Tharun Sudhir: ಅರಿಶಿಣ ಶಾಸ್ತ್ರದಲ್ಲಿ ಮಿಂಚಿದ ‘ಕಾಟೇರ’ ಡೈರೆಕ್ಟರ್ ಹಾಗೂ ‘ರಾಬರ್ಟ್’ ಸುಂದರಿ ಸೋನಾಲ್!

ಕನ್ನಡ ಸಿನಿಮಾ ರಂಗದಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ. ನವ ಜೋಡಿಗಳಿಗೆ ಶುಭ ಹಾರೈಸಲು ಕನ್ನಡ ಸಿನಿಮಾ ರಂಗದ ಗಣ್ಯರ ದಂಡೇ ಆಗಮಿಸಿ ವಿಶ್ ಮಾಡಿದೆ. ಈ ಮೂಲಕ 'ಕಾಟೇರ' ಡೈರೆಕ್ಟರ್ ತರುಣ್ ಸುಧೀರ್ & 'ರಾಬರ್ಟ್' ಸುಂದರಿ ಸೋನಾಲ್ ಮೊಂಟೇರಿಯೋ ಮದುವೆಗೆ ಅದ್ಧೂರಿ ಆರಂಭವೂ ಸಿಕ್ಕಿದೆ. ಅರಿಶಿಣ ಶಾಸ್ತ್ರದಲ್ಲಿ ಇಬ್ಬರೂ ಈಗ ಮಿರಮಿರನೆ ಮಿಂಚಿದ್ದು, ಸೋಷಿಯಲ್ ಮೀಡಿಯಾ ತುಂಬಾ ಇದೇ ಸುದ್ದಿ ಹವಾ ಎಬ್ಬಿಸಿದೆ.

ತರುಣ್ ಸುಧೀರ್ ಅವರು ಕನ್ನಡದ ಲೆಜೆಂಡ್ ನಟ ಸುಧೀರ್ ಅವರ ಮಗ. ಕನ್ನಡ ಸಿನಿಮಾಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದರು ಸುಧೀರ್. ಇಂತಹ ಸುಧೀರ್ ಅವರ ಪುತ್ರ ತರುಣ್ ಸುಧೀರ್ ಪ್ಯಾನ್ ಇಂಡಿಯಾ ಲೆವೆಲ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ. ತರುಣ್ ಸುಧೀರ್ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದರೂ ಅವರಿಗೆ ಮದುವೆ ಆಗಿಲ್ಲ ಎಂಬ ಕೊರಗು, ತರುಣ್ ಸುಧೀರ್ ಕುಟುಂಬಕ್ಕೆ ಕಾಡುತ್ತಿತ್ತು. ಅದೆಲ್ಲವನ್ನ ಮೀರಿ, ಇದೀಗ ಸೋನಾಲ್ ಅವರು ತರುಣ್ ಸುಧೀರ್ ಬಾಳಿಗೆ ಎಂಟ್ರಿ ಕೊಟ್ಟಿದ್ದಾರೆ!

Sonal Monteiro And Tharun Sudhir Marriage Haldi Program

ತಂಗಿ ಮದುವೆಗೆ ಬರ್ತಾರಾ ದರ್ಶನ್?

ತರುಣ್ ಸುಧೀರ್ ಮತ್ತು ಸೋನಾಲ್ ಅವರ ಮದುವೆ ಆರತಕ್ಷತೆಗೆ ಮೊದಲು ನಡೆದ ಹಳದಿ ಶಾಸ್ತ್ರ ಅಥವಾ ಅರಶಿಣ ಶಾಸ್ತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಕೂಡ ಸೆಳೆದಿದೆ. ಅದರಲ್ಲೂ ಈಗಾಗಲೇ ಸೋನಾಲ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ದೇಶಾದ್ಯಂತ ಹೆಸರು ಗಳಿಸಿದ್ದಾರೆ. ಹಾಗೇ ತರುಣ್ ಸುಧೀರ್ ಕೂಡ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳನ್ನ ನೀಡಿ ಭರವಸೆ ಮೂಡಿಸಿದ್ದಾರೆ.

ಇಂತಿಪ್ಪ ಜೋಡಿಗೆ ಕನ್ನಡ ಸಿನಿ ರಂಗದಲ್ಲಿ ಇರುವ ದೊಡ್ಡ ದೊಡ್ಡ ಸ್ಟಾರ್ ನಟರು ಬಂದು ವಿಶ್ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೊಂದು ಜೋಡಿಗೆ ಈಗ, ಕಂಕಣ ಭಾಗ್ಯ ಕೂಡಿಬಂದಿದೆ. ಹಾಗಾದರೆ ಮದುವೆಗೆ ಇದೀಗ ನಟ ದರ್ಶನ್ ತೂಗುದೀಪ್ ಅವರು ಕೂಡ ಬರ್ತಾರಾ? ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ತೂಗುದೀಪ್ ಅವರು ತಂಗಿ ಮದುವೆ ಕಾರ್ಯಕ್ರಮಕ್ಕೆ ಬರಲು ಸಿದ್ಧತೆ ನಡೆಸಿದ್ದಾರಾ? ಮುಂದೆ ಓದಿ.

ಸರ್ಪ್ರೈಸ್ ಕೊಡ್ತಾರಾ ದರ್ಶನ್ ತೂಗುದೀಪ್?

ನಿನ್ನೆ ನಡೆದ ಅರಶಿಣ ಶಾಸ್ತ್ರದಲ್ಲಿ ನೆನಪಿರಲಿ ಪ್ರೇಮ್ ಸೇರಿದಂತೆ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟರೇ ಭಾಗವಹಿಸಿದ್ದರು. ಈ ಮೂಲಕ ಸುಧೀರ್ ಅವರ ಮಗನ ಮದುವೆ ಕಾರ್ಯಕ್ರಮದಲ್ಲಿ ಶುಭಾಶಯ ಹೇಳಿದ್ದಾರೆ. ಮತ್ತೊಂದು ಕಡೆ ನಟ ದರ್ಶನ್ ಅವರು ಕೂಡ ಈ ಮದುವೆ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಇದರ ಬಗ್ಗೆ ಒಂದು ಸ್ಪಷ್ಟನೆ ಸಿಗಲಿದೆ. ಸೋನಾಲ್ ಅವರನ್ನು ನಟ ದರ್ಶನ್ ಅವರು ತಂಗಿ ಅಂತಾ ಕರೆಯುತ್ತಿದ್ದರು. ಹೀಗಾಗಿ ತಂಗಿಯ ಮದುವೆಗೆ ಅಣ್ಣ ದರ್ಶನ್ ಬಂದೇ ಬರುತ್ತಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+