SaReGaMaPa Finale: ಆರು ಫೈನಲಿಸ್ಟ್‌ಗಳಲ್ಲಿ ಇವರೇ ನೋಡಿ ಈ ಬಾರಿಯ ಸರಿಗಮಪ ವಿನ್ನರ್
ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್-11ರ ಫಿನಾಲೆ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಫೈನಲ್ ಅಂಗಳದಲ್ಲಿ ಒಟ್ಟು ಆರು ಮಂದಿ ಸ್ಪರ್ಧಿಗಳಿದ್ದರು. ಜೀ 5ನಲ್ಲಿ ಜೂನ್ 5ರಂದು ಸರಿಗಮಪ ರಿಯಾಲಿಟಿ ಶೋ ನೇರ ಪ್ರಸಾರಗೊಂಡಿದೆ. ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ಹಾಗೂ ದ್ಯಾಮೇಶ ಫೈನಲ್‌ನಲ್ಲಿ ಅಬ್ಬರಿಸಿದ್ದಾರೆ. ಇನ್ನು ಈ ಬಾರಿ ಸರಿಗಮಪ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲ ಸಂಗೀತಪ್ರಿಯರಲ್ಲಿತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ವಿನ್ನರ್ ಯಾರು ಎನ್ನುವ ವಿಷಯ ಕೂಡ ಹೊರ ಬಿದ್ದಿದೆ. ಆರು ಮಂದಿಯಲ್ಲಿ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದು ಯಾರು ಗೊತ್ತಾ?
ಮೈಸೂರಿನ ರಶ್ಮಿ ಡಿ, ಹಾವೇರಿಯ ಬಾಳು ಬೆಳಗುಂದಿ, ಬೀದರ್‌ನ ಶಿವಾನಿ, ಉಡುಪಿಯ ಆರಾಧ್ಯ ರಾವ್, ದ್ಯಾಮೇಶ್ ಹಾಗೂ ಬೆಳಗಾವಿಯ ಅಮೋಘ ವರ್ಷ ಫಿನಾಲೆಯಲ್ಲಿದ್ದ ಸ್ಪರ್ಧಿಗಳು. ಇನ್ನೇನು ಈ ಸೀಸನ್ ಫಿನಾಲೆ ಕೂಡ ಮುಗಿದಿದ್ದು, ಇದೇ ಜೂನ್ 7ರಂದು ಶನಿವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಫಿನಾಲೆ ಕಾರ್ಯಕ್ರಮದ ಎಪಿಸೋಡ್ ಪ್ರಸಾರವಾಗಲಿದೆ. ಹಾಗಾಗಿ ವಿನ್ನರ್ ಯಾರೆಂದು ವಾಹಿನಿಯು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ, ಆದರೆ ವಿನ್ನರ್ ಯಾರು ಎಂದು ಈಗಾಗಲೇ ಹೆಸರು ಕೂಡ ಲೀಕ್ ಆಗಿದೆ.

ಸರಿಗಮಪ ಸೀಸನ್ 21ರ ಅಂತಿಮ ಸುತ್ತಿಗೆ ಆರು ಮಂದಿ ಆಯ್ಕೆ ಆಗಿದ್ದರು. ಫಿನಾಲೆಯಲ್ಲಿ ಆರು ಮಂದಿಯೂ ಟೈಟಲ್‌ಗಾಗಿ ಪೈಪೋಟಿ ನಡೆಸಿದ್ದರು. ದ್ಯಾಮೇಶ, ಬಾಳು ಬೆಳಗುಂದಿ, ರಶ್ಮಿ ಡಿ, ಅಮೋಘ ವರ್ಷ, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಒಂದು ರೀತಿ ಟಫ್ ಫೈಟ್ ಇತ್ತು ಎಂದೇ ಹೇಳಬಹುದು. ಕಳೆದ ವಾರ ನಡೆದ ಟಿಕೆಟ್ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು. ಒಟ್ಟಾರೆ ಆರು ಮಂದಿಯ ಸೆಣಸಾಟದಲ್ಲಿ ಕೊನೆಗೂ ಕಿರೀಟ ಒಬ್ಬ ಸ್ಪರ್ಧಿಯ ಮುಡಿಗೇರಿದೆ.
ಫಿನಾಲೆಯಲ್ಲಿ ಟಾಪ್ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಅಚ್ಚರಿಯೆಂದರೆ ಟಾಪ್ ಮೂರು ಸ್ಪರ್ಧಿಗಳು ಕೂಡ ಈ ಬಾರಿ ಮಹಿಳಾ ಸ್ಪರ್ಧಿಗಳೇ ಆಗಿದ್ದರು. ಆರಾಧ್ಯಾ ರಾವ್, ಶಿವಾನಿ ಹಾಗೂ ರಶ್ಮಿ ಅವರು ಟಾಪ್ ಮೂರು ಸ್ಪರ್ಧಿಗಳಾಗಿ ಸ್ಥಾನ ಪಡೆದರು. ಅಂತಿಮವಾಗಿ ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ರಶ್ಮಿ ಹೊರಹೊಮ್ಮಿದ್ದಾರೆ.

ಬೀದರ್‌ನ ಶಿವಾನಿ ಸ್ವಾಮಿ ಅವರು ಸರಿಗಮಪ ಸೀಸನ್-11ರ ವಿನ್ನರ್ ಆಗಿ ಕಿರೀಟಿ ಮುಡಿಗೇರಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ವಿಜೇತೆಯಾಗಿ ಹೊರಹೊಮ್ಮಿರುವ ಶಿವಾನಿ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳು ಅರಸಿ ಬರಲಿ ಎಂದು ಜನ ಹರಸುತ್ತಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಫಿನಾಲೆ ಕಾರ್ಯಕ್ರಮದ ಎಪಿಸೋಡ್ ಪ್ರಸಾರವಾಗಲಿದೆ.












Click it and Unblock the Notifications