Bigg Boss: ಕನ್ನಡದ ಖ್ಯಾತ ನಟಿಗೆ ಬಿಗ್‌ಬಾಸ್ ಸ್ಪರ್ಧಿಯಾಗಿ ಎರಡನೇ ಬಾರಿ ಚಾನ್ಸ್
ಕನ್ನಡ ಬಿಗ್‌ಬಾಸ್ ಸೀಸನ್ 12 ಇನ್ನೇನು ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಶುರುವಾಗಲಿದೆ. ಪ್ರತಿ ಸೀಸನ್‌ನಲ್ಲೂ ಸೆಲೆಬ್ರಿಟಿಗಳ ಗುಂಪು ಬಿಗ್‌ಬಾಸ್ ಮನೆ ಸೇರಿ ಪ್ರೇಕ್ಷಕರನ್ನು ರಂಜಿಸುತ್ತೆ. ಹೀಗಾಗಿ ಬಿಗ್‌ಬಾಸ್‌ಗೆ ಹೋಗಲು ಒಂದು ಅವಕಾಶ ಸಿಕ್ಕರೆ ಸಾಕು ಎನ್ನುವವರೇ ಹೆಚ್ಚು. ಆದರೆ ಈಗಾಗಲೇ ಒಂದು ಸೀಸನ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕನ್ನಡದ ಖ್ಯಾತ ನಟಿಗೆ ಎರಡನೇ ಬಾರಿಯೂ ಬಿಗ್‌ಬಾಸ್ ಪ್ರವೇಶಿಸುವ ಅವಕಾಶ ನೀಡಲಾಗಿದೆ.
2013ರಲ್ಲಿ ಕನ್ನಡದ ಮೊದಲ ಬಿಗ್‌ಬಾಸ್ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೊಂದು ಸೀಸನ್‌ನಲ್ಲಿಯೂ ಸ್ಪರ್ಧಿಯಾಗಿದ್ದಾರೆ. ಬರೋಬ್ಬರಿ 12 ವರ್ಷಗಳ ನಂತರ ಅವರು ಮತ್ತೆ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸಿನಿಮಾಗಳ ಜೊತೆ ಹಲವು ವಿವಾದಗಳಿಂದಲೂ ಸಂಜನಾ ಗಲ್ರಾನಿ ಸುದ್ದಿಯಾಗಿದ್ದರು. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಜೈಲು ಸೇರಿಬಂದಿದ್ದರು. ಇದೀಗ ಮತ್ತೆ ಅವರಿಗೆ ಬಿಗ್‌ಬಾಸ್ ಅವಕಾಶ ಒದಗಿ ಬಂದಿದೆ. ಬಿಗ್‌ಬಾಸ್ ಸ್ಪರ್ಧಿಯಾಗಿ ಎರಡೆರಡು ಬಾರಿ ಹೋಗುವ ಅದೃಷ್ಟ ಅವರಿಗೆ ಒಲಿದಿದೆ.

ಚಿಕ್ಕ ಮಗು ಬಿಟ್ಟು ಬಿಗ್‌ಬಾಸ್ ಮನೆಗೆ
ಆದರೆ ಈ ಬಾರಿ ಅವರು ಕನ್ನಡ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ತೆಲುಗು ಬಿಗ್‌ಬಾಸ್ ಸೀಸನ-9ರ ಸ್ಪರ್ಧಿಯಾಗಿ ದೊಡ್ಮನೆ ಸೇರಿಕೊಂಡಿದ್ದಾರೆ. ಈಗಾಗಲೇ ತೆಲುಗು ಬಿಗ್‌ಬಾಸ್ ಶುರುವಾಗಿದ್ದು, ಕಾರ್ಯಕ್ರಮದ ಆರಂಭಿಕ ಎಪಿಸೋಡ್‌ನಲ್ಲಿ ನಿರೂಪಕ, ನಟ ನಾಗಾರ್ಜುನ್ ಅವರು ನಟಿ ಸಂಜಾನಾ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಸಂಜನಾ ತಮ್ಮ ಪರಿಚಯದ ವಿಡಿಯೋದಲ್ಲಿ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದಾಗಿ ಭಾವುಕವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ 2020ರಲ್ಲಿ ಸುದ್ದಿಯಾದ ಡ್ರಗ್ಸ್ ಕೇಸ್‌ನಲ್ಲಿ ತಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ತರಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಬುಜ್ಜಿಗಾಡು, ಸತ್ಯವೇಮ ಜಯತೆ, ಸರ್ದಾರ್ ಗಬ್ಬರ್ ಸಿಂಗ್ ಸೇರಿದಂತೆ ಟಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದು, ಅಲ್ಲಿಯೂ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಶ್ರೀಲಂಕಾ ಜೂಜು ಪ್ರಕರಣ, ಡ್ರಗ್ಸ್ ಪ್ರಕರಣ ಸೇರಿದಂತೆ ಅನೇಕ ವಿವಾದಗಳಲ್ಲಿ ಅವರ ಹೆಸರು ಕೇಳಿಬಂದಿದೆ. ಇತ್ತೀಚಿನ ವಿವಾದಗಳಿಂದಲೂ ಸುದ್ದಿಯಾಗಿದ್ದ ಅವರಿಗೆ ತೆಲುಗು ಬಿಗ್‌ಬಾಸ್ ಅವಕಾಶ ನೀಡಿದೆ. ಈಗಾಗಲೇ ಒಂದು ಬಾರಿ ಬಿಗ್‌ಬಾಸ್ ಮನೆಯ ಆಟ ನೋಡಿರುವ ಅವರಿಗೆ ತೆಲುಗು ಬಿಗ್‌ಬಾಸ್ ಸಲೀಸು ಎಂದು ಹೇಳಲಾಗುತ್ತಿದೆ. ಒಳಗಿನ ಎಲ್ಲ ವಿಚಾರಗಳ ಬಗ್ಗೆ ಈಗಾಗಲೇ ತಿಳಿದಿರುವ ಅವರು ಅನುಭವಿ ಸ್ಪರ್ಧಿಯಾಗಿ ಎಷ್ಟು ದಿನ ಬಿಗ್‌ಬಾಸ್‌ನಲ್ಲಿ ಮಿಂಚಲಿದ್ದಾರೆ ಎಂಬುದೇ ಕುತೂಹಲ.
ತೆಲುಗು ಬಿಗ್‌ಬಾಸ್ ಕಳೆದ ಸೀಸನ್‌ನಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಕಾಣಿಸಿಕೊಂಡಿದ್ದರು. ಅಲ್ಲಿನ ಟಫ್ ಕಂಟೆಸ್ಟಂಟ್ ಆಗಿಯೂ ಗುರುತಿಸಿಕೊಂಡಿದ್ದರು. ನಂತರ ಅವರು ಕನ್ನಡ ಬಿಗ್‌ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದರು. ಆದರೆ ಇಲ್ಲಿ ಸರಿಯಾಗಿ ಆಟವಾಡಲು ಶೋಭಾ ಒದ್ದಾಡಿದ್ದಲ್ಲದೆ, ಕಣ್ಣೀರಿಟ್ಟಿದ್ದರು. ಇದೀಗ ನಟಿ ಸಂಜನಾ ಕನ್ನಡದಿಂದ ತೆಲುಗು ಬಿಗ್‌ಬಾಸ್‌ಗೆ ಶಿಫ್ಟ್ ಆಗಿದ್ದಾರೆ.












Click it and Unblock the Notifications