Short Film Contest: 2 ನಿಮಿಷದ ಕಿರುಚಿತ್ರ ನಿರ್ಮಿಸಿ ₹20,000 ಗೆಲ್ಲಿರಿ! ವಿವರ, ಕೊನೆ ದಿನಾಂಕ ಮಾಹಿತಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗವು ಮತದಾನದ ಬಗ್ಗೆ ಜಾಗೃತಿ ಅಭಿಯಾನ ಆರಂಭಿಸಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಿರುಚಿತ್ರ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ವಿಭಿನ್ನವಾಗಿ ಆಲೋಚನೆ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ 20 ಸಾವಿರ ರೂಪಾಯಿ ಗೆಲ್ಲುವ ಅವಕಾಶ ಕೂಡ ನೀಡಿದೆ.

ಏನಿದು ಕಿರುಚಿತ್ರ ಸ್ಪರ್ಧೆ, ಯಾವುದರ ಬಗ್ಗೆ ಕಿರುಚಿತ್ರ ಮಾಡಬೇಕು, ನಿಬಂಧನೆಗಳೇನು, ಕೊನೆಯ ದಿನಾಂಕ ಯಾವಾಗ ಎಲ್ಲ ಮಾಹಿತಿಯನ್ನು ನೀಡಲಿದ್ದು, ನಿಮ್ಮ ಐಡಿಯಾ ಜೊತೆ ಉತ್ತಮ ಕಿರುಚಿತ್ರ ತಯಾರಿಸಿ ಹಣ ಗೆಲ್ಲುವ ಅವಕಾಶ ಉಪಯೋಗಿಸಿಕೊಳ್ಳಬಹುದು.
ಯಾವ ವಿಷಯದ ಮೇಲೆ ಕಿರುಚಿತ್ರ?
ನಿಮ್ಮ ಮತವನ್ನು ಚಲಾಯಿಸಿ: ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ (Voice Your Vote: Empower the Democracy). ಈ ವಿಷಯದ ಮೇಲೆ ಕಿರುಚಿತ್ರವನ್ನು ನಿರ್ಮಿಸುವಂತೆ ಕರ್ನಾಟಕ ಚುನಾವಾಣಾ ಆಯೋಗದ ಮುಖ್ಯಸ್ಥರು ಕೇಳಿದ್ದಾರೆ. 2 ನಿಮಿಷಗಳ ಕಿರುಚಿತ್ರ ನಿರ್ಮಾಣ ಮಾಡಬೇಕಿದ್ದು, ಈ ಸಮಯದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಂದೇಶ ನೀಡುವಂತಿರಬೇಕು.
ಇಂಗ್ಲಿಷ್ ಸೇರಿಸಿ ಭಾರತದ ಯಾವುದೇ ಭಾಷೆಯಲ್ಲಿ ಕಿರುಚಿತ್ರವನ್ನು ನಿರ್ಮಿಸಬಹುದಾಗಿದೆ. ಮೂಕಿ ಚಿತ್ರವನ್ನೂ ಕೂಡ ಸ್ಪರ್ಧೆಗೆ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಜನವರಿ 15ರಂದು ನಿಮ್ಮ ಕಿರುಚಿತ್ರವನ್ನು ಸ್ಪರ್ಧೆಗೆ ಕಳುಹಿಸಲು ಕೊನೆಯ ದಿನಾಂಕವಾಗಿದೆ. [email protected] ಈ ವಿಳಾಸಕ್ಕೆ ನೀವು ಕಿರುಚಿತ್ರವನ್ನು ಕಳುಹಿಸಬೇಕಾಗುತ್ತದೆ.
ಮೊದಲ ಮೂರು ಅತ್ಯುತ್ತಮ ಕಿರುಚಿತ್ರಗಳಿಗೆ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶ! ಜನವರಿ 15 ರ ಒಳಗೆ ನಿಮ್ಮ ಕಿರುಚಿತ್ರಗಳನ್ನು [email protected] ಗೆ ಕಳುಹಿಸಿ! ನಿಮ್ಮ ಕಿರುಚಿತ್ರಗಳನ್ನು ವೀಕ್ಷಿಸಲು ನಾವು ಕಾತುರದಿಂದ ಕಾಯುತ್ತಿದ್ದೇವೆ.#lightscamerademocracy #eci #sveep #shortfilmcontest pic.twitter.com/UmCplE4tjT
— Chief Electoral Officer, Karnataka (@ceo_karnataka) January 11, 2024
ಬಹುಮಾನದ ಮೊತ್ತ ಎಷ್ಟು?
ಮೊದಲ ಮೂರು ಅತ್ಯುತ್ತಮ ಕಿರು ಚಿತ್ರಗಳಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಮೊದಲ ಶ್ರೇಷ್ಠ ಕಿರುಚಿತ್ರಕ್ಕೆ 20 ಸಾವಿರ ರೂಪಾಯಿ ನಗದು ಬಹುಮಾನ ಸಿಗಲಿದೆ. ಎರಡನೇ ಸ್ಥಾನ ಪಡೆಯುವ ಕಿರುಚಿತ್ರಕ್ಕೆ 15 ಸಾವಿರ ರೂಪಾಯಿ, ಮೂರನೇ ಉತ್ತಮ ಕಿರುಚಿತ್ರಕ್ಕೆ 10 ಸಾವಿರ ರೂಪಾಯಿ ನಗದು ಬಹುಮಾನ ಸಿಗುತ್ತದೆ ಎಂದು ಘೋಷಣೆ ಮಾಡಿದೆ.
ಈ ಮೂರು ಉತ್ತಮ ಚಿತ್ರಗಳು ಬಹುಮಾನ ಪಡೆಯುವ ಜೊತೆಗೆ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಪ್ರದರ್ಶನ ಕೂಡ ಕಾಣಲಿವೆ. ನಿಮಗೇನಾದ್ರೂ ಕಿರುಚಿತ್ರ ನಿರ್ಮಾಣ, ನಟನೆ, ನಿರ್ದೇಶನದಲ್ಲಿ ಆಸಕ್ತಿ ಇದ್ದರೆ ಈ ಅವಕಾಶವನ್ನು ಬಳಸಿಕೊಳ್ಳಬಹುದು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications