Ugram Manju: ಗೌತಮಿ ಬಾಳಲ್ಲಿ ಯಾವುದೇ ಬಿರುಗಾಳಿ ಬಿರುಕು ಇಲ್ಲ- ಉಗ್ರಂ ಮಂಜು ಸ್ಪಷ್ಟನೆ

ಬಿಗ್‌ಬಾಸ್‌ ಮನೆಯಲ್ಲಿದ್ದ ಸಮಯದಲ್ಲಿ ಅಂಕಲ್-ಆಂಟಿ ಲವ್‌ ಸ್ಟೋರಿ ಎಂದು ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಅವರನ್ನು ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್‌ನಿಂದಾಗಿ ಗೌತಮಿ ಜಾದವ್ ಬಾಳಲ್ಲಿ ಬಿರುಕು ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದಕ್ಕೆಲ್ಲಾ ಉಗ್ರಂ ಮಂಜು ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಮಂಜು ಹೇಳಿದ್ದೇನು? ಗೌತಮಿ ದಾಂಪತ್ಯ ಜೀವನದಲ್ಲಿ ನಿಜವಾಗಲೂ ಬಿರುಕು ಉಂಟಾಗಿದಿಯಾ?

ಸಂದರ್ಶನವೊಂದರಲ್ಲಿ ಮಾತನಾಡಿದ ಉಗ್ರಂ ಮಂಜು, 'ತ್ರಿವಿಕ್ರಮ್ ರಜತ್ ಒಟ್ಟಿಗೆ ಮಾತನಾಡಿದರೆ ಅದು ಸ್ನೇಹ, ಧನ್‌ರಾಜ್ ಹನುಮಂತ ಒಟ್ಟಿಗೆ ಮಾತನಾಡಿದರೆ ಅದು ಸ್ನೇಹ, ನಾನು ಗೌತಮಿ ಒಟ್ಟಿಗೆ ಮಾತನಾಡಿದರೆ ಅದು ಸ್ನೇಹ ಅಲ್ವಾ' ಎಂದು ಮಂಜು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಪ್ರಶ್ನೆ ಮಾಡಿದ್ದಾರೆ.

there is no crack in gauthaamis life - ugram manju clarifies

'ಯಾಕೆ ಗಂಡು-ಗಂಡು ಹಾಗೂ ಹೆಣ್ಣು ಹೆಣ್ಣು ಮಾತನಾಡಿದರೆ ಮಾತ್ರ ಸ್ನೇಹ ಅಂತೀರಾ? ಗಂಡು ಹೆಣ್ಣು ಮಾತನಾಡಿದರೆ ಅದನ್ನು ಯಾಕೆ ಸ್ನೇಹ ಅಂತ ಒಪ್ಪಿಕೊಳ್ಳುವುದಿಲ್ಲ? ಗೌತಮಿ ಮನೆಯಲ್ಲಿ ಆಗಲಿ ಅಥವಾ ಅವರ ಗಂಡ ಅಭಿಯಿಂದಲೇ ಆಗಲಿ ಯಾವುದೇ ಈ ರೀತಿಯ ಮಾತುಗಳು ಬಂದಿಲ್ಲ. ಅವರು ಖುಷಿಯಾಗೇ ಇದ್ದಾರೆ. ನಮ್ಮ ಮನೆಯಲ್ಲಿಯೂ ಕೂಡ ಇಂತಹ ಮಾತುಗಳು ಕೇಳಿ ಬಂದಿಲ್ಲ. ಹೀಗಿರುವಾಗ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಂದು ಮಂಜು ತಮ್ಮ ಹಾಗೂ ಗೌತಮಿ ಸ್ನೇಹದ ಬಗ್ಗೆ ಮಾತನಾಡುವವರಿಗೆ ಖಡಕ್ ಪ್ರಶ್ನೆಯನ್ನು ಹಾಕಿದ್ದಾರೆ.

'ನಮ್ಮ ಸ್ನೇಹ ಹೇಗೆ ಅನ್ನೋದನ್ನು ಇಡೀ ಕರ್ನಾಟಕದ ಜನತೆ ನೋಡಿದೆ. ನಮ್ಮ ಸ್ನೇಹದಲ್ಲಿ ಕಲ್ಮಶ ಇಲ್ಲ. ಮನಸ್ಸಿನಲ್ಲಿ ಒಂದು ಹೊರಗಡೆ ಒಂದು ಇಟ್ಟುಕೊಂಡಿಲ್ಲ. ನಾನು ಗೌತಮಿ ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೂ ಸ್ನೇಹಿತರು, ಹೊರ ಬಂದ ಮೇಲೂ ಕೂಡ ಸ್ನೇಹಿತರೇ. ಇದರಲ್ಲಿ ಎರಡು ಮಾತಿಲ್ಲ. ಯಾರು ಏನೇ ಹೇಳಲಿ. ನಮ್ಮ ಸ್ನೇಹ ಹೀಗೆ ಮುಂದುವರೆಯುತ್ತದೆ. ಯಾಕೆಂದರೆ ನಮ್ಮನ್ನು ಪ್ರೀತಿಸುವ ಜನ ನಮ್ಮನ್ನು ನಂಬುತ್ತಾರೆ. ನನ್ನ ಫ್ಯಾಮಿಲಿ ನನ್ನನ್ನು ನಂಬುತ್ತದೆ, ಗೌತಮಿ ಫ್ಯಾಮಿಲಿ ಅವರನ್ನು ನಂಬುತ್ತದೆ, ನಮ್ಮ ಸ್ನೇಹಕ್ಕೆ ಅಡೆತಡೆ ಇಲ್ಲ' ಎಂದು ಮಂಜು ಅವರು ಹೇಳಿದ್ದಾರೆ.

ಗೌತಮಿ ಫ್ಯಾಮಿಲಿ ಜೊತೆ ಊಟ ಮಾಡಿದೆ-ಮಂಜು

ಇನ್ನೂ ಗೌತಮಿ ಅವರ ಪತಿ ಅಭಿ ನನ್ನನ್ನು ಗೌರವದಿಂದ ಕಾಣುತ್ತಾರೆ. ನಾನು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಗೌತಮಿ ಹಾಗೂ ಅವರ ಪತಿ ಅಭಿ ಜೊತೆ ಊಟಕ್ಕೆ ಹೋಗಿದ್ದೇನೆ. ಅಭಿ ಅವರ ಮನಸ್ಸಿನಲ್ಲಿ ಅಂತಹ ಅನುಮಾನವೇ ಇಲ್ಲ. ಹೀಗಿರುವಾಗ ಅವರ ಬಾಳಲ್ಲಿ ಬಿರುಕು ಅನ್ನೋದು ಸುಳ್ಳು. ಅಭಿ ಅವರು ತುಂಬಾ ಚೆನ್ನಾಗಿ ಗೌತಮಿ ಅವರನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಮಂಜು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಫ್ಯಾಮಿಲಿಯಲ್ಲಿ ನನ್ನನ್ನು ನಂಬುತ್ತಾರೆ- ಮಂಜು

ಮಂಜು ಅವರು ತಮ್ಮ ಕುಟುಂಬಸ್ಥರ ಬಗ್ಗೆ ಕೂಡ ಇದೇ ವೇಳೆ ಪ್ರಸ್ತಾಪ ಮಾಡಿದರು. 'ನಮ್ಮ ಕುಟುಂಬದಲ್ಲಿ ನನ್ನ ತಂದೆ, ಸಹೋದರಿಯರೂ ಕೂಡ ನನ್ನನ್ನು ನಂಬುತ್ತಾರೆ. ಹೀಗಿರುವಾಗ ನಾನು ಬೇರೆಯವರ ಬಗ್ಗೆ ತೆಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮಂಜು ಹಾಗೂ ಗೌತಮಿ ಸ್ನೇಹದಿಂದಾಗಿ ಯಾರಿಗೂ ಕೂಡ ತೊಂದರೆ ಆಗಿಲ್ಲ. ಎಲ್ಲರೂ ಚೆನ್ನಾಗಿದ್ದಾರೆ. ಇದೆಲ್ಲವೂ ಗಾಸಿಪ್ ಅಷ್ಟೆ. ನಾವೆಲ್ಲಾರೂ ತುಂಬಾ ಚೆನ್ನಾಗಿ ಇದ್ದೇವೆ ಎಂದು ಮಂಜು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+