ಕನ್ನಡದ ಬೆಡಗಿ ಶ್ರೀಲೀಲಾ ಮದುವೆ ಬಗ್ಗೆ ಖ್ಯಾತ ನಟನಿಂದ ಅಪ್‌ಡೇಟ್
ಟಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಶ್ರೀಲೀಲಾ ಸದ್ಯ ಸಾಧನೆಯ ಉತ್ತುಂಗದಲ್ಲಿದ್ದಾರೆ. ಇತ್ತೀಚೆಗೆ ಸಾಲು ಸಾಲು ತೆಲುಗು ಸಿನಿಮಾಗಳ ಮೂಲಕ ಅವರು ತಮ್ಮದೇ ಅಖಾಡ ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪುಷ್ಪ-2 ಸಿನಿಮಾದ ಕಿಸ್ಸಿಕ್ ಐಟಂ ಸಾಂಗ್ ಮೂಲಕ ಅವರ ಹವಾ ಮತ್ತಷ್ಟು ಹೆಚ್ಚಾಗಿದೆ. ಇನ್ನು ಇದರ ನಡುವೆಯೇ ನಟಿ ಶ್ರೀಲೀಲಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ.
ಹಲವು ಬಾರಿ ನಟಿ ಶ್ರೀಲೀಲಾ ಮದುವೆ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಕನ್ನಡ ಬ್ಯೂಟಿ ಮದುವೆ ವಿಚಾರವನ್ನು ಖ್ಯಾತ ನಟ ಮಾತನಾಡಿದ್ದಾರೆ. ಅಲ್ಲದೆ ಶ್ರೀಲೀಲಾಗೆ ಮದುವೆ ಮಾಡಿಸುವ ಜವಾಬ್ದಾರಿ ನನ್ನದು ಎಂದು ಹೊಣೆಯನ್ನೂ ಹೊತ್ತಿಕೊಂಡಿದ್ದಾರೆ. ಹೌದು ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರು ಶ್ರೀಲೀಲಾ ಮದುವೆ ಬಗ್ಗೆ ಮಾತನಾಡಿದ್ದಾರೆ.

ನಟ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ರಿಯಾಲಿಟಿ ಶೋನಲ್ಲಿ ಶ್ರೀಲೀಲಾ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಬಾಲಕೃಷ್ಣ್ ಅವರು ಶ್ರೀಲೀಲಾ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ತೆಲುಗು ನಟರಾದ ನವೀನ್ ಪೋಲಿಶೆಟ್ಟಿ ಮತ್ತು ಶ್ರೀಲೀಲಾ ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಅವರು ಶ್ರೀಲೀಲಾಗೆ ಮದುವೆ ಮಾಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ನಟಿ ಶ್ರೀಲೀಲಾ ನನ್ನ ಮಗಳಿದ್ದಂತೆ. ಅವರನ್ನು ಕಂಡಾಗೆಲ್ಲ ನನಗೆ ನನ್ನ ಮಗಳೇ ನೆನಪಾಗುತ್ತಾಳೆ. ಹಾಗಾಗಿ ಅವಳಿಗೆ ಮದುವೆ ಮಾಡಿಸುವ ಜವಾಬ್ದಾರಿ ಕೂಡ ನನ್ನದು ಎಂದು ಬಾಲಯ್ಯ ಹೇಳಿದ್ದಾರಂತೆ. ಇನ್ನು ಬಾಲಕೃಷ್ಣ ಅವರೊಂದಿಗೆ ನಟಿ ಶ್ರೀಲೀಲಾ ಈ ಹಿಂದೆ ಭಗವಂತ ಕೇಸರಿ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಶ್ರೀಲೀಲಾ ಚಿಕ್ಕಪ್ಪನ ಪಾತ್ರವನ್ನು ಬಾಲಯ್ಯ ನಿರ್ವಹಿಸಿದ್ದರು. ಅಂದಿನಿಂದಲೂ ಇಬ್ಬರ ನಡುವೆ ತಂದೆ-ಮಗಳ ಸಂಬಂಧ ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಅನ್‌ಸ್ಟಾಪಬಲ್ ಕಾರ್ಯಕ್ರಮದಲ್ಲಿ ನಟ ನವೀನ್ ಪೋಲಿಶೆಟ್ಟಿ ಅವರಿಗೆ ಬಾಲಯ್ಯ ಅವರು ನಿಮಗೆ ಎಂತಹ ಹುಡುಗಿ ಬೇಕು ಎಂದು ಹಲವು ನಟಿಯರ ಫೋಟೋಗಳನ್ನು ತೋರಿಸಲಾಯಿತು. ಅಲ್ಲದೆ ಅವರಲ್ಲಿ ಯಾವೆಲ್ಲ ಗುಣ ನಿಮಗೆ ಇಷ್ಟ? ಎಂದು ಕೇಳಿದರು. ಈ ವೇಳೆ ನಟ ನವೀನ್ ಅವರು ಶ್ರೀಲೀಲಾ ಅವರ ಫೋಟೋ ಬಂದಾಗ ಈ ರೀತಿಯ ಗುಣಗಳನ್ನು ಹೊಂದಿರುವಂತಹ, ಶ್ರೀಲೀಲಾ ಅವರಂತಹ ಹುಡುಗಿಯನ್ನ ನಾನು ಇಷ್ಟಪಡುತ್ತೇನೆ ಎಂದು ನವೀನ್ ಆಸೆ ಬಿಚ್ಚಿಟ್ಟಿದ್ದಾರೆ.
ಅದೇ ರೀತಿ ಕನ್ನಡದ ಬೆಡಗಿ ಶ್ರೀಲೀಲಾ ಅವರಿಗೆ ಟಾಲಿವುಡ್ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್ ಮತ್ತು ನವೀನ್ ಪೋಲಿಶೆಟ್ಟಿ ಅವರ ಚಿತ್ರಗಳನ್ನು ತೋರಿಸಲಾಯಿತು. ಆಗ ಶ್ರೀಲೀಲಾ ಮಹೇಶ್ ಬಾಬು ಅವರ ಆಕರ್ಷಕ ಕಣ್ಣುಗಳನ್ನು ನನಗೆ ಇಷ್ಟ. ಇನ್ನು ಅಲ್ಲು ಅರ್ಜುನ್ ಅವರ ಸಿನಿಮಾಗಳು ನನಗೆ ಇಷ್ಟ. ಇನ್ನು ನವೀನ್ ಅವರ ಹಾಸ್ಯಪ್ರಜ್ಞೆ ಕೂಡ ನನಗೆ ಇಷ್ಟ ಎಂದು ಶ್ರೀಲೀಲಾ ಹೇಳಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಶ್ರೀಲೀಲಾ ಹಾಗೂ ನಟ ನವೀನ್ ಇವರಿಬ್ಬರ ನಡುವೆ ಪ್ರೇಮಾಂಕುರವಿದೆಯಾ? ಎಂಬ ಚರ್ಚೆಯೂ ಶುರುವಾಗಿದೆ.












Click it and Unblock the Notifications