ಜೀವದ ಗೆಳೆಯನನ್ನು ಕಳೆದುಕೊಂಡ ನೋವಿನಲ್ಲೇ ಕೈ ಮುಗಿದು ಮನವಿ ಮಾಡಿದ ವರುಣ್ ಆರಾಧ್ಯ
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿರುವ ಕಿರುತೆರೆ ನಟ ವರುಣ್ ಆರಾಧ್ಯ ಜೀವದ ಗೆಳೆಯ ತೇಜಸ್‌ನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಬಹಳ ಚಿಕ್ಕವಯಸ್ಸಿನಲ್ಲೇ ತೇಜಸ್ ಸಾವನ್ನಪ್ಪಿದ್ದು, ವರುಣ್ ಹಾಗೂ ತೇಜಸ್ ಫಾಲೋವರ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾ ಬಳಸುವವರಿಗೆ ಶಾಕಿಂಗ್ ಸುದ್ದಿಯಾಗಿದೆ.
ಕಿರುತೆರೆ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ಆಗಿದ್ದ ತೇಜಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಸೋಶಿಯಲ್ ಮೀಡಿಯಾದಲ್ಲಿ ಸಖತ್. ಗೆಳೆತನ, ಅಮ್ಮ, ಪ್ರೀತಿ ಹೀಗೆ ಡಿಫರೆಂಟ್ ರೀಲ್ಸ್‌ಗಳನ್ನು ಶೇರ್ ಮಾಡುತ್ತಾ ನೋಡುಗರ ಮನಸ್ಸು ಗೆದ್ದಿದ್ದ ತೇಜಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ 33 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದರು.

ನಟ ವರುಣ್ ಆರಾಧ್ಯ ವಿಡಿಯೋ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ಸದಾ ಇರುತ್ತಿದ್ದ ತೇಜಸ್ ಅವರ ಮನೆಯ ಸದಸ್ಯನಂತಾಗಿದ್ದರು. ಆದರೆ ವಿಧಿಯಾಟವೇ ಬೇರೆ ಇದ್ದು, ತೇಜಸ್ ತಮ್ಮನ್ನು ಪ್ರೀತಿಸುವ ಎಲ್ಲರನ್ನೂ ಅಗಲಿದ್ದಾರೆ.
ಆ ದಿನ ಆಗಿದ್ದೇನು..?
ತೇಜಸ್ ಬುಧವಾರ ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ, ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಆಕಾಶ್ (19) ಗಂಭೀರ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ಗೆಳೆಯನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದ ವರುಣ್ ಆರಾಧ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ವರುಣ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ. ನೀನು ಹೋಗ್ಬೇಡ ದೋಸ್ತ್ ಎಂಬ ಡೈಲಾಗ್ ಹೇಳಿದ್ದಾರೆ. ಈ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವರುಣ್ ನೋವಿಗೆ ನೋಡುಗರು ಸಾಂತ್ವನ ಹೇಳಿದ್ದಾರೆ.
ಹದಿನೈದು ವರ್ಷಗಳ ಕಾಲ ಜೊತೆಗಿದ್ದ ಗೆಳೆಯನ ಅಗಲಿಕೆಯಿಂದ ವರುಣ್ ನೋವು ಹೇಳ ತೀರದಾಗಿದೆ. ಈ ನೋವಿನಲ್ಲೂ ವರುಣ್ ಆರಾಧ್ಯ ಯುವ ಜನತೆಗೆ ಕೈ ಮುಗಿದು ಮನವಿ ಮಾಡಿದ್ದಾರೆ. ದಯವಿಟ್ಟು ಬೈಕ್‌ನ್ನು ತೆರಳುವಾಗ ಹಾಗೂ ಬೈಕ್ ಸವಾರಿ ವೇಳೆ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಯಾಕಿಷ್ಟು ಬೇಗ ಬಿಟ್ಟು ಹೋದೆ ಗೆಳೆಯ ಎನ್ನುವ ವರುಣ್ ಪೋಸ್ಟ್ ಎಲ್ಲರ ಮನಕಲುಕುವಂತಿದೆ.












Click it and Unblock the Notifications