‘ಗುಂಟೂರು ಖಾರ’ ಢಮಾರ್? ಪ್ರಿನ್ಸ್ ಮಹೇಶ್ ಬಾಬುಗೆ ಶಾಕ್?
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಟ ಪ್ರಿನ್ಸ್ ಮಹೇಶ್ ಬಾಬು ಅಂದ್ರೆ ಸಖತ್ ಕ್ರೇಜ್ ಇದೆ. ಈ ನಟನ ಸಿನಿಮಾಗೆ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಾರೆ. ಆದ್ರೆ ಈಗ ಯಾಕೋ ಸಾಲು ಸಾಲು ಸೋಲುಗಳು ಪ್ರಿನ್ಸ್ ಮಹೇಶ್ ಬಾಬು ಅವರ ಬೆನ್ನು ಹತ್ತಿವೆ. ಇಂತಹ ಮಾತುಗಳ ನಡುವೆ ಇತ್ತೀಚೆಗೆ ರಿಲೀಸ್ ಆಗಿದ್ದ ನಟ ಮಹೇಶ್ ಬಾಬ್ ಅವರ 'ಗುಂಟೂರು ಖಾರ' ಸಿನಿಮಾ ಸೋತು ಸುಣ್ಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 'ಗುಂಟೂರು ಖಾರ' ಅದ್ಧೂರಿಯಾಗಿ ಜಗತ್ತಿನಾದ್ಯಂತ ರಿಲೀಸ್ ಆಗಿತ್ತು. ಅದರಲ್ಲೂ ನಟ ಮಹೇಶ್ ಬಾಬು ಅವರ ಫ್ಯಾನ್ಸ್‌ಗೆ ಈ ಚಿತ್ರ ದೊಡ್ಡ ಉಡುಗೊರೆ ಆಗಲಿದೆ ಎಂಬ ಮಾತು ಕೂಡ ಕೇಳಿಬಂದಿದ್ದವು. ಆದ್ರೆ ಆಗಿದ್ದೆಲ್ಲಾ ಬೇರೆ ಮೊದಲ ದಿನ ಮೊದಲ ಶೋ ನೋಡಿದ ಅಭಿಮಾನಿಗಳೇ ಬೇಸರ & ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೆ ಅದು ಮುಂದುವರಿದಿದೆ. ಅದರಲ್ಲೂ 'ಗುಂಟೂರು ಖಾರ' ದಿನದಿಂದ ದಿನಕ್ಕೆ ತನ್ನ ಗಳಿಕೆಯಲ್ಲೂ ಹಿನ್ನಡೆ ಕಾಣುತ್ತಿದೆ ಎಂಬ ಸುದ್ದಿ ಓಡಾಡ್ತಿದೆ.

'ಗುಂಟೂರು ಖಾರ'ಗೆ ಭೀಕರ ಸೋಲು?
ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ಸಿನಿಮಾ ಎಂಬ ಕಾರಣಕ್ಕೆ 'ಗುಂಟೂರು ಖಾರಂ' ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಆಗಿದ್ದೆಲ್ಲಾ ಉಲ್ಟಾ ಯಾಕಂದ್ರೆ ಮಹೇಶ್ ಬಾಬುರ ಈ ಸಿನಿಮಾಗೆ ಸಿಕ್ಕಾಪಟ್ಟೆ ಬೇಸರದ ರಿವ್ಯೂ ಕೇಳಿಬಂದಿದ್ದು. ಅದರಲ್ಲೂ ಅಭಿಮಾನಿಗಳು, ಮಹೇಶ್ ಬಾಬುರ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ಸಿನಿಮಾ ಸೋತಿದೆ ಅಂತೆಲ್ಲಾ ನೇರವಾಗಿಯೇ ಅನಿಸಿಕೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಬಾಕ್ಸ್ ಆಫಿಸ್‌ನಲ್ಲಿ ಕೂಡ ಈ ಸಿನಿಮಾ ಹಿನ್ನಡೆ ಕಾಣ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಿನಿಮಾ ಬಜೆಟ್ 200 ಕೋಟಿ?
ಸುಮಾರು 200 ಕೋಟಿ ರೂಪಾಯಿಯ ವೆಚ್ಚದಲ್ಲಿ ಸಿದ್ಧವಾಗಿದ್ದ 'ಗುಂಟೂರು ಖಾರಂ' ಸಿನಿಮಾ, ಸುಲಭವಾಗಿ ತನ್ನ ಬಜೆಟ್ ವಸೂಲಿ ಮಾಡುವ ನಿರೀಕ್ಷೆ ಇತ್ತು. ಅದ್ರಲ್ಲೂ ಮೊದಲ ದಿನವೇ ಭಾರಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿತ್ತು. ಆದ್ರೆ ಬರು ಬರುತ್ತಾ ಈ ಸಿನಿಮಾ ಗಲ್ಲಾಪೆಟ್ಟಿಗೆಯ ಅಖಾಡದಲ್ಲಿ ಕೂಡ ಹಿನ್ನಡೆ ಅನುಭವಿಸಿದೆ ಎನ್ನುವಂತೆ ಮಾತುಗಳು ಕೇಳಿಬರುತ್ತಿವೆ. ಆದರೆ ಸಿನಿಮಾ ತಂಡ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಕುತೂಹಲ ಹೆಚ್ಚಾಗಿದೆ.

2024ರ ಹೊಸ ವರ್ಷಕ್ಕೆ ಶಾಕ್?
ತೆಲುಗು ಸಿನಿ ಇಂಡಸ್ಟ್ರಿಯಲ್ಲಿ 2024ರ ಹೊಸ ವರ್ಷದ ಆರಂಭಕ್ಕೇ ಆಘಾತ ಎದುರಾದಂತೆ ಕಾಣುತ್ತಿದೆ. ಸಾಲು ಸಾಲು ರಜೆ ಇರುವ ಕಾರಣ ಗುಂಟೂರು ಖಾರಂ ಸಿನಿಮಾ, ಕಂಬ್ಯಾಕ್ ಮಾಡುವ ನಿರೀಕ್ಷೆ ಕೂಡ ಇತ್ತು. ಆದರೆ ಈವರೆಗೂ ಅದು ನೆರವೇರಿದಂತೆ ಕಾಣುತ್ತಿಲ್ಲ. ಹೀಗಾಗಿ ಮಹೇಶ್ ಬಾಬು ಅವರ ಸಿನಿಮಾ ದಿನದಿಂದ ದಿನಕ್ಕೆ ಹಿನ್ನಡೆ ಕಾಣುತ್ತಿರುವ, ಗಲ್ಲಾಪೆಟ್ಟಿಗೆ ಕಲೆಕ್ಷನ್‌ನಲ್ಲಿ ಕೂಡ ಹಿಂದೆ ಉಳಿದಿರುವ ಆರೋಪ ಕೇಳಿಬಂದಿದೆ. ಹೀಗೆ ಬಹು ನಿರೀಕ್ಷಿತ ಸಿನಿಮಾಗೆ ಇಂತಹ ಹಿನ್ನಡೆ ಎದುರಾಗಿದ್ದು ಸಹಜವಾಗಿ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟುಮಾಡಿದೆ.
ಒಟ್ನಲ್ಲಿ ಮಹೇಶ್ ಬಾಬು ಅವರು ಸಿನಿಮಾ ಪ್ರೇಕ್ಷಕರಿಗೆ ಸಾಕಷ್ಟು ದೊಡ್ಡ ಹಿಟ್ ಚಿತ್ರ ನೀಡಿದ್ದವರು. ಆದರೆ ಸಂಕ್ರಾಂತಿ ಹೊತ್ತಲ್ಲಿ ಇಂತಹ ಬೆಳವಣಿಗೆ ನಡೆದಿದೆ. ಹೀಗಿದ್ದಾಗ ಮಹೇಶ್ ಬಾಬು ಅವರ ಫ್ಯಾನ್ಸ್ ಮಾತ್ರ ತಮ್ಮ ನೆಚ್ಚಿನ ನಟನ ಪ್ರಯತ್ನಕ್ಕೆ ಹೊಗಳಿಕೆ & ಮೆಚ್ಚುಗೆ ನೀಡುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಪ್ರಿನ್ಸ್ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದ್ಕಡೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫ್ಯಾನ್ಸ್ ತಿಕ್ಕಾಟ ಬಲು ಜೋರಾಗುತ್ತಿದೆ. ಆದರೆ ಸಿನಿಮಾವನ್ನ ಸಿನಿಮಾ ರೀತಿ ನೋಡಿ ಅಂತಾ ನೆಟ್ಟಿಗರು, ಕಿತ್ತಾಡುತ್ತಿರುವ ಕೆಲವರಿಗೆ ಬುದ್ಧಿ ಮಾತು ಹೇಳುತ್ತಿದ್ದಾರೆ.











Click it and Unblock the Notifications