ಕಾಡಿನ ರಾಜ ಸಿಂಹನೇ, ಅದು ಯಾರೆಂದು ಎಲ್ಲರಿಗೂ ಗೊತ್ತಿದೆ: ಧನ್ವೀರ್ ಬೆನ್ನಲ್ಲೇ ವಿನಯ್ ಗೌಡ ಪೋಸ್ಟ್ ವೈರಲ್
ಸ್ಯಾಂಡಲ್ವುಡ್ ಈಗ ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಮುಂದುವರಿದಿದೆ. ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ದೊಡ್ಡ ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ, ನಾವೂ ರೆಡಿ ಎಂದಿದ್ದು, ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಇಲ್ಲದಿದ್ದಾಗ ಅವರ ಬಗ್ಗೆ ಏನೇನೋ ಮಾತನಾಡ್ತಾರೆ ಎಂದಿದ್ದು ಇದಕ್ಕೆ ಕಾರಣ. ಈಗ ಇದು ದರ್ಶನ್ ಆಪ್ತ ಧನ್ವೀರ್ vs ಸುದೀಪ್ ಆಪ್ತ ವಿನಯ್ ಗೌಡ ಎನ್ನುವ ತಿರುವು ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ಇಬ್ಬರೂ ಹಂಚಿಕೊಂಡ "ಕಾಡಿನ ರಾಜ ಸಿಂಹ" ಎನ್ನುವ ಪೋಸ್ಟ್ಗಳು.
ಹೌದು, ಒಂದೆಡೆ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾಡುತ್ತಿದ್ದಾರೆ. ಸುದೀಪ್ ವೇದಿಕೆ ಮೇಲೆ ದರ್ಶನ್ ಅವರ ಹೆಸರು ಉಲ್ಲೇಖಿಸಲೇ ಇಲ್ಲ, ಇತ್ತ ವಿಜಯಲಕ್ಷ್ಮಿ ಅವರೂ ಸುದೀಪ್ ಅವರ ಹೆಸರನ್ನು ಹೇಳಲೇ ಇಲ್ಲ. ಈಗಾಗಲೇ ಸುದೀಪ್ ಅವರು ನಾನು ಹೇಳಿದ್ದು ಪೈರಸಿ ಬಗ್ಗೆ ಎಂದು ಕ್ಲಾರಿಟಿಯೂ ಕೊಟ್ಟಾಗಿದೆ. ಆದರೂ ಡಿಬಾಸ್ ಅಭಿಮಾನಿಗಳು ಹಾಗೂ ಕಿಚ್ಚನ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ʼಕಾಡಿನ ರಾಜ ಸಿಂಹ ಪೋಸ್ಟ್ʼ
ಸುದೀಪ್ ಅವರೇ ಖುದ್ದಾಗಿ ನಾನು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ನನ್ನ ಹೆಸರೇ ಹೇಳಿದ್ರೆ ಉತ್ತರ ಕೊಡ್ತೀನಿ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೂ ಫ್ಯಾನ್ಸ್ ನಡುವೆ ಟಾಕ್ ವಾರ್ ಮುಂದುವರಿದಿದೆ. ಮತ್ತೊಂದೆಡೆ ನಟ ಧನ್ವೀರ್ ಗೌಡ ಹಾಗೂ ವಿನಯ್ ಗೌಡ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಕೂಡ ಈ ಫ್ಯಾನ್ ವಾರ್ ಎಂಬ ಬೆಂಕಿಗೆ ತುಪ್ಪ ಸುರಿದಿವೆ.
ನಟ ಧನ್ವೀರ್ ಗೌಡ ಅವರು ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರ ಆಪ್ತರು. ದರ್ಶನ್ ಅವರ ಕಷ್ಟಕಾಲದಲ್ಲೂ ಜೊತೆ ನಿಂತಿದ್ದಾರೆ. ಹೀಗಾಗಿ ಫ್ಯಾನ್ ವಾರ್ ನಡುವೆಯೇ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಧನ್ವೀರ್, "ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರುತ್ತೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ" ಎನ್ನುವ ಡೈಲಾಗ್ ಸೇರಿಸಿದ್ದರು. ಇದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
Vinay Gowda via IG Story 🔥
— ABHINAYA CHAKRAVARTHY CULTS HUBBALLI (@ACC_Hubballi) December 23, 2025
Bro cooked whole slum batch with this🤣
BAADSHAH FOR A REASON
KING HITS BACK AT THEATRES#MarkTheFilm #MARKonDec25 @KicchaSudeep #KicchaSudeep pic.twitter.com/cdPdfhPTq3
ಕಾಡಿನ ರಾಜ ಸಿಂಹ, ಅದು ಕಿಚ್ಚ ಎಂದ ವಿನಯ್
ಧನ್ವೀರ್ ಪೋಸ್ಟ್ ಬೆನ್ನಲ್ಲೇ ನಟ ಹಾಗೂ ಸುದೀಪ್ ಆಪ್ತ ವಿನಯ್ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಡಿನ ರಾಜ ಕುರಿತಂತೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. 'ಖಂಡಿತ ಸಿಂಹ ಕಾಡಿನ ರಾಜ, ಆ ಸಿಂಹ ಯಾರೆಂದು ನಮಗೆಲ್ಲರಿಗೂ ತಿಳಿದಿದೆ' ಎಂದು ಸುದೀಪ್ ಅವರ ಫೋಟೋ ಇರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ಧನ್ವೀರ್ ಪೋಸ್ಟ್ಗೆ ವಿನಯ್ ಗೌಡ ಕೌಂಟರ್ ನೀಡಿದಂತೆಯೇ ಇದೆ, ಇಬ್ಬರೂ ಕಾಡಿನ ರಾಜ ಸಿಂಹ ಕುರಿತಾಗಿಯೇ ಹಂಚಿಕೊಂಡಿರುವ ಪೋಸ್ಟ್ಗಳು ಫ್ಯಾನ್ ವಾರ್ ಬೆಂಕಿಯನ್ನು ಧಗಧಗನೆ ಉರಿಯುವಂತೆ ಮಾಡಿವೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications