ಕಮಲ್ ಹಾಸನ್ ಕ್ಷಮೆ ಕೇಳುವ ಬಗ್ಗೆ ಶಿವರಾಜ್ ಕುಮಾರ್ ಮಹತ್ವದ ಹೇಳಿಕೆ!
Shivarajkumar About Kamal Haasan: ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳುವ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೊನೆಗೂ ಮೌನ ಮುರಿದಿದ್ದಾರೆ. ಕನ್ನಡದ ತಾಯಿ ತಮಿಳು ಅಂತ ನಟ ಕಮಲ್ ಹಾಸನ್ ಹೇಳಿರುವುದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಇರುವಾಗಲೇ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳುವ ಬಗ್ಗೆ ಶಿವರಾಜ್‌ಕುಮಾರ್ ಅವರು ಮೌನ ಮುರಿದಿದ್ದಾರೆ. ಆದರೆ, ನಟ ಶಿವರಾಜ್ ಕುಮಾರ್ ಅವರ ಹೇಳಿಕೆಯಿಂದ ಕನ್ನಡಿಗರು ಸಮಾಧಾನಗೊಂಡಿಲ್ಲ. ಬದಲಾಗಿ ಇನ್ನಷ್ಟು ಬೇಸರಗೊಂಡಿದ್ದಾರೆ. ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳುವಂತೆ ಒತ್ತಡ ಹೇರಲಾಗುತ್ತಿದೆ. ಸಮಾರಂಭದಲ್ಲೇ ಇದ್ದ ಶಿವರಾಜ್ ಕುಮಾರ್ ಅವರು ಏನೂ ಮಾತನಾಡಿರಲಿಲ್ಲ. ಈಗ ಮಾತನಾಡಿದ್ದಾರಾದರೂ...
ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರೂ ಇಲ್ಲಿಯ ವರೆಗೆ ಕ್ಷಮೆ ಕೇಳುವ ಬಗ್ಗೆ ಏನು ಮಾತನಾಡುತ್ತಿಲ್ಲ. ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಈ ಕಮಲ್ ಮಾತನಾಡಿದ್ದರು. ಹೀಗಾಗಿ, ಕಮಲ್ ಅವರು ಕ್ಷಮೆ ಕೇಳುವಂತೆ ಶಿವರಾಜ್ ಕುಮಾರ್ ಅವರು ಒತ್ತಾಯಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ, ಶಿವರಾಜ್ ಕುಮಾರ್ ಅವರು ಇದನ್ನು ನಿರಾಕರಿಸಿದ್ದಾರೆ. ತಮಿಳಿನಿಂದಲೇ ಕನ್ನಡ ಅಂತ ಕಮಲ್ ಹೇಳಿದ್ದರು. ಮೊದ ಮೊದಲು ಕನ್ನಡಿಗರು ಸಹ ಇದು ಬಾಯ್ತಪ್ಪಿನಿಂದ ಹೇಳಿರಬಹುದು. ಮುಂದೆ ಕಮಲ್ ಅವರು ಈ ತಪ್ಪನ್ನು ತಿದ್ದಿಕೊಳ್ಳಲಿದ್ದಾರೆ ಅಂತಲೇ ಕನ್ನಡಿಗರು ಭಾವಿಸಿದ್ದರು. ಆದರೆ, ಆ ಲೆಕ್ಕಾಚಾರಗಳು ತಲೆಕೆಳಾಗಿವೆ.

ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ನಾನು ಹೇಳಿದ್ದರಲ್ಲಿ ತಪ್ಪಿದೆ ಎಂದು ಅನಿಸುತ್ತಿಲ್ಲ. ಪ್ರೀತಿಯಿಂದ ಮಾತನಾಡಿದ್ದೇನೆ & ನನ್ನ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಮಾಡಿದರೂ ನಾನು ಕ್ಷಮೆ ಕೇಳುವುದಿಲ್ಲ ಎಂದೆಲ್ಲ ಕಮಲ್ ಹೇಳಿರುವುದು ಕನ್ನಡಿಗರನ್ನು ಇನ್ನಷ್ಟು ಕೆರಳಿಸಿದೆ. ಇದಕ್ಕೆ ಶಿವರಾಜ್ ಕುಮಾರ್ ಅವರು ಸಹ ಸಾಕ್ಷಿಯಾಗಿರುವುದು ಇದಕ್ಕೆ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟ ಶಿವರಾಜ್ ಕುಮಾರ್ ಅವರು, ಎಂದೆಂದಿಗೂ ಕನ್ನಡವೇ ನನ್ನ ಮೊದಲ ಆದ್ಯತೆ. ಇದೇನು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಚಾರ ಬಂದಾಗೆಲ್ಲವೂ ನಾನು ಕನ್ನಡದ ಪರವಾಗಿಯೇ ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎನ್ನುವುದು ಕನ್ನಡಿಗರಿಗೆ ಹಾಗೂ ಕರ್ನಾಟಕದ ಜನರಿಗೆ ಗೊತ್ತಿದೆ. ಆ ವಿಷಯವನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ನಾನು ಆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಅಷ್ಟೇ ಅಂತ ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ವಿವಾದಲ್ಲಿ ಅವರು ಹೆಸರು ಕೇಳಿ ಬಂದಿರುವುದಕ್ಕೆ ರಿಯಾಕ್ಟ್ ಮಾಡಿರುವ ಅವರು, ಇರಲಿ ತೊಂದರೆ ಇಲ್ಲ, ನಾನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿದ್ದೇನೆ ಅಂತ ಗೊತ್ತಿದೆ. ನಾನು ಕಮಲ್ ಹಾಸನ್ ಅವರ ಅಭಿಮಾನಿ. ಆದರೆ ವೇದಿಕೆ ಮೇಲೆ ಏನು ಮಾತನಾಡಬೇಕು & ಬಿಡಬೇಕು ಎನ್ನುವುದು ಅವರ ಆಯ್ಕೆ ಕ್ಷಮೆ ಕೇಳುವ ವಿಚಾರವೂ ಅವರಿಗೆ ಬಿಟ್ಟದ್ದು ಅಂತ ಅವರು ಹೇಳಿದ್ದಾರೆ.












Click it and Unblock the Notifications