ಅಪ್ಪನ ದುಡ್ಡಲ್ಲಿ ಶೋಕಿ ಮಾಡ್ತಾರಾ ಗಿಚ್‌ ಗಿಲಿಗಿಲಿ ಪ್ರಶಾಂತ್‌: ಕೊಟ್ಟ ಉತ್ತರವೇನು?

ಸಾಮಾಜಿಕ ಜಾಲತಾಣದಲ್ಲಿ ಟ್ಯಾಲೆಂಟೆಡ್‌ ಕಲಾವಿದ ಆಗಿ ಸಖತ್‌ ವೈರಲ್‌ ಆಗಿದ್ದ ಪ್ರಶಾಂತ್‌ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್‌ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಸದ್ಯ ಎಲ್ಲರಿಗೂ ಚಿರಪರಿಚಿತ ಆಗಿರುವ ಪ್ರಶಾಂತ್‌ ತಮ್ಮ ಕೆಲವು ಖುಷಿಯ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋಕಿ ಎಂದು ಕಮೆಂಟ್ ಮಾಡುತ್ತಾರೆ. ಅಂತವರಿಗೆ ಇಂದು ಪ್ರಶಾಂತ್‌ ನೇರವಾಗಿ ಉತ್ತರ ಕೊಟ್ಟಿದ್ದಾರೆ.

ಬಾಸ್‌ ವಾಲಾ ಯೂಟ್ಯೂಬ್‌ ಚಾನೆಲ್‌ ಜೊತೆಗೆ ಮಾತನಾಡಿದ ಅವರು, 'ಕೋಟಿ ಕುಳ, ಶೋಕಿ ಮಾಡುತ್ತಾನೆ ಅಂತಾ ಸುಮಾರು ಜನ ಹೇಳುತ್ತಾರೆ. ಅದಕ್ಕೆ ನಾನು ಈಗಾಗಲೇ ಅನೇಕರಿಗೆ ಉತ್ತರ ಕೊಟ್ಟಿದ್ದೇನೆ. ನಮ್ಮ ಮನೆಯಲ್ಲಿ ದುಡಿಯುತ್ತರಲ್ಲಾ ಅದು ಮನೆಯವರ ದುಡ್ಡು. ನಾವೇನು ದುಡಿಯುತ್ತೇವೆ ಅದು ನಮ್ಮ ದುಡ್ಡು. ಈಗ ನಾನು ಮನೆಯವರ ದುಡ್ಡನ್ನು ಬಳಸಿಕೊಂಡರೆ ಅದನ್ನು ಶೋಕಿ ಅಂತಾ ಕರೆಯಿರಿ, ಒಪ್ಪಿಕೊಳ್ಳುತ್ತೇನೆ. ಆದರೆ ನಾನೇ ದುಡಿದ ದುಡ್ಡಿನಲ್ಲಿ ನಾನು ಒಳ್ಳೆಯ ಬಟ್ಟೆ ಹಾಕಿಕೊಂಡರೆ, ಕಾರು ತೆಗೆದುಕೊಂಡರೆ ಅದು ಹೇಗೆ ಶೋಕಿ ಆಗುತ್ತದೆ' ಎಂದು ಪ್ರಶಾಂತ್‌ ಪ್ರಶ್ನಿಸಿದ್ದಾರೆ.

Talented Kalavida Prashanth React About Negative Comments

'ನಾನು ಏನಾದರು ತೆಗೆದುಕೊಂಡರೆ ನನ್ನ ಕುಟುಂಬದವರ ಜೊತೆ ಹೇಗೆ ಹಂಚಿಕೊಳ್ಳುತ್ತೇನೆ, ಹಾಗೇ ನನ್ನ ಸೋಶಿಯಲ್‌ ಮೀಡಿಯಾ ಕುಟುಂಬದ ಜೊತೆ ಹಂಚಿಕೊಳ್ಳುತ್ತೇನೆ ಅಷ್ಟೇ. ಅದನ್ನು ಬಿಟ್ಟು ಏನೇ ತೆಗೆದುಕೊಂಡರು ಫೋಟೋದ ಜೊತೆಗೆ ಶೋಕಿ ಮಾಡುತ್ತಿದ್ದೇನೆ ಅಂತಾ ಎಲ್ಲಾದರೂ ಬರೆದುಕೊಂಡಿದ್ದೀನಾ. ನಾನು ಅವರನ್ನು ಕೂಡ ಫ್ಯಾಮಿಲಿ ಎಂದುಕೊಂಡು ಖುಷಿ ಹಂಚಿಕೊಳ್ಳುತ್ತೇನೆ. ಆದರೆ ಅದು ಶೋಕಿ ಅಂತಾ ಕೆಲವರು ಬಿಂಬಿಸಿದ್ದಾರೆ' ಎಂದರು.

'ನಮ್ಮ ಮನೆಯಲ್ಲಿ ಬಿಎಂಡಬ್ಲ್ಯೂ ಕಾರು ಇದೆ. ಅದು ನಮ್ಮ ಅಪ್ಪ ಅಮ್ಮನ ಚಿಕ್ಕ ವಯಸ್ಸಿನ ಆಸೆ. ನಮ್ಮ ಅಪ್ಪ ಮೊದಲು ಮನೆ ಮನೆಗೆ ಹೋಗಿ ಹಾಲು ಹಾಕುತ್ತಿದ್ದರು. ಬಳಿಕ ಟ್ರ್ಯಾಕ್ಟರ್‌ ತೆಗೆದುಕೊಂಡರು. ಅದಾದ ಮೇಲೆ ಲಾರಿ ತೆಗೆದುಕೊಂಡರು, ಸಿಮೆಂಟ್‌ ಅಂಗಡಿ ಮಾಡಿದರು. ನಮ್ಮ ಅಮ್ಮ ಅಪ್ಪನ ಬೆಂಬಲಕ್ಕೆ ನಿಂತಿದ್ದರು. ಅವರಿಬ್ಬರು ಒಬ್ಬರಿಗೊಬ್ಬರು ಬೆಂಬಲ ಕೊಡುತ್ತಿದ್ದರು. ಹೀಗಾಗಿ ಅವರಿಗೆ ಒಂದು ಕಾರು ತೆಗೆದುಕೊಳ್ಳಬೇಕು ಎಂದು ಮೊದಲಿನಿಂದಲೂ ಆಸೆ ಇತ್ತು. ಹೀಗಾಗಿ ಅವರು ಬಿಎಂಡಬ್ಲ್ಯೂ ತೆಗೆದುಕೊಂಡರು. ಅದು ಅವರ ಕನಸು'.

Talented Kalavida Prashanth React About Negative Comments

'ಅವರ ಕನಸಿನಲ್ಲಿ ನಾನು ಓಡಾಡಿದರೆ ಅದು ಶೋಕಿ. ಆದರೆ ಇಷ್ಟು ವರ್ಷ ಆಯ್ತು ಅವರು ಆ ಕಾರು ತೆಗೆದುಕೊಂಡು ಮಗನಾಗಿ ನಾನು ಎರಡೇ ಸಲ ಆ ಕಾರಿನಲ್ಲಿ ಕುಳಿತಿರುವುದು. ನಾನು ಯಾವತ್ತೂ ಆ ಕಾರನ್ನು ಓಡಿಸಿಲ್ಲ. ಈಗ ನಾನು ನನ್ನ ಕಾರು ತೆಗೆದುಕೊಂಡಿದ್ದೇನೆ. ನಾನು ದುಡಿದು ಕಾರು ತೆಗೆದುಕೊಂಡು ಓಡಾಡಿದರೆ ಅದು ಹೇಗೆ ಶೋಕಿ ಆಗುತ್ತದೆ. ಇದು ನನ್ನ ಆಸೆ, ನನ್ನ ದುಡ್ಡು, ನನ್ನ ಕಾರಿನಲ್ಲಿ ನಾನು ಓಡಾಡುತ್ತಿದ್ದೇನೆ. ನಾನು ನನ್ನ ಅಪ್ಪ ಅಮ್ಮನ ದುಡ್ಡಿನಲ್ಲಿ ಬದುಕುತ್ತಿದ್ದರೆ ಅದು ಶೋಕಿ ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಸ್ವಾಭಿಮಾನದಿಂದ ಕೆಲಸ ಮಾಡುವವನು' ಎಂದು ಹೇಳಿದ್ದಾರೆ.

Take a Poll

'ನನಗೂ ಕಮಿಟ್‌ಮೆಂಟ್ಸ್‌ ಇದೆ. ನನ್ನ ದುಡ್ಡಿನಲ್ಲಿಯೇ ಇಎಂಐಗಳನ್ನು ಕಟ್ಟುತ್ತೇನೆ. ಈಗಲೂ ನಮ್ಮ ಮನೆಯಲ್ಲಿ ಬ್ಯುಸಿನೆಸ್‌ ಮಾಡು ಅಂತಾ ಸಪೋರ್ಟ್ ಮಾಡುತ್ತಾರೆ. ಆದರೆ ನಾನು ಬೇಡ ನನಗೆ ಈ ಮನೋರಂಜನಾ ಕ್ಷೇತ್ರ ಇಷ್ಟ ಇದೆ ಅಂತಾ ಆಯ್ಕೆ ಮಾಡಿಕೊಂಡಿದ್ದೇನೆ. ಹೀಗಾಗಿ ಇಲ್ಲೇ ದುಡಿಯುತ್ತಿದ್ದೇನೆ. ನಾನು ಯಾರ ದುಡ್ಡಿನಲ್ಲೂ ಶೋಕಿ ಮಾಡುತ್ತಿಲ್ಲ, ಯಾರಿಗೆ ನೋವು ಕೊಟ್ಟು, ಯಾರ ತಲೆ ಒಡೆದು ನಾನು ಹಣ ಸಂಪಾದನೆ ಮಾಡಿಲ್ಲ' ಎಂದು ಶೋಕಿ ಅಂತಾ ಕಮೆಂಟ್‌ ಮಾಡುವವರಿಗೆ ಪ್ರಶಾಂತ್‌ ತಕ್ಕ ಉತ್ತರ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+