Rashmika Mandanna: 'ಸಿಕಂದರ್' ಸೋಲಿನ ಬಳಿಕ ಸಖತ್ ಬೋಲ್ಡ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣಾ..
ಬೆಂಗಳೂರು, ಜೂನ್ 07: ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿ ಇರುವ ಬಹುಭಾಷಾ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಹಿಂದಿಯ 'ಕಾಕ್‌ಟೈಲ್ 2' (Cocktail 2) ಸಿನಿಮಾಗೆ ನಟ ಶಾಹಿದ್ ಕಪೂರ್ ಅವರಿಗೆ ಜೋಡಿಯಾಗಿದ್ದಾರೆ. ಒಂದರ ಹಿಂದೊಂದರಂತೆ ಹಿಂದಿ ಸಿನಿಮಾಗಳಲ್ಲಿ ಬ್ಯೂಸಿಯಾಗುತ್ತಿರುವ ನಟಿ, ಇದೀಗ ಬೋಲ್ಡ್ ಪಾತ್ರ ಮಾಡಲಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ 'ಸಿಕಂದರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುದ್ದಿ ಮಾಡಲಿಲ್ಲ. ನಿರಾಸೆ ಮೂಡಿಸಿತು. ಅದರ ಬೆನ್ನಲ್ಲೆ ಮತ್ತೊಂದು ಬಾಲಿವುಡ್ ಸಿನಿಮಾಗೆ ನಟಿ ರಶ್ಮಿಕಾ ಆಯ್ಕೆ ಆಗಿದ್ದಾರೆ. ಹೀಗಾಗುತ್ತೆ ಎಂದು ಕೊಂಡಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಪ್ರತಿಕ್ರಿಯಿಸಿದ್ದರು. 'ಸಿಕಂದರ್' ಸಿನಿಮಾ ಸೋಲಿನಿಂದ ಪಾಠ ಕಲಿತಂತೆ ಕಾಣುವ ನಟಿ ರಶ್ಮಿಕಾ ಬಾಲಿವುಡ್‌ನಲ್ಲಿ ಹಿಟ್ ಬಾರಿಸಲು ಮತ್ತೊಂದು ಹೊಸ ರೀತಿಯ ಪಾತ್ರ ಮಾಡಲು ಮುಂದಾಗಿದ್ದಾರೆ.

ಕಾಕ್‌ಟೈಲ್ 2 ಚಿತ್ರದಲ್ಲಿ ನಟಿ ರಶ್ಮಿಕಾ ಜೊತೆಗೆ, ಕೃತಿ ಸನೂನ್ ಸಹ ಬಣ್ಣ ಹಚ್ಚಲಿದ್ದಾರೆ. ಈ ಬಾರಿ ತಾನು ಹೊಸ ರೀತಿಯ ಸವಾಲಿನ, ಪಾತ್ರಗಳನ್ನು ಮಾಡುವ ಉದ್ದೇಶ ರಶ್ಮಿಕಾ ಹೊಂದಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿನ ಅವರ ಪಾತ್ರ ತುಂಬಾ ಬೋಲ್ಡ್ ಆಗಿರಲಿದೆ. ಸಖತ್ ಗ್ಲಾಮರಸ್ ಆಗಿ ರಶ್ಮಿಕಾ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇದು ರಶ್ಮಿಕಾ ಫ್ಯಾನ್ಸ್ ಹಬ್ಬದೂಟ ನೀಡಲಿದೆ ಎನ್ನಲಾಗುತ್ತಿದೆ.
ರಶ್ಮಿಕಾಗೆ ಹೊಸ ಬಗೆಯ ಪಾತ್ರದ ತುಡಿತ..
ಈ ಹಿಂದೆ ಹಿಂದಿಯ 'ಮಿಷನ್ ಮಜ್ನು', 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸಿದ್ದರು. ಅವು ಅಷ್ಟಾಗಿ ಸುದ್ದು ಮಾಡಿರಲಿಲ್ಲ. ನಂತರ 'ಅನಿಮಲ್' ನಲ್ಲಿ ನಟಿಸಿದರು. ಇದು ಬಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ನಂತರ ಐತಿಹಾಸಿಕ ಪಾತ್ರವನ್ನು 'ಛಾವಾ' ಮಾಡಿದರು. ನಟಿಗೆ ಈ ಸಿನಿಮಾ ಸಹ ಹೆಸರು ತಂದು ಕೊಟ್ಟಿತು. ಆದರೆ ಕೈ ಕೊಟ್ಟಿದ್ದು, 'ಸಿಕಂದರ್' ಸಿನಿಮಾ. ಹೀಗಾಗಿಯೇ ಬೋಲ್ಡ್ ಮತ್ತು ಹೊಸ ಬಗೆಯ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಇದು ಎಷ್ಟರ ಮಷ್ಟಿಗೆ ಗ್ಲಾಮರಸ್ ಆಗಿರಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕಾಕ್‌ಟೈಲ್‌ನಲ್ಲಿ ಲೀಡ್ ರೋಲ್..
ದಿನೇಶ್ ವಿಜನ್ ಹಾಗೂ ಲವ್ ರಂಜನ್ ಅವರು ಈ 'ಕಾಕ್‌ಟೈಲ್ 2' ಅನ್ನು ನಿರ್ಮಿಸುತ್ತಿದ್ದಾರೆ. ನಟಿ ರಶ್ಮಿಕಾ, ಶಾಹಿರ್ ಕಪೂರ್, ಕೃತಿ ಸನೂನ್‌ಗೆ ಲೀಡ್ ಪಾತ್ರ ಸಿಕ್ಕಿದೆ. ದೊಡ್ಡ ತಾರಾಬಳಗ ಇರುವ ಈ ಸಿನಿಮಾ ಚಿತ್ರೀಕರಣ ಆರಂಭವಾಗಬೇಕಿದೆ. ಚಿತ್ರತಂಡ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ.
ರಶ್ಮಿಕಾ ನಟನೆ ತಮಿಳಿನ ನಟ ಧನುಷ್ ಅವರೊಂದಿಗೆ ಸಿದ್ಧವಾದ 'ಕುಬೇರ' ಸಿನಿಮಾ ರಿಲೀಸ್ ರೆಡಿಯಾಗಿದೆ. 'ದಿ ಗರ್ಲ್ ಫ್ರೇಂಡ್', 'ಥಾಮಾ' ಸೇರಿ ಕೆಲವು ಪ್ರಾಜೆಕ್ಟ್‌ಗಳಲ್ಲಿ, ಜಾಹೀರಾತುಗಳಲ್ಲಿ ನಟಿ ಬ್ಯೂಸಿ ಇದ್ದಾರೆ.












Click it and Unblock the Notifications