ದರ್ಶನ್ ತಲೆ ಕೂದಲಿಗೆ ಏನಾಯ್ತು? ವಿಗ್ ತೆಗೆದು ತಲೆ ಬೋಳಿಸಿದ್ರಾ?
ದರ್ಶನ್ ಕೊಲೆ ಆರೋಪದಲ್ಲಿ ಜೈಲು ಪಾಲಾದ ನಂತರ ಒಂದೊಂದೇ ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾರೆ. ಹೀರೋ ಆಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದ ನಟ ದರ್ಶನ್ ಈಗ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಮುದ್ದೆ ಮುರಿಯುತ್ತಾ & ಕಂಬಿ ಎಣಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ದಿಢೀರ್ ತಲೆ ಕೂದಲು ಬೋಳಿಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಅಷ್ಟಕ್ಕೂ ದರ್ಶನ್ ಅವರ ತಲೆ ಕೂದಲು ಉದುರಿ ಹೋಗಿ ಬಹಳ ಕಾಲವೇ ಆಗಿದೆ. ಅದ್ರಲ್ಲೂ ಐರಾವತ ಸಿನಿಮಾ ಶೂಟಿಂಗ್ ಸಮಯದಲ್ಲಿ ನಟ ದರ್ಶನ್ ತಲೆ ಆಗಲೇ ಭಾಗಶಃ ಕೂದಲು ಕಳೆದುಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರಿಗೆ ಈ ಸಮಸ್ಯೆ ಜಾಸ್ತಿ ಕಾಡುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ದಿಢೀರ್ ದರ್ಶನ್‌ರ ತಲೆಯಲ್ಲಿ ಕೂದಲು ಪ್ರತ್ಯಕ್ಷ್ಯ ಆಗಿತ್ತು. ಇದಕ್ಕೆ ಕಾರಣ ವಿಗ್ ಅಂದ್ರೆ ಕೃತಕ ಕೂದಲು ಎಂಬುದು ಇಡೀ ಜಗತ್ತಿಗೇ ಗೊತ್ತು. ಆದರೆ ದಿಢೀರ್ ನಟ ದರ್ಶನ್ ತಲೆ ಕೂದಲು ಬೋಳಿಸಿರುವುದು ಯಾಕೆ ಗೊತ್ತಾ? ಮುಂದೆ ಓದಿ.

ದರ್ಶನ್‌ಗೆ ವಿಗ್ ಪ್ರಾಬ್ಲಂ?
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ಈಗ ಸಾಮಾನ್ಯ ಖೈದಿಯ ರೀತಿ ಜೀವನ ನಡೆಸುತ್ತಿದ್ದಾರೆ. ಜೈಲಿನ ಖೈದಿಗಳಿಗೆ ನೀಡುವ ಮುದ್ದೆ, ಅನ್ನ, ಸಾರು ತಿಂದು ಜೀವನ ನಡೆಸುತ್ತಿದ್ದಾರೆ. ಹೀಗಿದ್ದಾಗ ಜೈಲಿನಲ್ಲಿ ದರ್ಶನ್‌ಗೆ ತಲೆ ಕೂದಲು & ವಿಗ್ ಮೇಂಟೇನ್ ಮಾಡುವುದು ಕಷ್ಟ ಆಗುತ್ತಿದೆಯಂತೆ. ಹೀಗಾಗಿ ನಟ ದರ್ಶನ್ ಈ ಕೂದಲು ಸಮಸ್ಯೆ ಸರಿ ಮಾಡಿಕೊಳ್ಳಲು ತಲೆ ಕೂದಲನ್ನೇ ಸಂಪೂರ್ಣ ತೆಗಿಸಿದ್ದಾರೆ ಎನ್ನಲಾಗಿದೆ.
ವಿಗ್ ಹಾಕಿದರೆ ಸರಿಯಾಗಿ ನೋಡಿಕೊಳ್ಳಬೇಕು!
ಎಲ್ಲರೂ ಅಂದುಕೊಂಡ ರೀತಿ ವಿಗ್ ಖರೀದಿ ಮಾಡಿ ಬಳಸುವುದು ಸುಲಭದ ಮಾತು ಅಲ್ಲ. ಅದ್ರಲ್ಲೂ ವಿಗ್ ಹಾಕಿದ ನಂತರ ಅದನ್ನ ಸರಿಯಾದ ರೀತಿ ನೋಡಿಕೊಂಡು ಹೋಗಬೇಕು. ಇಲ್ಲವಾದರೆ ಅದು ಕೂಡ ಸಮಸ್ಯೆ ತರುತ್ತದೆ. ಹೀಗಿದ್ದಾಗ ದರ್ಶನ್‌ಗೆ ಜೈಲಿನಲ್ಲಿ ಇದ್ದುಕೊಂಡು ವಿಗ್ ಮೇಂಟೇನ್ ಮಾಡುವುದು ಕಷ್ಟವೇ ಆಗುತ್ತಿದೆ. ಈ ಕಾರಣಕ್ಕೆ ಈಗ ಮೊದಲಿನ ರೂಪಕ್ಕೆ ಬಂದಿದ್ದಾರಂತೆ ದಾಸ ದರ್ಶನ್. ತಲೆ ಕೂದಲು ಪೂರ್ತಿ ಬೋಳಿಸಿರುವ ದರ್ಶನ್ ಅವರು, ಈಗ ತಮ್ಮ ಜೀವನದ ಬಗ್ಗೆ ಚಿಂತಾಕ್ರಾಂತ ಸ್ಥಿತಿಯಲ್ಲಿ ಕೂರುತ್ತಿದ್ದು ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ ಎನ್ನುತ್ತಿವೆ ಜೈಲಿನ ಮೂಲಗಳು.
ಅಮ್ಮನ ಎದುರು ದರ್ಶನ್ ಕಣ್ಣೀರು?
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಾ, ಜೈಲಿನ ಕಂಬಿಗಳ ಎಣಿಸುತ್ತಾ ಜೀವನ ಕಳೆಯುತ್ತಿದ್ದಾರೆ. ಹೀಗಿದ್ದಾಗ ಇಂದು ದರ್ಶನ್ ಅವರನ್ನ ನೋಡೋಕೆ ಅಂತಾನೆ ಅವರ ಅಮ್ಮ & ತಮ್ಮ ಇಬ್ಬರೂ ಹೋಗಿದ್ದಾರೆ. ದರ್ಶನ್ ತಮ್ಮ ದಿನಕರ್ ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ ಒಂದು ಹಂತದಲ್ಲಿ ನಟ ದರ್ಶನ್ ಸ್ವಂತ ತಮ್ಮ ದಿನಕರ್ ತೂಗುದೀಪ್ ಜೊತೆಯಲ್ಲೂ ಜಗಳ ಮಾಡಿ, ಹಲ್ಲೆ ಮಾಡಿದ್ದರೆಂಬ ಆರೋಪ ಇದೆ. ಹೀಗಿದ್ದರೂ ಕೊಲೆ ಆರೋಪದ ಮೇಲೆ ಜೈಲು ಸೇರಿದ ಅಣ್ಣನ ನೋಡಲು ತಮ್ಮ ದಿನಕರ್ ಬಂದಿದ್ದು, ಈ ವೇಳೆ ಇಬ್ಬರೂ ಭಾವುಕರಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications