ರಮ್ಯಾ ಬಳಿಕ ಸೋನು ಶೆಟ್ಟಿಗೂ ಅಶ್ಲೀಲ ಕಾಮೆಂಟ್ಸ್, 'ದರ್ಶನ್ ರೌಡಿ ಆಗಬೇಕಿತ್ತು' ಎಂದಿದ್ದಕ್ಕೆ ಫ್ಯಾನ್ಸ್ ಮಾಡಿದ್ದೇನು?
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಮಾಡಿದ್ದ ದರ್ಶನ್ ಅಭಿಮಾನಿಗಳನ್ನ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಹಲವರು ಪೊಲೀಸರು ಅರೆಸ್ಟ್ ಮಾಡಿ ಬೆಂಡೆತ್ತಿದ್ದಾರೆ. ಇವರೆಲ್ಲರೂ ದರ್ಶನ್ ವಿರುದ್ಧ ರಮ್ಯಾ ಮಾತನಾಡಿದ್ದಕ್ಕೆ ಈ ಕೃತ್ಯ ಎಸಗಿರುವ ಆರೋಪವಿದ್ದು, ಎಲ್ಲರೂ ದರ್ಶನ್ ಫ್ಯಾನ್ಸ್ ಹೆಸರಿನಲ್ಲೇ ಕೆಟ್ಟ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ರಮ್ಯಾ ಬೆನ್ನಲ್ಲೇ ಸೋನು ಶೆಟ್ಟಿಗೆ ಕೂಡ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳಿಸಿರುವ ಘಟನೆಗೆ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಸೋನು ಶೆಟ್ಟಿಗೆ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋನು ಶೆಟ್ಟಿಗೆ ಡಿ ಬಾಸ್ ಫ್ಯಾನ್ಸ್ ಅಶ್ಲೀಲ ಪದಗಳಿಂದ ಬೈದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ಸೋನು ಶೆಟ್ಟಿ ದರ್ಶನ್ ಅವರ ಬಗ್ಗೆ ಮಾತನಾಡಿದ್ದರು. ಅದರಲ್ಲಿ 'ಡಿಬಾಸ್ ಡಿಬಾಸ್ ಅಂತಾರಲ್ಲ, ಅವರನ್ನ ನೋಡಿದ್ರೆ ನನಗೆ ಇಷ್ಟ ಆಗೋದೇ ಇಲ್ಲ. ನನಗೆ ಡಿಬಾಸ್ ದರ್ಶನ್ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗೋದಿಲ್ಲ. ದರ್ಶನ್ ರೌಡಿ ಆಗಬೇಕಿತ್ತು. ಆದರೆ ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದೇ ದೊಡ್ಡ ಪ್ರಾಬ್ಲಂ, ಅವರ ಅಭಿಮಾನಿಗಳು ಕೂಡ ಹಾಗೇ ಇದ್ದಾರೆ. ದರ್ಶನ್ ಫ್ಯಾನ್ಸ್‌ಗೆ ಬುದ್ಧಿ ಕಲಿಸಬೇಕು' ಎಂದಿದ್ದರು.

ಈ ವಿಡಿಯೋ ವೈರಲ್ ಆದ ನಂತರ ದರ್ಶನ್ ಅವರ ಅಭಿಮಾನಿಗಳು ಸೋನು ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ಧಗಳನ್ನು ಬಳಸಿ ಮೆಸೇಜ್ ಹಾಗೂ ಕಾಮೆಂಟ್ ಮಾಡಿದ್ದರು. 'ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡ್ತೀಯಾ' ಎಂದು ಹಲವರು ಸೋನುಗೆ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ. ಎಲ್ಲರೂ ದರ್ಶನ್ ಅವರ ಅಭಿಮಾನಿಗಳಾಗಿದ್ದು, ಬೆದರಿಕೆ ಸಂದೇಶ ಕಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋನು ಅವರ ವಿಡಿಯೋ ವೈರಲ್ ಆದ ನಂತರ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. 'ದರ್ಶನ್ ಹೆಸರನ್ನ ಬಳಸಿಕೊಂಡು ಪಬ್ಲಿಸಿಟಿ ತಗೋತಿದ್ದೀರಾ?' ಎಂದು ಸೋನುಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಅಶ್ಲೀಲ ಮೆಸೇಜ್, ಬೆದರಿಕೆ ಹಾಕಿದ ನಂತರ ಸೋನು ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದರು. 'ನನಗೆ ದರ್ಶನ್ ಹೆಸರನ್ನು ಬಳಸಿಕೊಂಡು ಪ್ರಚಾರ ತೆಗೆದುಕೊಳ್ಳುವ ಅಗತ್ಯವೇನಿಲ್ಲ' ಎಂದು ತಿರುಗೇಟು ನೀಡಿದ್ದರು. ಬಳಿಕ ಸೋನು ಶೆಟ್ಟಿ ಅವರು ಮತ್ತೊಂದು ವಿಡಿಯೋ ಹಂಚಿಕೊಂಡು, ದರ್ಶನ್ ಅಭಿಮಾನಿಗಳು ಮಾಡಿದ ಅಶ್ಲೀಲ ಕಾಮೆಂಟ್ಗಳನ್ನು ತೋರಿಸಿದ್ದಾರೆ. ಜೊತೆಗೆ ಅದಕ್ಕೆ ಕಾಮೆಂಟ್ ಬಾಕ್ಸ್ ಕೂಡ ಆಫ್ ಮಾಡಿದ್ದಾರೆ.

'ರೆಡಿ ಇರಿ ಎಂದು ಸೋನು ವಾರ್ನಿಂಗ್'
'ನನ್ನ ಬಗ್ಗೆ ಕಾಮೆಂಟ್ ಹಾಕೋಕೆ ಹತ್ತು ಸಾರಿ ಸ್ನಾನ ಮಾಡಿ ಬರಬೇಕು. ಆ ಯೋಗ್ಯತೆ ನಿಮಗಿಲ್ಲ, ನಂಗೆ ನೋವು ಕೊಟ್ಟವರು ಬಡ್ಡಿ ಸಮೇತ ಅನುಭವಿಸೋಕೆ ರೆಡಿ ಇರಿ..' ಎಂದು ಕೆಟ್ಟ ಕಾಮೆಂಟ್ ಮಾಡಿದವರಿಗೆ ಸೋನು ಶೆಟ್ಟಿ ಮತ್ತೊಂದು ವಿಡಿಯೋದಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ರಮ್ಯಾ ಅವರು ಕೂಡ ಫ್ಯಾನ್ಸ್ ಮಾಡಿದ್ದ ಕೆಟ್ಟ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನ ಹಂಚಿಕೊಂಡಿದ್ದರು. ಇದೀಗ ಸೋನು ಕೂಡ ರಮ್ಯಾ ಅವರಂತೆ ಕಾಮೆಂಟ್ ಮಾಡಿದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.












Click it and Unblock the Notifications