"ಮೊದಲು ನಿಮ್ಮ ಫ್ಯಾಮಿಲಿ ನೋಡ್ಕೊಳಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ"
ಬೆಂಗಳೂರು, ಆಗಸ್ಟ್ 15: ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ನಿನ್ನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಈಗಾಗಲೇ ಆರು ತಿಂಗಳ ಕಾಲ ದರ್ಶನ್ ಆಂಡ್ ಗ್ಯಾಂಗ್ ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಮತ್ತೆ ದರ್ಶನ್ ಜೈಲು ಸೇರಿದ್ದು, ಈ ಬಗ್ಗೆ ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಅವರು ದರ್ಶನ್ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಅವರು ಮಾತನಾಡಿ, ಮೊದಲು ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ ಫ್ಯಾಮಿಲಿ ಮೊದಲು ಅಂತ ಕಿವಿಮಾತು ಹೇಳಿದ್ದಾರೆ. ಕೆಲವೊಂದು ಸಮಯ ಸಂದರ್ಭ ಅವರು ತಪ್ಪು ಮಾಡಿರುವುದು ನಿಜ ಆಗಿದೆ ಅದು ಪ್ರೂಫ್ ಸಹ ಆಗಿದೆ. ಉಪ್ಪು ತಿಂದವರು ನೀರು ಕುಡಿಯಬೇಕು ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಸುಪ್ರೀಂ ಕೋರ್ಟ್ ನೀಡಿರುವ ಈ ಒಂದು ಐತಿಹಾಸಿಕ ತೀರ್ಪು ಇಡೀ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ಕಿದೆ. ಕಾನೂನಿನ ಮುಂದೆ ಎಲ್ಲಾ ಒಂದೇ ಅನ್ನೋದು ಪ್ರೂವ್ ಆಗಿದೆ ಎಂದು ಹೇಳಿದರು.

ಇನ್ನೂ ನಟಿ ರಮ್ಯಾ ಗೂ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಮಾಡಿದ್ದರು. ರಮ್ಯಾ ಅವರ ಧೈರ್ಯ ಮೆಚ್ಚಬೇಕು ಅವರ ಬಗ್ಗೆ ಹೆಮ್ಮೆ ಇದೆ. ಕಾನೂನನ್ನು ನಾವು ಯಾರು ಕೈಗೆ ತೆಗೆದುಕೊಳ್ಳಲಾಗುವುದಿಲ್ಲ ಕಾನೂನು ಏನು ಹೇಳುತ್ತೋ ಅದಕ್ಕೆ ನಾವು ತಲೆಬಾಗಲೇಬೇಕು ಇಲ್ಲ ಅಂದರೆ ನಮ್ಮ ಸಮಾಜಕ್ಕೆ ನಾವು ಏನು ಸಂದೇಶ ಕೊಟ್ಟ ಹಾಗೆ ಆಗುತ್ತದೆ? ನಮ್ಮ ಸಮಾಜದಲ್ಲಿ ಕಾನೂನಿನ ಬಗ್ಗೆ ಭಯನೇ ಹೋಗಿ ಬಿಡುತ್ತೆ ಎಂದು ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೇಸ್ ನಲ್ಲಿ ಸುಪ್ರೀಂನಿಂದ ಬಂದ ಆದೇಶ ಇಡೀ ಸಮಾಜಕ್ಕೆ ಒಳ್ಳೆ ಮೆಸೇಜ್ ಸಿಕ್ಕಿದೆ. ಯಾರೇ ಆದರೂ ಕಾನೂನಿನ ಮುಂದೆ ಸಮಾನರು ಎನ್ನುವುದು ಮತ್ತೆ ಸಾಬೀತಾಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಪವಿತ್ರಾಗೌಡಗೆ ಮೆಸೇಜ್ ಬಂತು ನಿಜ ಒಪ್ಪಿಕೊಳ್ಳೋಣ. ಆದರೆ ಕಾನೂನು ರೀತಿಯಲ್ಲಿ ನಟ ದರ್ಶನ್ ಆಗಲಿ ಪವಿತ್ರಾ ಗೌಡ ಕ್ರಮ ತೆಗೆದುಕೊಳ್ಳಬೇಕಿತ್ತು. ಅದಕ್ಕಂತಲೇ ಪೊಲೀಸ್ ಹಾಗೂ ಕಾನೂನಿತ್ತು. ಏಕಾಏಕಿ ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಪ್ರಿಯಾ ಹಾಸನ್ ಅವರು ತಿಳಿಸಿದ್ದಾರೆ.
ತಪ್ಪು ಮಾಡಿದವರು ಶಿಕ್ಷೆ ಅನುಭವಸಿಸಬೇಕು.. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. ತಪ್ಪು ಮಾಡಿದ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಶಿಕ್ಷೆ ಅನುಭವಿಸಲೇಬೇಕೆಂದು ಹೇಳಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ಭರವಸೆ ಸಿಕ್ಕಂತಾಗಿದೆ. ಆದರೆ ರೇಣುಕಾಸ್ವಾಮಿ ಮಾಡಿದ ತಪ್ಪನ್ನು ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ. ನಿಮ್ ಫ್ಯಾಮಿಲಿ ಇದೆ ಅದನ್ನ ಚೆನ್ನಾಗಿ ನೋಡಿಕೊಳ್ಳಿ. ಕೆಟ್ಟದಾಗಿ ಮೆಸೇಜ್ ಮಾಡಬೇಡಿ. ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ರಮ್ಯಾ ಅವರಿಗೆ ಕೆಟ್ಟದಾಗಿ ಮೇಸೇಜ್ ಮಾಡಿದ್ದು ತಪ್ಪು, ರಮ್ಯಾ ಅವರ ಡೇರಿಂಗ್ ಮೆಚ್ಚಬೇಕು ಎಂದು ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಅವರು ಹೇಳಿದ್ದಾರೆ.












Click it and Unblock the Notifications