K Shivaram in ICU: ‘ಬಾ ನಲ್ಲೆ ಮಧುಚಂದ್ರಕೆ’ ನಟ ಕೆ. ಶಿವರಾಮ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದ ನಟ ಕಂ ಮಾಜಿ ಸರ್ಕಾರಿ ಅಧಿಕಾರಿ, ಕೆ. ಶಿವರಾಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಕೆ. ಶಿವರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ, ಶಿವರಾಮ್ ಅವರನ್ನು ಇದೀಗ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿದೆ. ಹಾಗಾದರೆ ಕೆ. ಶಿವರಾಮ್ ಅವರಿಗೆ ಆಗಿದ್ದು ಏನು? ಯಾವ ಆಸ್ಪತ್ರೆಯಲ್ಲಿ ಇದ್ದಾರೆ? ಬನ್ನಿ ತಿಳಿಯೋಣ.

ಕೆ. ಶಿವರಾಮ್ ಅವರು 90ರ ಕಾಲಘಟ್ಟದಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿನ ನೆಚ್ಚಿನ ಹೀರೋ ಆಗಿದ್ದರು. ಅದ್ರಲ್ಲೂ ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾ ನೀಡಿದ್ದ ಈ ನಟ, ಮಾಡಿದ್ದ ಕೆಲವೇ ಸಿನಿಮಾಗಳಲ್ಲಿ ನೂರಾರು ಸಿನಿಮಾಗಳಿಗೆ ಆಗುವಷ್ಟು ಹೆಸರನ್ನೂ ಸಂಪಾದಿಸಿದರು.

Senior Kannada Actor K Shivaram Admitted to ICU After Severe Heart Attack: Know More

ಅದರಲ್ಲೂ ಕೆ. ಶಿವರಾಮ್ ಅವರ 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗಿತ್ತು. ಎವರ್ ಗ್ರೀನ್ ಆಗಿ 'ಬಾ ನಲ್ಲೆ ಮಧುಚಂದ್ರಕೆ' ಚಿತ್ರ ಮಿಂಚಿತ್ತು. ಇದೀಗ ಈ ಸಿನಿಮಾದ ಹೀರೋ ಕೆ. ಶಿವರಾಮ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾದರೆ ಅವರಿಗೆ ಏನಾಗಿದೆ? ಮುಂದೆ ಓದಿ.

ಕೆ. ಶಿವರಾಮ್ ಅವರಿಗೆ ಏನಾಗಿದೆ?

ಅಷ್ಟಕ್ಕೂ ನಟ ಕಂ ಮಾಜಿ ಸರ್ಕಾರಿ ಅಧಿಕಾರಿ ಕೆ. ಶಿವರಾಮ್ (K Shivaram) ಅವರಿಗೆ, ಇದೀಗ ಹೃದಯಾಘಾತ ಆಗಿದೆ ಎನ್ನಲಾಗಿದೆ. ಈಗ ಕೆ. ಶಿವರಾಮ್ ಅವರನ್ನ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ಮಾಹಿತಿಗಳ ಪ್ರಕಾರ ಕೆ. ಶಿವರಾಮ್ ಅವರ ಪರಿಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಅಭಿಮಾನಿಗಳಿಗೆ ಕೂಡ ಇದೀಗ ಭಾರಿ ಆತಂಕ ಎದುರಾಗಿದೆ. ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಕೆ. ಶಿವರಾಮ್ ಅಭಿನಯದ ಸಿನಿಮಾಗಳು

ಇದೀಗ ಕೆ ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ. ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ತುಂಬಾ ಲಕ್ಕಿ ಹೀರೋ ಅನ್ನಿಸಿಕೊಂಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದ ಬಾ ನಲ್ಲೆ ಮಧು ಚಂದ್ರಕೆ, ವಸಂತ ಕಾವ್ಯ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ಓ ಪ್ರೇಮ ದೇವತೆ ರೀತಿ ಹಿಟ್ ಸಿನಿಮಾಗಳಲ್ಲಿ ಶಿವರಾಮ್ ನಟಿಸಿದ್ದರು.

ಆದ್ರೆ ಕಳೆದ ಒಂದೂವರೆ ದಶಕದಿಂದ ಅಂದ್ರೆ 15 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದರು. ಶಿವರಾಮ್ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಶಿವರಾಮ್‌ರ ಮಿದುಳು ನಿಷ್ಕ್ರಿಯವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಕೆ. ಶಿವರಾಮ್ ಅವರ ಅಳಿಯ ಕೂಡ ಮಾಹಿತಿ ನೀಡಿದ್ದಾರೆ.

ಶಿವರಾಮ್‌ರ ಅಳಿಯ ಹೇಳಿದ್ದೇನು?

ಮತ್ತೊಂದು ಕಡೆ ಕೆ. ಶಿವರಾಮ್‌ರ ಅಳಿಯ ಭರತ್ ನೀಡಿರುವ ಮಾಹಿತಿ ಪ್ರಕಾರ, 20 ದಿನಗಳ ಹಿಂದೆ 'ಬಿಪಿ' ಅಂದ್ರೆ ರಕ್ತದೊತ್ತಡ ಹೆಚ್ಚಾದ ಕಾರಣ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ, ಐಸಿಯು ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿದ್ದು, ಕೆ. ಶಿವರಾಮ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಕೆ. ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ನಿವೃತ್ತ ಪಡೆದ ಬಳಿಕ ರಾಜಕೀಯದಲ್ಲಿ ಸಕ್ರಿಯರಾದ ಕೆ. ಶಿವರಾಮ್, 2013ರಲ್ಲಿ ಜೆಡಿಎಸ್‌ಗೆ ಸೇರ್ಪಡೆ ಆದರು. ಆ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, 2016ರ ನಂತರ ಬಿಜೆಪಿ ಸೇರಿದ್ದರು. ಕೆ. ಶಿವರಾಮ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಫ್ಯಾನ್ಸ್‌ಗೆ ಕೂಡ ಆತಂಕ ಶುರುವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+