ ಸೃಷ್ಟಿ ಆಗಿದೆ. ಈ ವಿಚಾರದಲ್ಲಿ ದರ್ಶನ್ ತೂಗುದೀಪ್ & ಗ್ಯಾಂಗ್ ಮಾಡಿದ್ದು ತಪ್ಪು ಎಂಬ ಆಕ್ರೋಶವು ಕೂಡ ಮೊಳಗಿದೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ದರ್ಶನ್ & ಗ್ಯಾಂಗ್ ಎದುರು ಕೈಮುಗಿದು ಕೂತಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಈ ಕಾರಣಕ್ಕೆ ಈಗ ಕನ್ನಡಿಗರು, ರೇಣುಕಾಸ್ವಾಮಿ ರೀತಿ ಬಡಕಲು ದೇಹದವರ ಮೇಲಾ ನಿಮ್ಮ ದರ್ಪ? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ!
ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ತೋರಿಸಿದ ದರ್ಪ ಹೇಗೆಲ್ಲ ಇತ್ತು ಎಂಬ ಬಗ್ಗೆ ಸಂಚಲನ ಸೃಷ್ಟಿ ಮಾಡುವ ಮಾಹಿತಿಗಳು ಈಗ ಓಡಾಡುತ್ತಿವೆ. ಇದು ಮಾತ್ರ ಅಲ್ಲ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ತೆಗೆದ ಫೋಟೋ & ವಿಡಿಯೋಸ್ ಕೂಡ ಪೊಲೀಸರ ಕೈಗೆ ಸಿಕ್ಕಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಈ ನಡುವೆ ಕೊಲೆ ಆಗಿರುವ ರೇಣುಕಾಸ್ವಾಮಿ ಫೋಟೋ ನೋಡಿ ಜನರು ದರ್ಶನ್ ತೂಗುದೀಪ್ & ಗ್ಯಾಂಗ್ ಬಗ್ಗೆ ಏನು ಹೇಳುತ್ತಿದ್ದಾರೆ ಗೊತ್ತಾ? ಮುಂದೆ ಓದಿ.

ತಾಕತ್ ಇಲ್ಲದ ದರ್ಶನ್ ಗ್ಯಾಂಗ್?
ಸಾಮಾನ್ಯವಾಗಿ ಮನುಷ್ಯ ಒಬ್ಬ ಹೊಡೆದಾಟ & ಬಡಿದಾಟ ಮಾಡುವುದು ತನಗಿಂತ ಭಾರಿ ಶಕ್ತಿಶಾಲಿ ಆಗಿರುವ ವ್ಯಕ್ತಿ ಜೊತೆಗೆ. ಹೀಗೆ ತನ್ನ ಎದುರಾಳಿ ತನಗಿಂತ ಬಲಿಷ್ಠವಾಗಿ ಇದ್ದಾಗ ಜಗಳ ಆಡುವುದು ಕಾಮನ್. ಆದರೆ ದರ್ಶನ್ ತೂಗುದೀಪ್ & ಗ್ಯಾಂಗ್ ಹಲ್ಲೆ ಮಾಡಿ ಭೀಕರ ರೀತಿಯಲ್ಲಿ ಕೊಲೆ ಮಾಡಿದೆ ಎಂದು ಆರೋಪ ಮಾಡಲಾಗಿರುವ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಆಗಿರುವುದೇ ಬೇರೆ. ಬಡಕಲು ದೇಹದ ರೇಣುಕಾಸ್ವಾಮಿ ಮೇಲೆ ಈ ರೀತಿಯಾಗಿ ಹಲ್ಲೆ ಮಾಡಿರುವ ದರ್ಶನ್ & ಗ್ಯಾಂಗ್ ತಮ್ಮಷ್ಟೇ ಗಟ್ಟಿ ಮುಟ್ಟಾಗಿ ಇರುವವರ ಮೇಲೆ ಏಕೆ ಜಗಳಕ್ಕೆ ಹೋಗಲ್ಲ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಕನ್ನಡಿಗರು.
ಕೊಲೆಯಾದ ರೇಣುಕಾಸ್ವಾಮಿ ಈಗ ದೆವ್ವ?
ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದ ಜೀವನ ಹಾಳು ಮಾಡಿಕೊಂಡು ಇದೀಗ ಜೈಲಿನ ನರಕಕ್ಕೆ ಬಿದ್ದಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿರುವ ಈ ನಟನಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಒಂದೊಂದು ಸಿನಿಮಾಗೆ ಕೂಡ ಕೋಟಿ ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಮಾತು ಕೂಡ ಇತ್ತು. ಇಂತಹ ಡಿ-ಬಾಸ್ ಈಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ದರ್ಶನ್ ಅವರ ಸಿನಿಮಾಗಳು ನಿಂತು ಹೋಗಲಿವೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇದು ಬಿಡಿ, ಮತ್ತೆ ಒಂದು ಕಡೆ ರೇಣುಕಾಸ್ವಾಮಿ ಆತ್ಮ ದೆವ್ವವಾಗಿ ಇದೀಗ ಕಾಟ ಕೊಡಲು ಶುರು ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications