Kipi Keerthi: ಭೂತ ಎಂದವರಿಗೆ ಬ್ಯೂಟಿ ಬಗ್ಗೆ ತಿಳಿಸಿದ ವೈರಲ್‌ ಹುಡುಗಿ

ಸೋಷಿಯಲ್‌ ಮೀಡಿಯಾ ಸ್ಟಾರ್ಸ್‌ಗಳ ರೀಲ್ಸ್‌ ಸಾಕಷ್ಟು ವೈರಲ್‌ ಆಗುತ್ತಲೇ ಇರುತ್ತವೆ. ಸೋಷಿಯಲ್‌ ಮೀಡಿಯಾ ಸ್ಟಾರ್ಸ್‌ಗಳಿಗೆ ತಮ್ಮದೇ ಆದ ಫ್ಯಾನ್ಸ್‌ ಫಾಲೋವರ್ಸ್‌ ಇದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಯ್ ಜನರೇ.... ಬನ್ನಿ ಬನ್ನಿ ಜನರೇ ಅಂತ ಫೇಮಸ್ ಆಗಿರುವ ಕಿಪ್ಪಿ ಕೀರ್ತಿ ಅವರ ಹಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಕಿಪ್ಪಿ ಕೀರ್ತಿ ಅವರು ಟ್ರೋಲರ್ಸ್‌ಗಳಿಗೆ ಬುದ್ದಿ ಮಾತುಗಳನ್ನ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಕಿಪ್ಪಿ ಕೀರ್ತಿ ಮಾತನಾಡಿ, ನನಗೂ ಫ್ಯಾಮಿಲಿ ಇದೆ. ಫ್ರೆಂಡ್ಸ್‌ ಇದಾರೆ. ಕೆಲವು ಜನರು ನನಗೆ ಪ್ರೀತಿಯನ್ನ ತೋರಿಸುತ್ತಾರೆ. ಅವರ ಪ್ರೀತಿ, ಕಾಳಜಿ ನೋಡಿ ನನಗೂ ಖುಷಿಯಾಗುತ್ತದೆ. ಕೆಲವರು ನನ್ನನ್ನು ಕೀಳಾಗಿ ಕಂಡಿದ್ದಾರೆ. ನನ್ನನ್ನು ಭೂತ ತರ ಇದಿಯಾ ಅಂತ ನನಗೆ ಹೇಳಿದ್ದಾರೆ. ಬ್ಯೂಟಿ ಮುಖ್ಯವಲ್ಲ. ನಮ್ಮ ಒಳ್ಳೆಯ ತನ ಮುಖ್ಯವಾಗಿರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮುಖ್ಯವಾಗಿರುತ್ತದೆ. ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತವೆ.

Social media stars Kippi Keerthi spoke about beauty

ನಾವು ಮಾಡುವ ಒಳ್ಳೆಯ ಕೆಲಸಗಳು, ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತದೆ. ಬ್ಯೂಟಿ ಕೊನೆಯವರೆಗೂ ಬರಲ್ಲ. ನಾವು ಸತ್ತಾಗ ಏನು ತೆಗೆದುಕೊಂಡು ಹೋಗಲ್ಲ. ನಮ್ಮ ಹಣ ಆಸ್ತಿ ಏನು ತೆಗೆದುಕೊಂಡು ಹೋಗಲ್ಲ. ಒಳ್ಳೆಯ ತನ ಕೊನೆಯವರೆಗೂ ಇರುತ್ತದೆ. ಪುನೀತ್‌ ರಾಜ್‌ ಕುಮಾರ್‌ ಅವರು ದೇವರಾಗಲು ಕಾರಣ ಅವರ ಗುಣಗಳಿಂದ. ನಮ್ಮ ಅಪ್ಪು ಸರ್‌ ಮಾಡಿರುವ ಕೆಲಸ ಹಾಗೂ ಆದರ್ಶನಗಳನ್ನ ನಾನು ಫಾಲೋ ಮಾಡುತ್ತೇನೆ. ಪುನೀತ್‌ ರಾಜ್‌ ಕುಮಾರ್‌ ಅವರ ಆದರ್ಶವನ್ನ ನಾನು ಫಾಲೋ ಮಾಡಿಕೊಂಡು ಹೋಗುತ್ತಿದ್ದೇನೆ.

ಮನುಷ್ಯನ್ನ ದೇವರು ಸೃಷ್ಟಿ ಮಾಡಿರುವುದು, ದೇವರನ್ನ ಮನುಷ್ಯ ಸೃಷ್ಟಿ ಮಾಡಿಲ್ಲ. ಯಾರ ಬಗ್ಗೆಯೂ ಕೀಳಾಗಿ ಮಾತನಾಡಬಾರದು. ಯಾರ ಜೀವನ ಹೇಗೆ ಅಂತ ಹೇಳೋಕೆ ಆಗಲ್ಲ. ತಮ್ಮ ತಮ್ಮ ಜೀವನವನ್ನ ನೋಡಿಕೊಳ್ಳಬೇಕು ಎಂದು ಟ್ರೋಲ್‌ ಮಾಡುವವರಿಗೆ ಕಿಪ್ಪಿ ಕೀರ್ತಿ ಕಿವಿ ಮಾತು ಹೇಳಿದ್ದಾರೆ. ನಾವು ಯಾವತ್ತೂ ಬೇರೆಯವರನ್ನ ಮೆಚ್ಚಿಸಲು ಇರಬಾರದು. ನಮಗೆ ನಾವು ಚನ್ನಾಗ್‌ ಇರ್ಬೇಕು. ಕಲರ್‌ ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯ. ನಮ್ಮ ಕೈಯಲ್ಲಿ ಏನು ಆಗಲ್ಲ ಅಂತ ಭಯ ಇರ್ಬಾರ್ದು. ನಿಮಗಾಗಿ ನೀವು ಬದುಕಿ. ಬೇರೆಯವರಿಗಾಗಿ ನೀವು ಬದುಕಬೇಡಿ. ನಿಮ್ಮ ಜೀವನವನ್ನ ನೀವೇ ರೂಪಿಸಿಕೊಳ್ಳಿ ಎಂದು ಕಿಪ್ಪಿ ಕೀರ್ತಿ ಕಿವಿ ಮಾತು ಹೇಳಿದ್ದಾರೆ.

ಇನ್ನೂ ಬಿಗ್‌ ಬಾಸ್‌ ನಿಂದ ಆಫರ್‌ ಬಂದ್ರೆ ಹೋಗುತ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿಪ್ಪಿ ಕೀರ್ತಿ, ಬಿಗ್‌ ಬಾಸ್‌ನಿಂದ ಆಫರ್‌ ಬಂದ್ರೆ ನಾನು ಹೋಗುವುದಿಲ್ಲ. ನನಗೆ ಅವರು ಕೊಟ್ಟ ಟಾಸ್ಕ್‌ ಗಳನ್ನ ಆಡಲು ಆಗುವುದಿಲ್ಲ. ಹಾಗೂ ನನ್ನ ತಾಯಿಯನ್ನ ನಾನು ಬಿಟ್ಟು ಇರುವುದಿಲ್ಲ. ನಮ್ಮ ತಾಯಿ ನನ್ನ ಬಿಟ್ಟು ಇರಲ್ಲ. ಬಿಗ್‌ ಬಾಸ್‌ಗೆ ನಾನು ಹೋಗಲ್ಲ. ನನಗೆ ಸುದೀಪ್‌ ಸರ್‌ ಅಂದ್ರೆ ಬಹಳ ಇಷ್ಟ ಎಂದು ಕಿಪ್ಪಿ ಕೀರ್ತಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+