ಪ್ರಶಾಂತ್ ನೀಲ್ ಸಿನಿಮಾಗೆ ಶಾಕ್; ನಟ ಜೂನಿಯರ್ ಎನ್‌ಟಿಆರ್‌ಗೆ ಗಂಭೀರ ಗಾಯ, ಆಗಿದ್ದೇನು?
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ (ತಾರಕ್) ಅವರಿಗೆ ಚೊಚ್ಚಲ ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಆದರೆ ಇದೇ ಹೊತ್ತಿನಲ್ಲಿ ದೊಡ್ಡ ಪ್ರಮಾದವೊಂದು ನಡೆದಿದೆ. ಈ ಸಿನಿಮಾಗೂ ಮುನ್ನವೇ ನಟ ತಾರಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ನಟ ಯಾವುದೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಆಗದ ಸ್ಥಿತಿ ತಲುಪಿದ್ದಾರೆ. ಹೀಗಾಗಿ ಪ್ರಶಾಂತ್ ನೀಲ್ ಅವರ ಬಹುನಿರೀಕ್ಷಿತ ಸಿನಿಮಾಗೆ ದೊಡ್ಡ ಆಘಾತ ಎದುರಾಗಿದೆ. ನಟ ತಾರಕ್ ಅವರಿಗೆ ಅಸಲಿಗೆ ಏನಾಯ್ತು ಎಂಬ ವಿವರ ಇಲ್ಲಿದೆ.
ನಟ ಜ್ಯೂನಿಯರ್ ಎನ್‌ಟಿಆರ್ ಇತ್ತೀಚೆಗಷ್ಟೇ ವಾರ್-2 ಸಿನಿಮಾ ಮುಗಿಸಿ, ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ಸಿನಿಮಾಗೆ ರೆಡಿಯಾಗಿದ್ದರು. ಇನ್ನೇನು ಇದರ ಶೂಟಿಂಗ್ ಕೂಡ ಶುರುವಾಗಬೇಕಿತ್ತು. ಇದೇ ಸಮಯದಲ್ಲಿ ನಟ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ನಟ ಗಾಯ ಗಾಯಗೊಂಡಿರುವುದು ಖಚಿತವಾಗಿದೆ. ಈ ಬಗ್ಗೆ ನಟನ ತಂಡ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದೆ.

ನಟನ ಗಾಯಗೊಂಡಿದ್ದೇಕೆ?
"ನಟ ಜ್ಯೂನಿಯರ್ ಎನ್‌ಟಿಆರ್ ಅವರು ಇಂದು ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಸಣ್ಣಪುಟ್ಟ ಗಾಯ ಮಾಡಿಕೊಂಡರು. ಹೀಗಾಗಿ ವೈದ್ಯಕೀಯ ಸಲಹೆಯ ಮೇರೆಗೆ ಅವರು ಸಂಪೂರ್ಣ ಗುಣಮುಖರಾಗಲು ಮುಂದಿನ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ನಾವು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇವೆ. ಅಭಿಮಾನಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಂದ ದೂರವಿರಬೇಕೆಂದು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯ ಗಂಭೀರ ಗಾಯದಿಂದಾಗಿ ನಟ ತಾರಕ್ ಅವರು ಕೆಲಕಾಲ ವಿಶ್ರಾಂತಿಯಲ್ಲೇ ಇರಲಿದ್ದು, ಅಲ್ಲಿಯವರೆಗೆ ಯಾವುದೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಹೇಳಿಕೆ ಬಿಡುಗಡೆ ಮಾಡಿದರೂ ನಟನಿಗೆ ಏನಾಯ್ತು? ಎಂದು ಹೆದರಿದ್ದಾರೆ. ಆದರೆ ಅವರ ತಂಡದಿಂದಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕಾರಣ ತುಸು ನಿರಾಳರಾಗಿದ್ದಾರೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಮುಂದಿನ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಬಾಲಿವುಡ್‌ನ್ 'ವಾರ್ 2' ಸಿನಿಮಾದಲ್ಲಿ ತಾರಕ್ ನಟಿಸಿದ್ದರಿಂದ ಭಾರೀ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ವಾರ್ 2 ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ನಟಿಸಿದರೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಪಡೆಯಲಿಲ್ಲ. ಹೀಗಾಗಿ ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇತ್ತು. ಈಗ ದಿಢೀರನೆ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆ, ಅವರು ಗುಣಮುಖರಾಗುವವರೆಗೆ ಈ ಸಿನಿಮಾ ಶೂಟಿಂಗ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ನೆಲ್ಸನ್ ದಿಲೀಪ್ ಕುಮಾರ್ ಅವರ ಹೊಸ ಚಿತ್ರಕ್ಕೂ ತಾರಕ್ ಸಹಿ ಮಾಡಿದ್ದಾರೆ.












Click it and Unblock the Notifications