'ಅವನ ಮುಖಕ್ಕೆ ಚಪ್ಪಲಿಯಲ್ಲಿ ಹೋಡಿರಿ': ಬಿಗ್ ಬಾಸ್ ತನಿಷಾ ಫುಲ್ ಬೆಂಕಿ
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಸಹ, ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆ ಸೀಜನ್‌ನ ಸ್ಟ್ರಾಂಗ್ ಕಂಟೆಸ್ಟೆಂಟ್, ಬೆಂಕಿ ಅಂತಾನೇ ಖ್ಯಾತಿ ಪಡೆದಿದ್ದ ನಟಿ ತನಿಷಾ ಕುಪ್ಪಂಡ ಶೋ ಮುಗಿದ ಬಳಿಕ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
ಒಂದೆಡೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಿರುವ ತನಿಷಾ, ತಮ್ಮ ಬ್ಯಾನರ್‌ನ ಮೊದಲ ಸಿನಿಮಾ ಕೋಣ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರೆ, ಮತ್ತೊಂದೆಡೆ 'ಕುಪ್ಪಂಡಾಸ್' ಎನ್ನುವ ಸಿಲ್ವರ್ ಜ್ಯುವೆಲರಿ ಶಾಪ್ ತೆರೆದಿದ್ದಾರೆ. ಸದ್ಯ ಈ ಬ್ಯುಸಿ ಜೀವನದ ನಡುವೆ ತನಿಷಾ ಕುಪ್ಪಂಡ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದು, ಈ ವೇಳೆ ತಮ್ಮ ದೇಹದ ಬಗ್ಗೆ ಮಾತನಾಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲೈವ್ ನಲ್ಲಿ ಎಲ್ಲರ ಪ್ರಶ್ನೆ ಉತ್ತರಿಸುತ್ತಿದ್ದ ತನಿಷಾ ಕುಪ್ಪಂಡ ವ್ಯಕ್ತಿಯೊಬ್ಬನ ಕಮೆಂಟ್ ನೋಡಿ ಕೆಂಡಾಮಂಡಲರಾಗಿದ್ದಾರೆ.

'ಯಾವನೋ ಕಿತ್ತೋದ ನನ್ನ ಮಗ ನನ್ನ ದೇಹದ ಬಗ್ಗೆ ಮಾತನಾಡುತ್ತಾನೆ. ಚಪ್ಪಲಿ ತೆಗೆದುಕೊಂಡು ಅವನ ಮುಖಕ್ಕೆ ಯಾರಾದರೂ ಹೊಡೆದರೆ ನನಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ದಯವಿಟ್ಟು ಅವನ ಹೆಸರನ್ನು ಎಲ್ಲರೂ ನೋಟ್ ಮಾಡಿಕೊಂಡು ರಿಪೋರ್ಟ್ ಮಾಡಿ. ಕಿತ್ತೋದ ನನ್ನ ಮಕ್ಕಳಿಗೆ ಅಪ್ಪ, ಅಮ್ಮ, ಅಕ್ಕ, ತಂಗಿ ಯಾರೂ ಇರುವುದಿಲ್ಲ. ಇಲ್ಲಿ ಬಂದು ಯಾರೋ ಲೈವ್ ಅಥವಾ ಫೋಟೋಗೆ ಕೆಟ್ಟದಾಗಿ ಅವರ ದೇಹದ ಬಗ್ಗೆ ಕಮೆಂಟ್ ಮಾಡಿದರೆ ತಮ್ಮ ಜನ್ಮ ಸಾರ್ಥಕ ಅಂತಾ ಅಂದುಕೊಂಡಿದ್ದಾರೆ. ನಿನ್ನಂತವರಿಗೆ ಬದುಕುವ ಯೋಗ್ಯತೆಯೇ ಇಲ್ಲ' ಎಂದು ತನಿಷಾ ಕುಪ್ಪಂಡ ಕಿಡಿಕಾರಿದ್ದಾರೆ.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ತನಿಷಾ ಕುಪ್ಪಂಡ ಆತ್ಮೀಯ ಸ್ನೇಹಿತರಾಗಿದ್ದ ವರ್ತೂರು ಸಂತೋಷ್ ಅವರ ಬಗ್ಗೆ ಕೂಡ ಕೆಲವರು ಪ್ರಶ್ನೆಗಳನ್ನು ಕೇಳಿದ್ದು ತನಿಷಾ ಉತ್ತರ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ಅವರು ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಬನ್ನಿ ವರ್ತೂರಿಗೆ ಹೋಗೋಣ. ಹೋಗಿ ಅವರನ್ನು ಯಾಕೆ ಕಾಣಿಸುತ್ತಿಲ್ಲ ಅಂತಾ ಕೇಳಿ, ಅವರನ್ನು ಮಾತನಾಡಿಸಿಕೊಂಡು ಬರೋಣ' ಎಂದಿದ್ದಾರೆ.

ಇನ್ನು ಮದುವೆ ಯಾವಾಗ? ಹುಡುಗ ಯಾರು ವರ್ತೂರು ಸಂತೋಷ್ ಅವರೇನಾ? ಎಂದು ಕೇಳಿದ್ದಕ್ಕೆ ಉತ್ತರಿಸಿದ ತನಿಷಾ, 'ಹುಡುಗ ವರ್ತೂರು ಸಂತೋಷ್ ಅಂತಾ ನಾನು ಹೇಳಿದ್ದೀನಾ? ಇಲ್ಲಾ ಅವರು ಹೇಳಿದ್ದಾರಾ? ಮನಸ್ಸಿಗೆ ಬಂದಂತೆ ಕಮೆಂಟ್ ಮಾಡಬೇಡಿ. ಮದುವೆ ಯಾವಾಗ ಅಂತಾ ನಾನೇ ಹೇಳುತ್ತೇನೆ ನೀವು ಇಷ್ಟೆಲ್ಲಾ ಸರ್ಕಸ್ ಮಾಡಬೇಡಿ. ನಾನು ಒಂದು ಅಂಗಡಿಗೆ ಹೋದರೆ ಗೊತ್ತಾಗುತ್ತದೆ ಮದುವೆಯಾದರೆ ಗೊತ್ತಾಗುವುದಿಲ್ಲವೇ' ಎಂದು ಹೇಳಿದ್ದಾರೆ.












Click it and Unblock the Notifications