Ashok Sharma: ದಿಢೀರ್​ ಆಸ್ಪತ್ರೆಗೆ ದಾಖಲಾದ ಸೀತಾರಾಮ ಧಾರಾವಾಹಿ ನಟ: ಏನಾಯ್ತು?

ರಾಮಾಚಾರಿ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಗೆಳೆಯ ಪ್ರಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅಶೋಕ್‌ ಶರ್ಮಾ ಇದೀಗ ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಪ್ರತಿ ನಿತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಡು ರಂಜಿಸುತ್ತಿದ್ದ ನಟ ಅಶೋಕ್‌ ಶರ್ಮಾ ಇದೀಗ ದಿಢೀರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ಅಶೋಕ್‌ ಶರ್ಮಾ ಆಸ್ಪತ್ರೆ ಬೆಡ್‌ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಇದರಿಂದ ಇವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಇನ್ನೂ ಕೆಲವರು ಧಾರಾವಾಹಿ ಅಥವಾ ಸಿನಿಮಾ ಶೂಟಿಂಗ್‌ ಫೋಟೋ ಇರಬಹುದು ಎಂದುಕೊಂಡಿದ್ದರು. ಆದರೆ ನಿಜಾಂಶ ಬೇರೆಯೇ ಇದೆ.

Seetharama Kannada Serial Actor Ashok Sharma Hospitalized

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಾಗಿದ್ದುಕೊಂಡು ಫೋಟೋಗಳನ್ನು ಹಾಕಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದ ನಟ ಅಶೋಕ್‌ ಶರ್ಮಾ ಕಳೆದ ಹದಿನೈದು ದಿನಗಳಿಂದ ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಅಭಿಮಾನಿಗಳು ಹಳೆಯ ಫೋಟೋಗಳಿಗೆ ಕಮೆಂಟ್‌ ಹಾಕಿ, ಯಾಕೆ ಏನಾಯ್ತು ಎಂದು ವಿಚಾರಿಸುತ್ತಿದ್ದರು. ಕೊನೆಗೂ ಈ ಬಗ್ಗೆ ಅಶೋಕ್‌ ಶರ್ಮಾ ಅವರೇ ಉತ್ತರ ನೀಡಿದ್ದಾರೆ.

ಆಸ್ಪತ್ರೆ ಬೆಡ್‌ ಮೇಲೆ ಕುಳಿತಿರುವ ಫೋಟೋ ಶೇರ್‌ ಮಾಡಿಕೊಂಡಿರುವ ಅಶೋಕ್‌ ಶರ್ಮಾ "ತುಂಬಾ ದಿನದಿಂದ ಒಂದೂ ಪೋಸ್ಟ್ ಇಲ್ಲ ಅಂತ ಕೇಳುತ್ತಿದ್ದೀರಿ. ನಾನು ನ್ಯುಮೋನಿಯಾದಿಂದ ಬಳಲುತ್ತಿದ್ದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಈಗ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿ, ಪ್ರೀತಿ, ಮನೆಯವರ ಹರಕೆ, ಹಾರೈಕೆ ನನ್ನನ್ನು ಸರಿಪಡಿಸಿದೆ. ದಯವಿಟ್ಟು ಎಲ್ಲರೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಆರೋಗ್ಯವೇ ಸಂಪತ್ತು. ದಯವಿಟ್ಟು ಹೈಡ್ರೇಟೆಡ್ ಆಗಿರಿ. ಅದಕ್ಕಾಗಿ ನೀರು ಕುಡಿರಿ, ಕುಡಿಸಿ" ಎಂದು ಬರೆದುಕೊಂಡಿದ್ದಾರೆ.

ನಟ ಅಶೋಕ್‌ ಶರ್ಮಾ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ಬೇಗ ಹುಷಾರಾಗಿ, ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಕಮೆಂಟ್‌ ಮಾಡಿ ಹಾರೈಸಿದ್ದಾರೆ. ಇನ್ನು ನಟ ಅಶೋಕ್‌ ಶರ್ಮಾ ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ಅವರೇ ಹಾಡಿರುವ 'ಜಿಂಗಿಚಿಕ ಜಿಂಗಿಚಿಕ ಕುಚ್ ಕುಚ್ ಟುವಿ ಟುವಿ' ಹಾಡು ಸಖತ್‌ ಫೇಮಸ್‌ ಆಗಿತ್ತು.

ನಟ ಅಶೋಕ್‌ ಶರ್ಮ ಗಾಯಕರಾಗಬೇಕು ಎನ್ನುವ ಆಸೆಯಿಂದಲೇ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದ ಸೂಪರ್‌ ಹಿಟ್‌ ಚಿತ್ರ ಫ್ರೆಂಡ್ಸ್‌ ಚಿತ್ರದ 'ತಿರುಪತಿ ತಿರುಮಲ ವೆಂಕಟೇಶ' ಹಾಡಿಗೆ ಕೂಡ ಅಶೋಕ್‌ ಶರ್ಮ ಅವರೇ ಧ್ವನಿಯಾಗಿದ್ದರು. ಬಳಿಕ 2011ರಲ್ಲಿ ಫೈವ್‌ ಈಡಿಯಟ್ಸ್‌ ಚಿತ್ರದಲ್ಲಿ 'ಜಿಂಗಿ ಚಕಾ..ಜಿಂಗಿ ಚಕಾ..ಕುಚ್‌ ಕುಚ್‌ ಟುವಿ ಟುವಿ' ಹಾಡು ಹಾಡಿದ್ದರು. ಆ ಸಮಯದಲ್ಲಿ ಈ ಹಾಡು ಅಷ್ಟರ ಮಟ್ಟಿಗೆ ಕೇಳುಗರಿಗೆ ತಲುಪಿರಲಿಲ್ಲ. ಹಾಗೂ ಆ ಸಮಯದಲ್ಲಿ ಗಾಯನದಲ್ಲಿ ಅವಕಾಶಗಳು ಕಡಿಮೆಯಾಗಿದ್ದ ಕಾರಣಕ್ಕೆ ಅಶೋಕ್‌ ಶರ್ಮ ನಟನೆಯತ್ತ ಮುಖ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+