Yogi Babu: ಅಬ್ಬಾ... ದಿನಕ್ಕೆ 12 ಲಕ್ಷ ಸಂಭಾವನೆ ಪಡೆಯುತ್ತಾರೆ ಗೊತ್ತಾ ಈ ಹಾಸ್ಯ ನಟ?
ತಮಿಳು ಸಿನಿಮಾಗಳಲ್ಲಿ ಹಾಸ್ಯನಟರಿಗೆ ಮಾನ್ಯತೆ ಇರುವುದು ಗೊತ್ತೆ ಇದೆ. ನಟ ವಡಿವೇಲು ಇಲ್ಲದ ತಮಿಳು ಸಿನಿಮಾಗಳೇ ಇಲ್ಲ ಎನ್ನುವ ಕಾಲವೊಂದಿತ್ತು. ಈಗ ವಡಿವೇಲುಗೆ ಸವಾಲು ಹಾಕುವಂತೆ ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುತ್ತಿರುವುದು ನಟ ಯೋಗಿ ಬಾಬು. ಹಾಸ್ಯ ನಟರಾಗಿ, ನಾಯಕ ನಟರಾಗಿ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.
ಈ ಸಮಯದಲ್ಲಿ ಅವರ ಸಂಭಾವನೆ ಕೂಡ ಹೆಚ್ಚಾಗಿದ್ದು, ಅದೇ ದೊಡ್ಡ ಚರ್ಚೆಯಾಗುತ್ತಿದೆ. ಮೆರ್ಸಲ್, ಜೈಲರ್, ಪರಿಯೇರುಂ ಪೆರುಮಾಳ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ನಟ ಯೋಗಿ ಬಾಬು ವಿಶಿಷ್ಟ ಹಾಸ್ಯನಟರಲ್ಲಿ ಒಬ್ಬರು. ಅವರ ಸಂಭಾವನೆ ವಿಚಾರ ಹೆಚ್ಚಾಗಿ ಚರ್ಚೆಯಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಅದು ದಿನಕ್ಕೆ ಲಕ್ಷ ಲಕ್ಷಕ್ಕೆ ಏರಿಕೆಯಾಗಿದೆ.

ದಿನಕ್ಕೆ 12 ಲಕ್ಷ ರೂ. ಪಡೆಯುತ್ತಾರಾ ಯೋಗಿ ಬಾಬು!
ಸದ್ಯ ನಾಯಕರ ನಟನಾಗಿಯೂ ಕೂಡ ಕೆಲಸ ಮಾಡುತ್ತಿರುವ ಸುಪ್ರಸಿದ್ಧ ನಟನಾ ವೃತ್ತಿಜೀವನದ ಬಗ್ಗೆ, ಅವರು ಪಡೆಯುವ ಸಂಭಾವನೆ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ವರದಿಗಳ ಪ್ರಕಾರ, ಯೋಗಿ ಬಾಬು ದಿನಕ್ಕೆ 12 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಈ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಯೋಗಿ ಬಾಬು ಅವರ ಸಂಭಾವನೆ ಬಗ್ಗೆ ಈ ಹಿಂದೆಯೂ ಅನೇಕ ವರದಿಗಳು ಬಂದಿದ್ದವು. ಅವರು ದಿನಕ್ಕೆ 10 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ತಮಿಳು ಹಾಸ್ಯನಟ, ಮಾಧ್ಯಮ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ನಿರಾಕರಿಸಿದ್ದಾರೆ. ನಾನು ಯಾರಿಂದಲೂ ದಿನಕ್ಕೆ 10-15 ಲಕ್ಷ ರೂ ಪಡೆದಿಲ್ಲ. ನಾನು 2,000-ರೂ. 3,000 ಸಂಭಾವನೆಯಲ್ಲಿ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದ್ದೆ ಎಂದು ಹೇಳಿದ್ದರು.
ಚೊಚ್ಚಲ ನಿರ್ದೇಶಕರು ಮತ್ತು ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆಗಳು ನನಗೆ ಗೊತ್ತು. ಇನ್ನೊಂದು ದಿನವೂ ಸಹ, ನಿರ್ಮಾನಪಕರೊಬ್ಬರು ತಮ್ಮ ಹಣಕಾಸಿನ ಸಮಸ್ಯೆಗಳ ಬಗ್ಗೆ ಹೇಳಿದಾಗ, ನಾನು ಆರಂಭದಲ್ಲಿ ಕೇಳಿದ್ದ ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದೇನೆ ಎಂದು ತಮ್ಮ ಬದ್ಧತೆ ಬಗ್ಗೆ ಮಬಿಚ್ಚಿ ಮಾತನಾಡಿದ್ದರು.

ಯೋಗಿ ಬಾಬು ಮುಂದಿನ ಸಿನಿಮಾಗಳು
ಮಂಡೇಲಾ, ಲಕ್ಕಿ ಮ್ಯಾನ್, ಯುಎ, ಪೇಯಿ ಮಾಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿರುವ 38 ವರ್ಷದ ನಟ ಯೋಗಿ ಬಾಬು ತಮ್ಮ ಬುಟ್ಟಿಯಲ್ಲಿ ಹಲವು ಪ್ರಸಿದ್ಧ ಚಲನಚಿತ್ರಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಹರಾ, ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್, ನಾನ್ ವಯಲೆನ್ಸ್ ಮತ್ತು ಕಂಗುವ ಕೂಡ ಸೇರಿವೆ.
ಅವರು ಈಗಾಗಲೇ ತಮಿಳು ಚಿತ್ರರಂಗದ ಬಹುತೇಕ ಎಲ್ಲಾ ಟಾಪ್ ಹೀರೋಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರಲ್ಲಿ ರಜನಿಕಾಂತ್, ದಳಪತಿ ವಿಜಯ್‌ನಿಂದ ಹಿಡಿದು ಸೂರ್ಯ, ಶಿವಕಾರ್ತಿಕೇಯನ್, ವಿಜಯ್ ಸೇತುಪತಿ, ಜಿವಿ ಪ್ರಕಾಶ್ ಮತ್ತು ಅಜಿತ್ ಕುಮಾರ್ ಕೂಡ ಸೇರಿದ್ದಾರೆ.
ಸಾಕಷ್ಟು ಟ್ರೋಲ್‌ಗೆ ಒಳಗಾಗುವ ಯೋಗಿ ಬಾಬು
ಹಲವಾರು ಚಲನಚಿತ್ರಗಳಲ್ಲಿ ಮತ್ತು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದರೂ ಸಹ, ಯೋಗಿ ಬಾಬು ಅವರ ದೇಹ ಮತ್ತು ಸೌಂದರ್ಯಕ್ಕಾಗಿ ಟ್ರೋಲ್‌ಗೆ ಒಳಗಾಗುತ್ತಾರೆ. ಇದು ಅವರ ಅಭಿಮಾನಿಗಳನ್ನು ಹರ್ಟ್ ಮಾಡುತ್ತದೆ. ಆದರೆ ನಟ ಇದು ಯಾವುದನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಟ್ರೋಲ್ ಬಗ್ಗೆ ಮಾತನಾಡಿದ್ದು, ಇದೆಲ್ಲಾ ಸಾಮಾನ್ಯ ಎಂದು ಹಳಿದ್ದಾರೆ. ಹಾಸ್ಯಕ್ಕೆ ಬಾಡಿ ಲಾಂಗ್ವೇಜ್ ಪ್ರಮುಖ ಅಂಶವಾಗಿದ್ದು, ಅದನ್ನು ಆ ರೀತಿಯಲ್ಲಿ ಬಳಸಲು ಸಂತೋಷವಾಗುತ್ತದೆ ಎಂದಿದ್ದಾರೆ. ಯೋಗಿ ಬಾಬು ಕೊನೆಯದಾಗಿ ವಿಪಿನ್ ದಾಸ್ ನಿರ್ದೇಶನದ ಗುರುವಾಯೂರ್ ಅಂಬಲನಡಾಯಿಲ್ ಚಿತ್ರದಲ್ಲಿ ನಟಿಸಿದ್ದರು.












Click it and Unblock the Notifications